ಚಿಂತೆ ಎದುರಾಗಿದೆ. ಅನಿವಾರ್ಯವಾಗಿ ಅವರು ಭತ್ತದ ಮೇವಿನ ಖರೀದಿಗೆ ಮುಂದಾಗಿರುವ ದೃಶ್ಯ ದಿನನಿತ್ಯ ಕಂಡುಬರುತ್ತಿದೆ. ಮಸ್ಕಿ ಕಂದಾಯ ವ್ಯಾಪ್ತಿಯಲ್ಲಿ ಜಾನುವಾರುಗಳನ್ನು ಸಾಕಿಕೊಂಡಿರುವ ಬಹುತೇಕ ರೈತರು ಭತ್ತದ ಮೇವು ಖರೀದಿಗಾಗಿ ತುಂಗಭದ್ರಾ ಎಡದಂಡೆ ನಾಲೆ ಅಚ್ಚುಕಟ್ಟು ಪ್ರದೇಶದ ಜಮೀನುಗಳಿಗೆ ಮುಗಿ ಬಿದ್ದಿರುವುದು ಕಂಡು ಬಂದಿದೆ. ಮಸ್ಕಿ ತಾಲೂಕಿನ ಬಳಗಾನೂರ, ಹಂಚಿನಾಳ, ಕಡಬೂರು, ಉದಾಳ, ಮುದ್ದಾಪುರ, ಕಣ್ಣೂರು, ಸುಂಕನೂರು ಸೇರಿದಂತೆ ಇನ್ನಿತರ ಗ್ರಾಮಗಳಿಂದ ದಿನನಿತ್ಯ ಮೇವಿನ ಭತ್ತ ಹೊತ್ತ ನೂರಾರು ವಾಹನಗಳು ರಸ್ತೆಯಲ್ಲಿ ಸಾಗಿಸುತ್ತಿರುವುದು ಕಂಡು ಬರುತ್ತಿದೆ.
Advertisement
ಒಂದು ಎಕರೆ ಭತ್ತದ ಮೇವಿಗೆ ಐದಿನೈದು ನೂರು ರೂಪಾಯಿ ರೈತರು ನೀಡಬೇಕಾಗಿದೆ. ಒಂದು ಟ್ರಾಕ್ಟರ್ ಭತ್ತದ ಮೇವಿನ ಖರೀದಿಗೆ ಸುಮಾರು ಹತ್ತರಿಂದ ಹನ್ನೆರಡು ಸಾವಿರ ರೂ. ತಗಲುತ್ತದೆ. ಅನಿವಾರ್ಯವಾಗಿ ರೈತರು ಕೊಂಡುಕೊಳ್ಳುತ್ತಿದ್ದಾರೆ. ಸರಕಾರದಿಂದ ಇದುವರೆಗೂ ರೈತರಿಗಾಗಿ ಮಸ್ಕಿ ಕಂದಾಯ ವ್ಯಾಪ್ತಿಯಲ್ಲಿ ಮೇವಿನ ಸಂಗ್ರಹ ಕೇಂದ್ರ ಪ್ರಾರಂಭಿಸಿಲ್ಲ. ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳತ್ತಾರೆ ಎಂಬುದು ಕಾದು ನೊಡಬೇಕಾದೆ.