Advertisement

ಸಿಲಿಗುರಿಗೆ ಚೀನದಿಂದ ಅಪಾಯ: ನೌಕಾಪಡೆ

12:33 PM Feb 22, 2018 | Team Udayavani |

ಹೊಸದಿಲ್ಲಿ: ಭಾರತದ ಪೂರ್ವದಲ್ಲಿರುವ ಭಾರತ-ಚೀನ ವಾಸ್ತವಿಕ ಗಡಿ ರೇಖೆ (ಎಲ್‌ಎಸಿ)ಯಲ್ಲಿ ಚೀನದ ಪೀಪಲ್ಸ್‌ ಲಿಬರೇಷನ್‌ ಆರ್ಮಿಯು (ಪಿಎಲ್‌ಎ) ಹೆಚ್ಚಾಗಿ ಗಡಿ ಉಲ್ಲಂಘನೆ ಮಾಡುತ್ತಿದ್ದು, ಇದು ಪೂರ್ವೋತ್ತರ ದೇಶಗಳನ್ನು ಭಾರತಕ್ಕೆ ಬೆಸೆಯುವ ಸಿಲಿಗುರಿ ಪ್ರಾಂತ್ಯಕ್ಕೆ ಅಪಾಯ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್‌ ಸುನಿಲ್‌ ಲಾಂಬಾ ಆತಂಕ ವ್ಯಕ್ತಪಡಿಸಿದ್ದಾರೆ. 

Advertisement

ಎಲ್‌ಎಸಿ ಪಹರೆ ಮಾಡುವ ತನ್ನ ವಾಯುಪಡೆಯ ವೆಸ್ಟರ್ನ್ ಥಿಯೇಟರ್‌ ಕಮಾಂಡ್‌ ವ್ಯವಸ್ಥೆ ಮೇಲ್ದರ್ಜೆಗೆ ಏರಿಸಿರುವ ಚೀನ, ಭಾರತದಿಂದ ಆಗುವ ಅಪಾಯವನ್ನು ಎದುರಿಸಲು ಈ ಕ್ರಮ ಕೈಗೊಂಡಿರುವುದಾಗಿ ಮಂಗಳವಾರ ಘೋಷಿಸಿದೆ. ಇದರ ಬೆನ್ನಲ್ಲೇ ನೌಕಾಪಡೆ ಮುಖ್ಯಸ್ಥರ ಈ ಎಚ್ಚರಿಕೆ ಚೀನವನ್ನು ಲಘುವಾಗಿ ಪರಿಗಣಿಸದಿರುವಂತೆ ಸ್ಪಷ್ಟ ಸಂದೇಶ ರವಾನಿಸಿದೆ. ಇದೇ ವೇಳೆ , ಡೋಕ್ಲಾಂನಲ್ಲಿ ಕಳೆದ ವರ್ಷ ಮಾಡಿದ್ದ ತರಲೆಯನ್ನು ಈ ವರ್ಷ ಚೀನ ಮಾಡಿಲ್ಲ ಎಂದು ಭೂ ಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌ ತಿಳಿಸಿದ್ದಾರೆ. 

ಈ ವರ್ಷ ನಾಥುಲಾ ಪಾಸ್‌ ಮೂಲಕವೇ ಯಾತ್ರಿಗಳು ಕೈಲಾಶ್‌ ಮಾನಸಸರೋವರ ಯಾತ್ರೆ ಕೈಗೊಳ್ಳಬಹುದು. ಜೂ.8ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next