Advertisement

‘ಲವ್ ಮಿ or ಹೇಟ್ ಮಿ’ ಅಂತಾ ರಚಿತಾ ಹಿಂದೆ ಬಿದ್ದ ಡಾರ್ಲಿಂಗ್ ಕೃಷ್ಣ

02:16 PM May 28, 2021 | Team Udayavani |

ಬೆಂಗಳೂರು : ಡಾರ್ಲಿಂಗ್ ಕೃಷ್ಣ ಹಾಗು ಡಿಂಪಲ್ ಕ್ವೀನ್ ರಚಿತಾ ರಾಮ್ ಒಟ್ಟಿಗೆ ಸಿನಿಮಾ ಮಾಡಲಿದ್ದಾರೆ ಎನ್ನುವ ಟಾಕ್ ಗಾಂಧಿ ನಗರದಲ್ಲಿ ಕೇಳಿ ಬಂದಿತ್ತು. ಇದೀಗ ಅದು ಕನ್ಫರ್ಮ ಆಗಿದ್ದು ಟೈಟಲ್ ಕೂಡ ಅನೌನ್ಸ್ ಮಾಡಲಾಗಿದೆ.

Advertisement

ಲವ್ ಮಾಕ್ ಟೆಲ್ ಗ್ರ್ಯಾಂಡ್ ಸಕ್ಸಸ್ ಬಳಿಕ ಡಾರ್ಲಿಂಗ್ ಕೃಷ್ಣ ಅವರ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಸಿನಿ ಪ್ರೇಮಿಗಳಲ್ಲಿ ಮೂಡಿತ್ತು. ಲವ್ ಮಾಕ್ಟೆಲ್ ಸಿನಿಮಾ ಬಳಿಕ ತಮ್ಮ ಪ್ರಿಯತಮೆ ಮಿಲನಾ ನಾಗರಾಜ ಜೊತೆ ಹಸೆಮಣೆ ಏರಿದ ಅವರು, ಮದುವೆ ನಂತರ ಲೈಫ್ ಏಂಜಾಯ್ ಮಾಡುತ್ತಿದ್ದಾರೆ. ಇದೀಗ ಮತ್ತೆ ಸಿನಿ ಲೈಫ್ ಗೆ ವಾಪಾಸ್ ಆಗಿದ್ದು, ತಮ್ಮ ಮುಂದಿನ ಸಿನಿಮಾ ಬಗ್ಗೆ ಹೇಳಿಕೊಂಡಿದ್ದಾರೆ.

‘ಲವ್ ಮಿ or ಹೇಟ್ ಮಿ’

ಇದು ಡಾರ್ಲಿಂಗ್ ಕೃಷ್ಣ ಅವರ ಮುಂದಿನ ಸಿನಿಮಾ ಟೈಟಲ್. ಈ ಚಿತ್ರದಲ್ಲಿ ಚೆಂದನವನದ ಗುಳಿಕೆನ್ನೆ ಹುಡುಗಿ ರಚಿತಾ ರಾಮ್ ನಾಯಕಿಯಾಗಿ ನಟಿಸಲಿದ್ದಾರೆ. ಲಾಕ್ ಡೌನ್ ಮುಗಿದ ಮೇಲೆ ಸಿನಿಮಾ ಶೂಟಿಂಗ್ ಶುರುವಾಗುವ ಸಾಧ್ಯತೆ ಇದೆ. ಈ ಚಿತ್ರದ ಶಿರ್ಷಿಕೆ ಗಮನಿಸುವುದಾದರೆ ಇದೊಂದು ಪಕ್ಕಾ ಲವ್ ಸ್ಟೋರಿ ಕಥೆ ಹೊಂದಿದೆ ಎನ್ನುವುದು ಸಿನಿರಸಿಕರ ಊಹೆಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next