Advertisement

Darling Krishna; ಶುಗರ್ ಫ್ಯಾಕ್ಟರಿಯಲ್ಲಿ ಹಾಡು ಹಬ್ಬ

03:57 PM Oct 17, 2023 | Team Udayavani |

ದೀಪಕ್‌ ಅರಸ್‌ ನಿರ್ದೇಶನದಲ್ಲಿ ಡಾರ್ಲಿಂಗ್‌ ಕೃಷ್ಣ ನಾಯಕರಾಗಿ ನಟಿಸಿರುವ ಶುಗರ್‌ ಫ್ಯಾಕ್ಟರಿ ಚಿತ್ರಕ್ಕಾಗಿ ಜಯಂತ್‌ ಕಾಯ್ಕಿಣಿ ಅವರು “ಜಹಾಪನಾ..’ ಎಂಬ ಸುಮಧುರ ಪ್ರೇಮಗೀತೆ ಬರೆದಿದ್ದಾರೆ. ಇತ್ತೀಚೆಗೆ ಈ ಹಾಡು ಆನಂದ್‌ ಆಡಿಯೋ ಮೂಲಕ ಬಿಡುಗಡೆಯಾಗಿದೆ.

Advertisement

ನಿಹಾಲ್‌ ತಾವ್ರೊ ಹಾಗೂ ಅಮೃತಾ ನಾಯಕ್‌ ಅವರ ಕಂಠಸಿರಿಯಲ್ಲಿ ಈ ಹಾಡು ಮಧುರವಾಗಿ ಮೂಡಿಬಂದಿದೆ. ಧನಂಜಯ್‌ ಅವರ ನೃತ್ಯ ನಿರ್ದೇಶನದಲ್ಲಿ ಡಾರ್ಲಿಂಗ್‌ ಕೃಷ್ಣ ಹಾಗೂ ಸೋನಾಲ್‌ ಮೊಂತೆರೊ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಕಬೀರ್‌ ರಫಿ ಸಂಗೀತ ನೀಡಿದ್ದಾರೆ.

ಈಗಾಗಲೇ ಶುಗರ್‌ ಫ್ಯಾಕ್ಟರಿ ಟ್ರೇಲರ್‌ ಎಲ್ಲರ ಮನಗೆದ್ದು, ಆಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ನವೆಂಬರ್‌ 24 ರಂದು ಬಹು ನಿರೀಕ್ಷಿತ ಈ ಚಿತ್ರ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

ಡಾರ್ಲಿಂಗ್‌ ಕೃಷ್ಣ ಅವರ ಸಿನಿಜರ್ನಿಯಲ್ಲೇ “ಶುಗರ್‌ ಫ್ಯಾಕ್ಟರಿ’ ಬಿಗ್‌ ಬಜೆಟ್‌ ಚಿತ್ರವೆಂದು ಹೇಳಲಾಗುತ್ತಿದೆ. ಆರ್‌. ಗಿರೀಶ್‌ ನಿರ್ಮಿಸಿರುವ ಈ ಚಿತ್ರದಲ್ಲಿ ಡಾರ್ಲಿಂಗ್‌ ಕೃಷ್ಣ ಅವರಿಗೆ ನಾಯಕಿಯರಾಗಿ ಸೋನಾಲ್‌ ಮೊಂತೆರೊ, ಅದ್ವಿತಿ ಶೆಟ್ಟಿ, ರುಹಾನಿ ಶೆಟ್ಟಿ ಕೃಷ್ಣ ಅವರಿಗೆ ನಾಯಕಿಯರಾಗಿ ನಟಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next