Advertisement

ಧರ್ಮದ ಜಾಗೃತಿಗಾಗಿ ಬಾಲಕಿಯರಿಗೆ ಧರ್ಮೋಪದೇಶ

11:35 AM Oct 14, 2017 | Team Udayavani |

ಸುಳ್ಯ: ಧರ್ಮದ ಆಚರಣೆ ಮನೆಮನೆಗಳಲ್ಲಾಗಬೇಕು. ಜಾತಿ-ಧರ್ಮ, ಹೆಣ್ಣು-ಗಂಡು ಎಂಬ ಭೇದವಿಲ್ಲದೆ ಎಲ್ಲರೂ ಸಂಸ್ಕಾರವಂತರಾಗಬೇಕು ಎಂಬ ಉದ್ದೇಶದಿಂದ ಸುಳ್ಯ ಸಮೀಪದ ಅಜ್ಜಾವರ ಚೈತನ್ಯ ಆಶ್ರಮದಲ್ಲಿ ಬಾಲಕಿಯರಿಗೂ ಧರ್ಮೋಪದೇಶ ನೀಡಲಾಗುತ್ತಿದೆ. ಕುವರಿಯರು ಮಾತೃಸ್ವರೂಪಿಗಳು. ಅವರಿಗೆ ಧರ್ಮೋಪನಯನ ಸಂಸ್ಕಾರ ನೀಡುವುದರಿಂದ ಅವರ ಬ್ರಹ್ಮಚರ್ಯ ಜೀವನದಲ್ಲಿ ನೈತಿಕ ಮನೋಬಲ ವೃದ್ಧಿಯಾಗುತ್ತದೆ. ಆಕೆಗೆ ಅವಳಂತಹ ಗಂಡು ದೊರೆತರೆ ಮುಂದೆ ಹುಟ್ಟುವ ಮಗು ಮತ್ತಷ್ಟು ಸದ್ಗುಣ, ಸಂಸ್ಕಾರವಂತವಾಗಿ ಜನಿಸುತ್ತದೆ. ಒಂದು ಕುಟುಂಬದ ಮಹಿಳೆ ಆದರ್ಶವಾದಂತೆ ಒಂದು ಧರ್ಮ ಸಂಘಟನೆಯ ಕೇಂದ್ರವಾಗುತ್ತದೆ. ಇದೇ ರೀತಿ ಹೆಚ್ಚು ನಡೆದಂತೆ ಸಮಾಜವೇ ಪರಿವರ್ತನೆಯಾದಂತೆ ಎಂಬುದು ಆಶ್ರಮದ ಶ್ರೀ ಸ್ವಾಮಿ ಯೋಗೇಶ್ವರಾನಂದ ಸರಸ್ವತಿ ಅವರ ಅಭಿಮತ.

Advertisement

ಮಂತ್ರೋಪದೇಶದಲ್ಲಿ ಏನಿದೆ?
ಬಾಲಕಿಯರಿಗೆ ಗಾಯತ್ರಿ ಮಂತ್ರೋಪದೇಶ ಸಹಿತ ಪ್ರಾಣಾಯಾಮ, ಇಷ್ಟ ದೇವರ ಬೀಜಾಕ್ಷರಿ ಸಹಿತ ನಾಮಾರ್ಚನೆ ಮಾಡಲು ತಿಳಿಸಿಕೊಡಲಾಗುತ್ತದೆ. ಮಾಂಸಾಹಾರಿಗಳಿಗೂ ಈ ಆಚರಣೆಗೆ ಅಡ್ಡಿಯಿಲ್ಲ ಇದು ಋಷಿ
ಪರಂಪರೆಯ ಪದ್ಧತಿ. ನನ್ನಿಂದ ಉಪದೇಶ ಪಡೆದುಕೊಂಡಿದ್ದವರೂ ಈಗಲೂ ಮುಂದುವರಿಸುತ್ತಿದ್ದಾರೆ ಎನ್ನುತ್ತಾರೆ ಸ್ವಾಮೀಜಿ.

ಕಳೆದ ಬಾರಿ ಒಕ್ಕಲಿಗ ಸಮುದಾಯದ ಓರ್ವ ಬಾಲಕಿಗೆ ಮಂತ್ರೋಪದೇಶ ನೀಡಿದ್ದೆ. ಈ ಬಾರಿ ನವರಾತ್ರಿ ಸಂದರ್ಭ ಒಕ್ಕಲಿಗ ಸಮುದಾಯದ ಇಬ್ಬರು ಬಾಲಕಿಯರಿಗೆ ನೀಡಿದ್ದೇನೆ. ನನ್ನನ್ನು ಅರಸಿ ಬಂದ ಮೇಲ್ವರ್ಗ ಸಹಿತ ಎಲ್ಲ ಸಮುದಾಯಗಳ ಮಹಿಳೆಯರಿಗೂ ಪುರುಷರಿಗೂ ಮಂತ್ರೋಪದೇಶ ನೀಡಿದ್ದೇನೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.

ಮದ್ಯ, ಧೂಮಪಾನದಿಂದ ಮುಕ್ತಿ
ಪ್ರಾಣಾಯಾಮ ಮತ್ತು ಯೋಗ ಸಾಧನೆಯ ಮೂಲಕ ಬಂಟ್ವಾಳದ‌ ಚೈನ್‌ಸ್ಮೋಕರ್‌ ಓರ್ವ ರನ್ನು ಒಂದೇ ತಿಂಗಳಲ್ಲಿ ಧೂಮಪಾನದಿಂದ ಮುಕ್ತ ಗೊಳಿಸಿದ್ದಾರೆ. ಬಳಿಕ ಆ ವ್ಯಕ್ತಿ ಸಾಧನೆ ಮಾಡಿ ಚಿನ್ನದ ಪದಕ ಪಡೆದಿದ್ದಾರೆ. ಇದೇ ರೀತಿ ಮದ್ಯಪಾನ ಚಟದಿಂದ ಮುಕ್ತರಾದವರೂ ಇದ್ದಾರೆ.

ಯಾರಿವರು ಸ್ವಾಮೀಜಿ?
ಸ್ವಾಮಿ ಯೋಗೇಶ್ವರಾನಂದ ಸರಸ್ವತಿ ಅವರ ಪೂರ್ವಜರು ಹಿಂದಿನ ಅಡ³ಂಗಾಯ ಶ್ರೀ ದುರ್ಗಾಪರಮೇಶ್ವರೀ ಮಠದ ಪಾರುಪತ್ಯೆದಾರ ಮನೆತನದವರು. ಪೂರ್ವಾಶ್ರಮದ ಹೆಸರು ಶ್ರೀಕಾಂತ ಸ್ವಾಮೀಜಿ. ಅಧ್ಯಾತ್ಮ ಮಾತ್ರವಲ್ಲದೇ, ಯೋಗ, ಜೋತಿಷ, ಆಂಗಿಕ ಶಾಸ್ತ್ರ ಸಹಿತ ಹಲವಾರು ವಿದ್ಯೆಗಳಲ್ಲಿ ಪಾರಂಗತರು. ಟಿಸಿಎಚ್‌, ಬಿಎ, ಸಮಾಜಶಾಸ್ತ್ರ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next