Advertisement
ತವರಿನಂಗಳದಲ್ಲಿ ಗೆದ್ದು ಸಾಕಷ್ಟು ಅಂಕಗಳನ್ನು ಕೂಡಿಡು ವುದು ಪ್ರತಿಯೊಂದು ತಂಡದ ಲೆಕ್ಕಾಚಾರ ಹಾಗೂ ಯೋಜನೆ. ಇದಕ್ಕೆ ಆರ್‌ಸಿಬಿ ಕೂಡ ಹೊರತಲ್ಲ. ಇನ್ನೊಂದೆಡೆ ಕಳೆದ ಒಂಬತ್ತೂ ಐಪಿಎಲ್‌ಗಳಲ್ಲಿ ಸತತ ಕಳಪೆ ಪ್ರದರ್ಶನವನ್ನು ನೀಡುತ್ತ ಕೆಳ ಮಟ್ಟದಲ್ಲೇ ಉಳಿದ ಡೆಲ್ಲಿ ಡೇರ್‌ಡೆವಿಲ್ಸ್ ಈ ಬಾರಿ ಆರಂಭದಿಂದಲೇ ಗೆಲುವಿನ ಲಯ ಕಂಡುಕೊಳ್ಳುವ ಕಾರ್ಯತಂತ್ರ ರೂಪಿಸುವ ಹಾದಿಯಲ್ಲಿದೆ.
ಸದ್ಯ ಎರಡೂ ತಂಡಗಳು ಒಂದೇ ದೋಣಿಯಲ್ಲಿ ಪಯ ಣಿಸುತ್ತಿವೆ. ಸಾಲು ಸಾಲು ಗಾಯಾಳು ಆಟಗಾರರಿಂದ ಈ ತಂಡಗಳು ತತ್ತರಿಸಿವೆ. ಬೆಂಗಳೂರಂತೂ ನಾಯಕನೇ ಇಲ್ಲದ ತಂಡವಾಗಿದೆ. ವಿರಾಟ್ ಕೊಹ್ಲಿ, ಇವರ ಗೈರಲ್ಲಿ ತಂಡವನ್ನು ಮುನ್ನಡೆಸಬೇಕಿದ್ದ ಎಬಿ ಡಿ ವಿಲಿಯರ್, ಕೆ.ಎಲ್. ರಾಹುಲ್, ಸಫìರಾಜ್ ಖಾನ್… ಇವರ್ಯಾರ ಸೇವೆಯೂ ಆರ್‌ಸಿಬಿ ತಂಡಕ್ಕಿಲ್ಲ. ಅತ್ತ ಡೆಲ್ಲಿ ತಂಡ ಡಿ ಕಾಕ್, ಡ್ಯುಮಿನಿ, ಶ್ರೇಯಸ್ ಅಯ್ಯರ್, ಮ್ಯಾಥ್ಯೂಸ್, ಮೊಹಮ್ಮದ್ ಶಮಿ ಮೊದಲಾದ ಖ್ಯಾತನಾಮ ಆಟಗಾರರ ಸೇವೆಯಿಂದ ವಂಚಿತವಾಗಿದೆ. ಶನಿವಾರದ ಪಂದ್ಯದಲ್ಲೂ ಆರ್‌ಸಿಬಿಯ ಫ್ರಂಟ್‌ಲೆçನ್ ಆಟಗಾರರು ಹೊರಗುಳಿಯುವುದು ಖಚಿತಗೊಂಡಿದೆ. ಹೀಗಾಗಿ ಶೇನ್ ವಾಟ್ಸನ್ ಅವರೇ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಹೊರಬೇಕಿದೆ. ಆದರೆ ಹೈದರಾಬಾದ್ ವಿರುದ್ಧ ವಾಟ್ಸನ್ ನಾಯಕತ್ವ ಕ್ಲಿಕ್ ಆಗದಿರುವುದು ಗುಟ್ಟೇನಲ್ಲ. ಗಾಯಾಳುಗಳ ಗೈರಲ್ಲಿ ಕ್ರಿಸ್ ಗೇಲ್, ಮನ್‌ದೀಪ್ ಸಿಂಗ್, ಟ್ರಾವಿಸ್ ಹೆಡ್, ಕೇದಾರ್ ಜಾಧವ್, ಶೇನ್ ವಾಟ್ಸನ್ ಬಿರುಸಿನ ಆಟಕ್ಕೆ ಮುಂದಾಗಬೇಕಿದೆ. ಹೈದರಾಬಾದ್ ವಿರುದ್ಧ ಉತ್ತಮ ಆರಂಭ ಪಡೆದರೂ ಕೊನೆಯ ತನಕ ಈ ರಭಸವನ್ನು ಉಳಿಸಿಕೊಂಡು ಹೋಗುವಲ್ಲಿ ಬೆಂಗಳೂರು ಎಡವಿತ್ತು.
Related Articles
Advertisement
ಬೌಲಿಂಗ್ ಬಲ ನೆಚ್ಚಿದ ಡೆಲ್ಲಿಜಹೀರ್ ಖಾನ್ ನೇತೃತ್ವದ ಡೆಲ್ಲಿ ತಂಡ ಶುಭಾರಂಭದ ನಿರೀಕ್ಷೆಯನ್ನು ಹೊಂದಿದೆ. ರಿಷಬ್ ಪಂತ್, ಕೋರಿ ಆ್ಯಂಡರ್ಸನ್, ಕರುಣ್ ನಾಯರ್, ಸಂಜು ಸ್ಯಾಮ್ಸನ್, ಆದಿತ್ಯ ತಾರೆ ಅವರೆಲ್ಲ ಡೆಲ್ಲಿಯ ಫ್ರಂಟ್‌ಲೆçನ್ ಬ್ಯಾಟ್ಸ್‌ಮನ್‌ಗಳು. ವಿಂಡೀಸ್ ಟಿ-20 ನಾಯಕ ಕಾರ್ಲೋಸ್ ಬ್ರಾತ್‌ವೇಟ್, ಶಾಬಾಜ್ ನದೀಂ, ಕ್ಯಾಗಿಸೊ ರಬಾಡ, ಜಹೀರ್ ಖಾನ್, ಪ್ಯಾಟ್ ಕಮಿನ್ಸ್, ಎಂ. ಅಶ್ವಿನ್, ಕ್ರಿಸ್ ಮಾರಿಸ್, ಚಾಮ ಮಿಲಿಂದ್ ಅವರನ್ನೊಳಗೊಂಡ ಬೌಲಿಂಗ್ ವಿಭಾಗ ರಾಯಲ್ ಚಾಲೆಂಜರ್ ಬೆಂಗಳೂರಿಗಿಂತ ಹೆಚ್ಚು ಬಲಿಷ್ಠವಾಗಿ ಗೋಚರಿಸುತ್ತದೆ. ರಾಯಲ್ ಚಾಲೆಂಜರ್ ಬೆಂಗಳೂರು
ಶೇನ್ ವಾಟ್ಸನ್ (ನಾಯಕ), ಕ್ರಿಸ್ ಗೇಲ್, ಮನ್‌ದೀಪ್ ಸಿಂಗ್, ಕೇದಾರ್ ಜಾಧವ್, ಸ್ಟುವರ್ಟ್ ಬಿನ್ನಿ, ಸಚಿನ್ ಬೇಬಿ, ಸಫìರಾಜ್ ಖಾನ್, ಟ್ರ್ಯಾವಿಸ್ ಹೆಡ್, ಪವನ್ ನೇಗಿ, ಟೈಮಲ್ ಮಿಲ್ಸ್, ಅಂಕಿತ್ ಚೌಧರಿ, ಪ್ರವೀಣ್ ದುಬೆ, ಬಿಲ್ಲಿ ಸ್ಟಾನ್‌ಲೇಕ್, ಯಜುವೇಂದ್ರ ಚಾಹಲ್, ಹರ್ಷಲ್ ಪಟೇಲ್, ಆ್ಯಡಂ ಮಿಲೆ°, ಎಸ್. ಅರವಿಂದ್, ಸಾಮ್ಯುಯೆಲ್ ಬದ್ರಿ, ಇಕ್ಬಾಲ್ ಅಬ್ದುಲ್ಲ, ಆವೇಶ್ ಖಾನ್, ತಬ್ರೈಜ್ ಶಮಿ. ಡೆಲ್ಲಿ ಡೇರ್‌ಡೆವಿಲ್ಸ್
ಜಹೀರ್ ಖಾನ್ (ನಾಯಕ), ರಿಷಬ್ ಪಂತ್, ಶ್ರೇಯಸ್ ಅಯ್ಯರ್, ಸ್ಯಾಮ್ ಬಿಲ್ಲಿಂಗ್ಸ್, ಸಂಜು ಸ್ಯಾಮ್ಸನ್, ಕರುಣ್ ನಾಯರ್, ಚಾಮ ಮಿಲಿಂದ್, ಕ್ರಿಸ್ ಮಾರಿಸ್, ಕಾರ್ಲೋಸ್ ಬ್ರಾತ್‌ವೇಟ್, ಕೋರಿ ಆ್ಯಂಡರ್ಸನ್, ಆದಿತ್ಯ ತಾರೆ, ಮುರುಗನ್ ಅಶ್ವಿನ್, ನವದೀಪ್ ಸೈನಿ, ಶಶಾಂಕ್ ಸಿಂಗ್, ಮೊಹಮ್ಮದ್ ಶಮಿ, ಶಾಬಾಜ್ ನದೀಂ, ಜಯಂತ್ ಯಾದವ್, ಅಮಿತ್ ಮಿಶ್ರಾ, ಸಯ್ಯದ್ ಅಹ್ಮದ್, ಪ್ರತ್ಯೂಷ್ ಸಿಂಗ್.