17 ಓವರ್‌ಗಳಿಗೆ ಸೀಮಿತಗೊಂಡ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾ 3 ವಿಕೆಟಿಗೆ 202 ರನ್ ಗಳಿಸಿದರೆ, ಐರ್ಲೆಂಡ್ 9 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಲಷ್ಟೇ ಶಕ್ತವಾಯಿತು.
Advertisement
83 ರನ್ ಬಾರಿಸಿದ ಲಿಟನ್ ದಾಸ್ ಮತ್ತು 22ಕ್ಕೆ 5 ವಿಕೆಟ್ ಉರುಳಿಸಿದ ಶಕಿಬ್ ಅಲ್ ಹಸನ್ ಬಾಂಗ್ಲಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಚೇಸಿಂಗ್ ವೇಳೆ ಐರ್ಲೆಂಡ್‌ನ ಕೆಳ ಸರದಿಯ ಆಟಗಾರ ಕರ್ಟಿಸ್ ಕ್ಯಾಂಫರ್ ಅವರದು ಏಕಾಂಗಿ ಹೋರಾಟವಾಗಿತ್ತು. ಅವರು 30 ಎಸೆತಗಳಿಂದ 50 ರನ್ (3 ಬೌಂಡರಿ, 3 ಸಿಕ್ಸರ್) ಹೊಡೆದರು.ಮೊದಲ ಪಂದ್ಯವನ್ನು ಬಾಂಗ್ಲಾದೇಶ 22 ರನ್ನುಗಳಿಂದ ಜಯಿಸಿತ್ತು.