Advertisement

ಚಿಂಚೋಳಿ ಕ್ಷೇತ್ರಕ್ಕೆ ಕರಾಳ ದಿನ: ರವಿಶಂಕರರೆಡ್ಡಿ

06:52 AM Mar 07, 2019 | Team Udayavani |

ಚಿಂಚೋಳಿ: ಎರಡು ಸಲ ಶಾಸಕರಾಗಿ ಗೆಲುವು ಸಾಧಿಸಿ ಕೇವಲ ಹತ್ತು ತಿಂಗಳಲ್ಲಿಯೇ ಶಾಸಕ ಡಾ| ಉಮೇಶ ಜಾಧವ್‌ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಖಂಡನೀಯವಾಗಿದ್ದು, ಕ್ಷೇತ್ರದ ಮತದಾರರಿಗೆ ಕರಾಳ ದಿನವಾಗಿದೆ ಎಂದು ಜೆಡಿಎಸ್‌ ತಾಲೂಕು ಅಧ್ಯಕ್ಷ ರವಿಶಂಕರರೆಡ್ಡಿ ಮುತ್ತಂಗಿ ಡಾ| ಉಮೇಶ ಜಾಧವ್‌ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ರಾಜಕೀಯ ಇತಿಹಾಸದಲ್ಲಿಯೇ ಇದೊಂದು ದೊಡ್ಡ ಕರಾಳ ದಿನವಾಗಿದೆ. ಆಯ್ಕೆ ಮಾಡಿದ ಮತದಾರರ ಬೆನ್ನಿಗೆ ಚೂರಿ ಹಾಕಿ ಸ್ವಾರ್ಥ ರಾಜಕಾರಣಕ್ಕಾಗಿ ಮತ್ತು ಬಿಜೆಪಿ ಆಪರೇಶನ್‌ ಕಮಲಕ್ಕೆ ಒಳಗಾಗಿ ಜನರಿಗೆ ನೀಡಿದ ಆಶ್ವಾಸನೆ, ಭರವಸೆಗಳನ್ನು ಹುಸಿಗೊಳಿಸಿ ಬಿಜೆಪಿಗೆ ಸೇರ್ಪಡೆಗೊಳ್ಳುವ ಮೂಲಕ ಕ್ಷೇತ್ರದ ಜನತಗೆ ಅವಮಾನ ಮಾಡಿದ್ದಾರೆ ಎಂದರು.

ಚಿಂಚೋಳಿ ಮತಕ್ಷೇತ್ರಕ್ಕೆ ತನ್ನದೇ ರಾಜಕೀಯ ಇತಿಹಾಸವಿದೆ. ಮಾಜಿ ಮುಖ್ಯಮಂತ್ರಿ ದಿ| ವೀರೇಂದ್ರ ಪಾಟೀಲ ಎರಡು ಬಾರಿ ಮುಖ್ಯಮಂತ್ರಿಯಾಗಿ, ದಿ| ದೇವೇಂದ್ರಪ್ಪ ಘಾಳಪ್ಪ ಜಮಾದಾರ, ಮಾಜಿ ಸಚಿವ ವೈಜನಾಥ ಪಾಟೀಲ, ಮಾಜಿ ಶಾಸಕರಾದ ಎಂ. ವೀರಯ್ಯ ಸ್ವಾಮಿ, ಕೈಲಾಶನಾಥ ಪಾಟೀಲ ಈ ಕ್ಷೇತ್ರದಿಂದ ಪ್ರತಿನಿಧಿ ಸಿದ್ದಾರೆ. ಆದರೆ ಇಂತಹ ಕೆಟ್ಟ ನಿರ್ಧಾರ ಕೈಗೊಂಡಿರಲಿಲ್ಲ ಎಂದು ಹೇಳಿದರು. 

ರಾಮಣ್ಣ ಸುಂಕಾ, ವಾಮನರಾವ್‌ ಕೊರವಿ, ಮಗದುಮ್‌ ಟೇಲರ್‌, ಶಿವಕುಮಾರ ಸೇರಿಕಾರ, ಮಾಜೀದ ಪಟೇಲ ದಸ್ತಾಪುರ, ಮಹೆಬೂಬ ಶಾ, ಖದೀರ ಪಟೇಲ, ಪುರಸಭೆ ಸದಸ್ಯ ನಾಗೇಂದ್ರಪ್ಪ ಗುರಂಪಳ್ಳಿ, ವಿಜಯಕುಮಾರ ಶಾಬಾದಿ, ವಿಶ್ವನಾಥ ಬೀರನಳ್ಳಿ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next