Advertisement

“ಮಕ್ಕಳ ದಿನಾಚರಣೆ’ಗೆ ದರ್ಶನ್ ಸಂದೇಶ

04:37 PM Nov 14, 2018 | |

ಇಂದು “ಮಕ್ಕಳ ದಿನಾಚರಣೆ’ಯ ಪ್ರಯುಕ್ತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಎಲ್ಲ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಶುಭಾಶಯ ತಿಳಿಸಿ, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡಬೇಕು ಎಂದು ಕರೆ ನೀಡಿದ್ದಾರೆ. ಈ ಮೂಲಕ ಮಕ್ಕಳ ರಕ್ಷಣೆಗೆ ಮುಂದಾಗಿ ಎಂದು ಜನತೆಯಲ್ಲಿ ಸಂದೇಶವನ್ನು ಕೋರಿದ್ದಾರೆ.

Advertisement

ಹೌದು! ನಟ ದರ್ಶನ್ ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿದ್ದು, ಬಾಲ ಕಾರ್ಮಿಕ ಪದ್ಧತಿ ತೊಲಗಿಸಬೇಕು ಎಂದು ಕರೆ ನೀಡಿದ್ದಾರೆ. ಅಲ್ಲದೇ ಮಕ್ಕಳ ಜತೆ ನಿಂತಿರುವ ಫೋಟೋ ಪೋಸ್ಟ್​ ಮಾಡಿರುವ ಅವರು, “ಎಲ್ಲಾ ಮಕ್ಕಳಿಗೂ, ಮಕ್ಕಳ ಮನಸ್ಸುಳ್ಳವರಿಗೂ ಮಕ್ಕಳ ದಿನಾಚರಣೆಯ ಹಾರ್ಧಿಕ ಶುಭಾಶಯಗಳು. ಬಾಲಕಾರ್ಮಿಕ ಪದ್ಧತಿಯನ್ನು ನಮ್ಮ ದೇಶದಿಂದ ನಿರ್ಮೂಲನೆ ಮಾಡಲು ಎಲ್ಲರೂ ಕೈಜೋಡಿಸಿ ಮಕ್ಕಳಿಗೆ ಉಜ್ವಲವಾದ ಭವಿಷ್ಯವನ್ನು ರೂಪಿಸಿಕೊಡುವಲ್ಲಿ ಸಾಧ್ಯವಾದಷ್ಟು ಶ್ರಮಿಸಬೇಕು’ ಎಂದು ದರ್ಶನ್ ಬರೆದುಕೊಂಡಿದ್ದಾರೆ.

ಇನ್ನು ದರ್ಶನ್ ಅವರ ಈ ಟ್ವೀಟ್‍ಗೆ ಅಭಿಮಾನಿಗಳು, “ಹೌದು ಬಾಸ್. ಹಾಗೆಯೇ ವಾಟ್ಸಾಪ್ ನಲ್ಲಿ ಕಾಲಹರಣ ಮಾಡುವ ಯುವಸಹೃದಯಿಗಳು ವಾಟ್ಸಾಪಿನಲ್ಲಿ ಸಮಾಜ ಸೇವೆಯ ಗ್ರೂಪ್ ಮಾಡಿಕೊಂಡು ಬಡವರ ಕಣ್ಣೀರೊರೆಸುವ ಕೆಲಸ ಮಾಡಬಹುದು ಹಾಗೂ ವಿದ್ಯಾವಂತ ಬಡ ಮಕ್ಕಳ ಕಲಿಕೆಗೆ ಅನುಕೂಲವಾಗುವಂತೆ ವಿದ್ಯಾರ್ಥಿವೇತನ ನೀಡಿದರೆ ಬಡವರ ಮಕ್ಕಳ ಬೆನ್ನೆಲುಬಾಗಿ ನಿಲ್ಲಬಹುದು’ ಎಂದು ಪ್ರತಿಕ್ರಿಯಿಸಿದರು.

Advertisement

ಸದ್ಯಕ್ಕೆ ದರ್ಶನ್​ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದು, “ಯಜಮಾನ’ ಚಿತ್ರದ ಶೂಟಿಂಗ್ ಬಿರುಸಿನಿಂದ ಸಾಗುತ್ತಿದೆ. ಅವರ 53ನೇ ಚಿತ್ರಕ್ಕೆ “ರಾಬರ್ಟ್​​’ ಎನ್ನುವ ಹೆಸರನ್ನಿಟ್ಟಿದ್ದು, ಪ್ರಜ್ವಲ್ ದೇವರಾಜ್​ ಅಭಿನಯದ “ಇನ್​ಸ್ಪೆಕ್ಟರ್​ ವಿಕ್ರಂ’ ಚಿತ್ರದಲ್ಲೂ ದರ್ಶನ್​ ಕಾಣಿಸಿಕೊಳ್ಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next