Advertisement

2ನೇ ಟೆಸ್ಟ್: ಇಂಗ್ಲೆಂಡ್‌ ವಿರುದ್ಧ ಆಲ್‌ರೌಂಡರ್‌ ಡ್ಯಾರಿಲ್‌ ಮಿಚೆಲ್‌ ಅಮೋಘ 190

11:17 PM Jun 11, 2022 | Team Udayavani |

ನಾಟಿಂಗ್‌ಹ್ಯಾಮ್‌: ಆಲ್‌ರೌಂಡರ್‌ ಡ್ಯಾರಿಲ್‌ ಮಿಚೆಲ್‌ ಅವರ ಜೀವನಶ್ರೇಷ್ಠ 190 ರನ್‌ ಹಾಗೂ ಟಾಮ್‌ ಬ್ಲಿಂಡೆಲ್‌ ಅವರ 106 ರನ್‌ ಸಾಹಸದಿಂದ ಇಂಗ್ಲೆಂಡ್‌ ಎದುರಿನ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ 553 ರನ್‌ ಪೇರಿಸಿದೆ.

Advertisement

ಡ್ಯಾರಿಲ್‌ ಮಿಚೆಲ್‌ 318 ಎಸೆತ ನಿಭಾಯಿಸಿ ಅಮೋಘ ಇನ್ನಿಂಗ್ಸ್‌ ಕಟ್ಟಿದರು. ಇದರಲ್ಲಿ 23 ಬೌಂಡರಿ ಹಾಗೂ 4 ಸಿಕ್ಸರ್‌ ಸೇರಿತ್ತು. ಇದು ಅವರ 3ನೇ ಹಾಗೂ ಸತತ 2ನೇ ಶತಕ.

ಲಾರ್ಡ್ಸ್‌ ಟೆಸ್ಟ್‌ ಪಂದ್ಯದಲ್ಲೂ ಅವರು ಸೆಂಚುರಿ ಬಾರಿಸಿದ್ದರು. ದ್ವಿಶತಕದ ಹಾದಿಯಲ್ಲಿದ್ದ ಮಿಚೆಲ್‌ ಅಂತಿಮ ವಿಕೆಟ್‌ ರೂಪದಲ್ಲಿ ಪೆವಿಲಿಯನ್‌ ಸೇರಿಕೊಂಡರು.

ಕೀಪರ್‌ ಟಾಮ್‌ ಬ್ಲಿಂಡೆಲ್‌ ಅವರ 106 ರನ್‌ 198 ಎಸೆತಗಳಿಂದ ಬಂತು (14 ಬೌಂಡರಿ).

Advertisement

Udayavani is now on Telegram. Click here to join our channel and stay updated with the latest news.

Next