Advertisement

ದಾಸ ಶ್ರೇಷ್ಠ ಕನಕದಾಸರ ಜಯಂತಿ

04:18 PM Nov 27, 2018 | |

ಹೊಸಪೇಟೆ: ತಾಲೂಕು ಕುರುಬ ಸಮಾಜದಿಂದ ದಾಸಶ್ರೇಷ್ಠ ಕನಕದಾಸರ 531ನೇ ಜಯಂತಿ ನಿಮಿತ್ತ ನಗರದ ಕನಕದಾಸ
ವೃತ್ತದ ಕನಕದಾಸರ ಪುತ್ಥಳಿಗೆ ಸೋಮವಾರ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಲಾಯಿತು.

Advertisement

ಕನಕದಾಸ ವೃತ್ತದಲ್ಲಿ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಶಾಸಕ ಆನಂದ್‌ ಸಿಂಗ್‌ ಮಾತನಾಡಿ, ದಾಸರಲ್ಲಿಯೇ ಶ್ರೇಷ್ಠವಾದವರು ಕನಕದಾಸರು. ಅವರ ಪದ್ಯ, ಕೀರ್ತನೆಗಳು ಪ್ರಸ್ತುತ ಜೀವನಕ್ಕೂ ಅನ್ವಯವಾಗಿದೆ. ಅವರ ಆದರ್ಶ ತತ್ವ ಗುಣಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ತಾಲೂಕು ಕುರುಬ ಸಂಘದ ಅಧ್ಯಕ್ಷ ಜಿ. ಭರಮನಗೌಡ ಮಾತನಾಡಿ, ಕನಕದಾಸರು ಕೇವಲ ಒಂದು ಜಾತಿಗೆ ಸೀಮಿತರಾದವರಲ್ಲ. ಅವರು ಇಡೀ ಮನುಕುಲಕ್ಕೆ ಆದರ್ಶಪ್ರಾಯವಾಗಿದ್ದಾರೆ. ವರ್ಣ, ಜಾತಿ ಪದ್ಧತಿ ವಿರುದ್ಧ ಆಗಿನ ಕಾಲದಲ್ಲಿ ತಮ್ಮ ಕೀರ್ತನೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು ಎಂದು ಹೇಳಿದರು.

ಹುಡಾ ಮಾಜಿ ಅಧ್ಯಕ್ಷ ಆರ್‌. ಕೊಟ್ರೇಶ್‌, ಎಲ್‌. ಸಿದ್ಧನಗೌಡ, ಅಯ್ನಾಳಿ ತಿಮ್ಮಪ್ಪ, ಮುಖಂಡರಾದ ಕೆ.ಎಂ. ಹಾಲಪ್ಪ, ಡಿ. ಚಂದ್ರಶೇಖರ್‌, ಡಿ. ಚೆನ್ನಪ್ಪ, ನಗರಸಭೆ ಸದಸ್ಯರಾದ ರಾಮಚಂದ್ರಗೌಡ, ಚಿದಾನಂದ, ಕೆ. ರವಿಕುಮಾರ್‌, ಎಚ್‌. ಮಹೇಶ್‌, ಧರ್ಮೇಂದ್ರ ಸಿಂಗ್‌, ಸಂದೀಪ್‌ ಸಿಂಗ್‌, ಎಲ್‌.ಎಸ್‌. ಆನಂದ, ತಿಪ್ಪೇಸ್ವಾಮಿ, ದಲ್ಲಾಲಿ ಕುಬೇರ, ಪ್ರಕಾಶ್‌ ಕಾಕುಬಾಳು, ಬಂದಿ ಭರಮಪ್ಪ, ಗೌರಿ ಶಂಕರ್‌ ಬಣಕಾರ, ದೇವರಮನೆ ರವಿಶಂಕರ್‌, ಗಂಟಿ ಸೋಮಶೇಖರ್‌, ಮೃತ್ಯುಂಜಯ, ಚಂದ್ರಕಾಂತ್‌, ಬಿಸಾಟಿ
ಸತ್ಯನಾರಾಯಣ ಸೇರಿದಂತೆ ಸಮಾಜದ ಮುಖಂಡರು ಇದ್ದರು.

ಪಿಕೆ ಹಳ್ಳಿ: ತಾಲೂಕಿನ ಪಾಪಿನಾಯಕನಹಳ್ಳಿ ಗ್ರಾಮದಲ್ಲಿ ಕನಕದಾಸರ 531ನೇ ಜಯಂತಿ ಆಚರಿಸಲಾಯಿತು. ಗ್ರಾಪಂ ಅಧ್ಯಕ್ಷೆ ರಾಧಾ ಚಂದ್ರಶೇಖರ್‌, ಮುಖಂಡರಾದ ಕೆ.ತಿಪ್ಪೇಸ್ವಾಮಿ, ಅಂಕ್ಲಪ್ಪ, ಮಲ್ಲೇಶ್‌, ತಿಪ್ಪೇಶ್‌, ಹನುಮಂತ, ಎನ್‌.ತಿಪ್ಪೇಸ್ವಾಮಿ, ರಾಮು, ಪಂಪಾ ಪತಿ,, ಶಶೀಧರ್‌,ಜಂಬಯ್ಯ, ಮುರಾರಿ ಇತರರಿದ್ದರು. ತಾಲೂಕಿನ ಕಾಕುಬಾಳು, ಮಲಪನಗುಡಿ, ಹೊಸಮಲನಗುಡಿ, ಬೈಲುವದ್ದಿಗೇರಿ ಸೇರಿದಂತೆ ಕಡೆಗಳಲ್ಲಿ ಕನಕದಾಸರ ಜಯಂತಿ ಆಚರಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next