Advertisement

Bellary Jail ಸಿಬಂದಿ ವಿರುದ್ಧ ಆಯೋಗಕ್ಕೆ ದರ್ಶನ್‌ ದೂರು?

11:39 PM Sep 19, 2024 | Team Udayavani |

ಬಳ್ಳಾರಿ: ಜೈಲಿನಲ್ಲಿರುವ ದರ್ಶನ್‌ ಕೇಳುವ ಸೌಲಭ್ಯಗಳನ್ನು ನೀಡದ ಹಿನ್ನೆಲೆಯಲ್ಲಿ ಜೈಲಧಿಕಾರಿಗಳ ವಿರುದ್ಧ ದರ್ಶನ್‌ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

Advertisement

ಬಳ್ಳಾರಿ ಜೈಲಿನಲ್ಲಿ 23 ದಿನಗಳಿಂದ ಸೆರೆವಾಸದಲ್ಲಿರುವ ದರ್ಶನ್‌ಗೆ, ಈಗಾಗಲೇ ಹಲವು ಬೇಡಿಕೆ ಈಡೇರಿ ಸಲಾಗಿದೆ. ಇದೀಗ ಇನ್ನೂ ಕೆಲವನ್ನು ನೀಡುವಂತೆ ಜೈಲಧಿಕಾರಿಗಳ ಬಳಿ ಪುನಃ ಬೇಡಿಕೆ ಇಟ್ಟಿದ್ದಾರೆ. ಈ ಸೌಲಭ್ಯಗಳನ್ನು ನೀಡಬೇಕೋ ಬೇಡವೋ ಎಂಬ ಜಿಜ್ಞಾಸೆಯಲ್ಲಿ ಜೈಲಧಿಕಾರಿಗಳು ಇದ್ದಾರೆ.

ಆದರೆ, ಸೌಲಭ್ಯ ನೀಡದೆ ಜೈಲಧಿಕಾರಿಗಳು ಮಾನವ ಹಕ್ಕುಗಳನ್ನು ಉಲ್ಲಂಘಿಸಿದ್ದಾರೆಂದು ಆರೋಪಿಸಿ ದರ್ಶನ್‌ ಪರ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಇದರಿಂದ ದರ್ಶನ್‌ಗೆ ಸೌಲಭ್ಯ ನೀಡುವಲ್ಲಿ ಜೈಲಧಿಕಾರಿ, ಸಿಬಂದಿ ಎಚ್ಚರಿಕೆಯ ನಡೆ ಇಡುತ್ತಿದ್ದಾರೆ.

ಆರೋಪಿ ದರ್ಶನ್‌ ಕೇಳಿದ್ದ ಎಲ್ಲ ಸೌಲಭ್ಯ ಕೊಟ್ಟರೆ ಇಲಾಖೆ, ಸರಕಾರದಿಂದ ತಲೆದಂಡವಾಗಲಿದೆ. ನೀಡದಿದ್ದಲ್ಲಿ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಲು ಮುಂದಾಗಿರುವ ದರ್ಶನ್‌ ಕುಟುಂಬದ ಕೆಂಗಣ್ಣಿಗೆ ಗುರಿಯಾಗುವ ಆತಂಕ ಜೈಲಧಿಕಾರಿಗಳನ್ನು ಕಾಡುತ್ತಿದೆ. ಈ ನಡುವೆ ಈ ವಾರದಲ್ಲಿಯೇ ದರ್ಶನ್‌ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಮೊದಲ ಬಾರಿಗೆ ಜೈಲಿಗೆ ಬಂದ ತಾಯಿ ಮೀನಾ
ಬಳ್ಳಾರಿ: ಇಲ್ಲಿನ ಸೆಂಟ್ರಲ್‌ ಜೈಲಿನಲ್ಲಿರುವ ನಟ ದರ್ಶನ್‌ನನ್ನು ತಾಯಿ ಮೀನಾ ತೂಗುದೀಪ, ಅಕ್ಕ ದಿವ್ಯಾ, ಬಾವ ಮಂಜುನಾಥ, ಅಕ್ಕನ ಮಕ್ಕಳಾದ ರವಿಚಂದ್ರ, ಇಂದ್ರಕುಮಾರ್‌ ಸೇರಿ ಐವರು ಮೊದಲ ಬಾರಿಗೆ ಗುರುವಾರ ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದರು.

Advertisement

ಜೈಲಿನಲ್ಲಿರುವ ದರ್ಶನ್‌ನನ್ನು ಕಂಡ ತಾಯಿ ಮೀನಾ ತೂಗುದೀಪ ಸೇರಿ ಸಂಬಂ ಧಿಕರು ಭಾವುಕರಾಗಿದ್ದು, ದರ್ಶನ್‌ ಸಮಾಧಾನಪಡಿಸಿದರು.

ಕೆಲವು ದಿನಗಳಲ್ಲೇ ಜೈಲಿನಿಂದ ಹೊರಬರುವೆ ಎಂದು ಆಶಾಭಾವ ವ್ಯಕ್ತಪಡಿಸಿದ್ದಾರೆ. ಸುಮಾರು ಅರ್ಧ ಗಂಟೆಗಳ ಕಾಲ ಕುಟುಂಬಸ್ಥರೊಂದಿಗೆ ಮಾತನಾಡಿದರು. ತಾಯಿ ಮೀನಾ ಮೊದಲ ಬಾರಿಗೆ ದರ್ಶನ್‌ ನೋಡಲು ಬಂದಿದ್ದು, ಹಲವು ದಿನಗಳಿಂದ ತಾಯಿ ಬಂದಿಲ್ಲ ಎಂಬ ಕೊರಗು ದರ್ಶನ್‌ಗೆ ನೀಗಿದಂತಾಗಿದೆ. ಇದರಿಂದ ಸೆಲ್‌ಗೆ ವಾಪಸ್‌ ತೆರಳುವಾಗ ದರ್ಶನ್‌ ಮಂದಹಾಸ ಬೀರುತ್ತಲೇ ತೆರಳಿದರು.

ಬೆಡ್‌, ದಿಂಬು, ಚೇರ್‌ಗೆ ಬೇಡಿಕೆ
ದರ್ಶನ್‌ಗೆ ಟಿವಿ ಸೇರಿ ಹಲವು ಸೌಲಭ್ಯ ನೀಡಲಾಗಿದೆ. ಮಲಗಲು ಬೆಡ್‌, ದಿಂಬು, ಕೂರಲು ಕುರ್ಚಿ ನೀಡುವಂತೆ ಜೈಲ ಧಿಕಾರಿಗಳ ಬಳಿ ಬೇಡಿಕೆ ಇಟ್ಟಿದ್ದಾರೆ. ಆದರೆ, ಜೈಲ ಧಿಕಾರಿಗಳು ನ್ಯಾಯಾಲಯದಿಂದ ಅನುಮತಿ ಪಡೆದಲ್ಲಿ ಮಾತ್ರ ನೀಡುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next