ಟ್ಯುರಿನ್(ಇಟಲಿ): ಎಟಿಪಿ ಮಾಸ್ಟರ್ಸ್ ಸೆಮಿಫೈನಲ್‌ನಲ್ಲಿ ಅಲೆಕ್ಸಾಂಡರ್ ಜ್ವೆರೇವ್ ಅವರೆದುರು ಸೋಲುಂಡ ನಂ.1 ಟೆನಿಸಿಗ ನೊವಾಕ್ ಜೊಕೋವಿಕ್ ಕೂಟದಿಂದ ಹೊರಬಿದ್ದಿದ್ದಾರೆ. ಪ್ರಶಸ್ತಿ ಸಮರದಲ್ಲಿ ಹಾಲಿ ಚಾಂಪಿಯನ್ ಡ್ಯಾನಿಲ್ ಮೆಡ್ವೆಡೇವ್-ಅಲೆಕ್ಸಾಂಡರ್ ಜ್ವೆರೇವ್ ಮುಖಾಮುಖಿಯಾಗಲಿದ್ದಾರೆ.
ಶನಿವಾರ ರಾತ್ರಿಯ ಜಿದ್ದಾಜಿದ್ದಿ ಸೆಮಿಫೈನಲ್ ಸೆಣಸಾಟದಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್ 7-6 (4), 4-6, 6-3 ಅಂತರದಿಂದ ಜೊಕೋ ಆಟಕ್ಕೆ ತೆರೆ ಎಳೆದರು.
ಒಮ್ಮೆ ಜೊಕೋವಿಕ್ ಲಯ ಕಂಡುಕೊಂಡರೆ ಅವರನ್ನು ಎದುರಿಸುವುದು ಬಹಳ ಕಷ್ಟ. ಹೀಗಾಗಿ ನಾನು ವಿಭಿನ್ನ ಮಾರ್ಗ ಹಿಡಿದೆ’ ಎಂದು 2018ರ ಚಾಂಪಿಯನ್ ಜ್ವೆರೇವ್ ಹೇಳಿದರು.
ದಿನದ ಮೊದಲ ಸೆಮಿಫೈನಲ್‌ನಲ್ಲಿ ಯುಎಸ್ ಓಪನ್ ಚಾಂಪಿಯನ್ ಖ್ಯಾತಿಯ ರಶ್ಯನ್ ಟೆನಿಸಿಗ ಡ್ಯಾನಿಲ್ ಮೆಡ್ವೆಡೇವ್ ನಾರ್ವೆಯ ಕ್ಯಾಸ್ಪರ್ ರೂಡ್ ಅವರನ್ನು 6-4, 6-2 ನೇರ ಸೆಟ್‌ಗಳಿಂದ ಹಿಮ್ಮೆಟ್ಟಿಸಿದರು.
ಇದನ್ನೂ ಓದಿ:ಚೊಚ್ಚಲ ಪಂದ್ಯದಲ್ಲೇ ಹೆಲ್ಮೆಟ್‌ಗೆ ಬಡಿದ ಚೆಂಡು, ಆಸ್ಪತ್ರೆಗೆ ದಾಖಲಾದ ವಿಂಡೀಸ್ ಆಟಗಾರ
ಜ್ವೆರೇವ್ ವಿರುದ್ಧ ಮೆಡ್ವೆಡೇವ್ 6-5 ಗೆಲುವಿನ ದಾಖಲೆ ಹೊಂದಿದ್ದಾರೆ. ಜ್ವೆರೇವ್ ಎದುರಿನ ಇದೇ ಕೂಟದ ರೌಂಡ್ ರಾಬಿನ್ ಲೀಗ್‌ನಲ್ಲೂ ಮೆಡ್ವೆಡೇವ್ ಜಯ ಸಾಧಿಸಿದ್ದರು.