Advertisement

ಇಂದಿನಿಂದ ಭಕ್ತ ರಿಗೆ ಶರಣರ ದರ್ಶನ

08:48 PM Jul 05, 2021 | Team Udayavani |

ಕಲಬುರಗಿ: ಈ ಭಾಗದ ಆರಾಧ್ಯದೈವ, ತ್ಯಾಗದ ಸಂಕೇತ, ಮಹಾದಾಸೋಹಿ ಶರಣಬಸವೇಶ್ವರ ದೇಗುಲವು ಸೋಮವಾರದಿಂದ ಭಕ್ತರ ದರ್ಶನಕ್ಕಾಗಿ ತೆರೆಯಲಿದೆ. ದೇವಾಲಯದ ಸ್ವಯಂ ಸೇವಕರು ಮತ್ತು ಸಿಬ್ಬಂದಿ ದೇವಾಲಯ ಮತ್ತು ಸುತ್ತಮುತ್ತಲಿನ ಪ್ರದೇಶ ಮತ್ತು ಶರಣ ಬಸವೇಶ್ವರ ದೇಗುಲದ ವಿಸ್ತಾರವಾದ ಸಂಕೀರ್ಣದಲ್ಲಿಯೂ ಸ್ವತ್ಛತೆ ಕಾರ್ಯ ಕೈಗೊಂಡಿದ್ದಾರೆ.

Advertisement

ಕೋವಿಡ್‌-19 ಎರಡನೇ ಅಲೆ ಸಂದರ್ಭದಲ್ಲಿ ರಾಜ್ಯ ಸರಕಾರ ಹೇರಿದ ನಿರ್ಬಂಧನೆಗಳನ್ನು ಅನುಸರಿಸಿ ಏಪ್ರಿಲ್‌ 23 ರಿಂದ ದರ್ಶನ ಭಾಗ್ಯ ನಿಲ್ಲಿಸಲಾಗಿತ್ತು. ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾ ದಾಸೋಹ ಪೀಠಾ ಧಿಪತಿಗಳಾದ ಪೂಜ್ಯ ಡಾ| ಶರಣಬಸವಪ್ಪ ಅಪ್ಪ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್‌ ರಾದ ಮಾತೋಶ್ರೀ ಡಾ| ದಾûಾಯಿಣಿ ಅವ್ವ ಅವರು, ರಾಜ್ಯ ಸರಕಾರವು ವಿ ಧಿಸಿರುವ ಎಲ್ಲಾ ಷರತ್ತುಗಳನ್ನು ಕಟ್ಟುನಿಟ್ಟಾಗಿ ಅನು ಸರಿಸಲಾಗುವುದು ಎಂದಿದ್ದಾರೆ.

ಭಕ್ತರು ಮಾಸ್ಕ್ ಧರಿಸುವುದು, ಸ್ಯಾನಿಟೈಸ್‌ ಗೊಳಿಸಿ ಕೊಳ್ಳುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ ಎಂದಿದ್ದಾರೆ. ಪೂಜ್ಯ ಡಾ| ಅಪ್ಪ ಮತ್ತು ಮಾತೋಶ್ರೀ ಡಾ| ಅವ್ವ ಭಕ್ತರಿಗೆ ಶರಣ ಬಸವೇಶ್ವರರ ದರ್ಶನಾಶೀರ್ವಾದ ಪಡೆಯಲು ಮತ್ತು ದೇಗುಲಕ್ಕೆ ಭೇಟಿ ನೀಡುವಾಗ ಸರಕಾರ ನಿಗದಿಪಡಿಸಿದ ಮಾನದಂಡಗಳನ್ನು ಉಲ್ಲಂಘಿ ಸಬಾರದು. ದೇವಾಲಯದಲ್ಲಿ ಅ ಧಿಕಾರಿ ಗಳೊಂದಿಗೆ ಸಹಕರಿಸಿ ಭಕ್ತರ ಸುರಕ್ಷತೆಗಾಗಿ ಎಲ್ಲರೂ ಕೈಜೋಡಿಸಬೇಕು ಎಂದು ತಿಳಿಸಿದ್ದಾರೆ. ಇಡೀ ದೇವಾಲಯ ಸಂಕೀರ್ಣ ಮತ್ತು ದೇವಾಲಯವನ್ನು ಸ್ವಯಂಸೇವಕರು ಮತ್ತು ದೇಗುಲದ ಸಿಬ್ಬಂದಿಗಳು ಸ್ವತ್ಛತೆ ಕಾರ್ಯ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next