ಹೊಸದಿಲ್ಲಿ: ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಭಾನುವಾರ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗಾœಳಿ ನಡೆಸಿದ್ದು , ಪ್ರಜಾಪ್ರಭುತ್ವಕ್ಕೆ ಅಪಾಯ ಎದುರಾಗಿದ್ದು, ನಾವು ಜನರನ್ನು ರಕ್ಷಿಸಬೇಕಾಗಿದೆ ಎಂದಿದ್ದಾರೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು ಭಾರತದ ಪ್ರಜಾಪ್ರಭುತ್ವವನ್ನು ರಾಜಿಮಾಡಿಕೊಳ್ಳುತ್ತಿರುವ ಅಪಾಯಕಾರಿ ಆಡಳಿತದಿಂದ ನಮ್ಮ ಜನರನ್ನು ರಕ್ಷಿಸಬೇಕಾಗಿದೆ ಎಂದರು.
ನಾವು ಒಗ್ಗಟ್ಟಾಗಿ ರಾಹುಲ್‌ರೊಂದಿಗೆ ಕೆಲಸ ಮಾಡಲು ಸಿದ್ದರಿದ್ದೇವೆ. ಪ್ರಜಾಪ್ರಭುತ್ವ ರಕ್ಷಿಸುವ ಕೆಲಸದಲ್ಲಿ ನಾವು ಬದ್ಧರಿದ್ದೇವೆ ಎಂದರು.
ಪ್ರಧಾನಿ ಮೋದಿ ಹತಾಶರಾಗಿದ್ದು ಅದು ಅವರ ಸರ್ಕಾರದ ಪತನದ ದಿನಗಳನ್ನು ಪ್ರತಿಬಿಂಬಿಸುತ್ತಿದೆ ಎಂದರು.
Related Articles
ಸಭೆಯಲ್ಲಿದ್ದ ಮಾಜಿ ಪ್ರಧಾನಿ ಡಾ.ಮನ್‌ಮೋಹನ್ ಸಿಂಗ್ ಅವರು ನಾವೆಲ್ಲರೂ ರಾಹುಲ್‌ರ ಪ್ರಯತ್ನದೊಂದಿಗೆ ಕೈಜೋಡಿಸುತ್ತೇವೆ ಎಂದರು.