ಹೆಬ್ರಿ: ಮುದ್ರಾಡಿ ಗ್ರಾ. ಪಂ. ವ್ಯಾಪ್ತಿಯ ಕಬ್ಬಿನಾಲೆ ಗ್ರಾಮದಲ್ಲಿರುವ ಮಾವಿನಕಟ್ಟೆ ಸೇತುವೆಯ ಪಿಲ್ಲರ್ ಶಿಥಿಲಾವಸ್ಥೆಯಲಿದ್ದು ಅಪಾಯದ ಅಂಚಿ ನಲ್ಲಿದೆ.
ಈ ಸೇತುವೆ ಸುಮಾರು 25 ವರ್ಷ ಹಳೆಯದು. ಮಳೆ ನೀರು ರಭಸವಾಗಿ ಹರಿದು, ಸೇತುವೆ ಪಿಲ್ಲರ್‌ಗೆ ಹಾನಿಯಾಗಿದೆ. ಇದರಿಂದ ಕುಸಿಯುವ ಭೀತಿ ಕಾಡಿದೆ. ಕಾಂಕ್ರೀಟ್ ಕಂಬದ ತಳದಲ್ಲಿ ಸರಳುಗಳು ಕಾಣಿಸುತ್ತಿವೆ. ಈ ಕಿರು ಸೇತುವೆಯ ಎರಡೂ ಪಿಲ್ಲರ್‌ಗಳ ಸ್ಥಿತಿಯೂ ಒಂದೇ ತೆರನಾಗಿವೆ. ಆದ್ದರಿಂದ ಅಪಾಯ ಹೆಚ್ಚಿದೆ.
ಸಂಪರ್ಕಕ್ಕೆ ಅಗತ್ಯ
ನಕ್ಸಲ್ ಪೀಡಿತ ಕಬ್ಬಿನಾಲೆ ಕುಚ್ಚಾರು ಸಂಪರ್ಕಿಸುವ ಅರ್ಕಲ್ ಬಳಿಯ ಮಾವಿನಕಟ್ಟೆ ಸೇತುವೆಯಲ್ಲಿ ನಿತ್ಯ ನೂರಾರು ಜನ ಸಂಚರಿಸುತ್ತಾರೆ. ಕಬ್ಬಿನಾಲೆ ಕುಚ್ಚಾರು, ಕುಳ್ಳಾಂತಬೆಟ್ಟು, ಅಲಂಗಾಡು, ಕೆಳಬೆಟ್ಟು, ಬೀರು ಬೈಲು ,ತಿಂಗಳಮಕ್ಕಿ, ತೆಂಗುಮಾರು, ಒರ್ತುಬೈಲು, ಕಾಜಿಗೆಲ್ಲು, ಕುಚ್ಚಾರು ದರ್ಕಾಸು, ಪೀತಬೈಲು, ಮುಂತಾದ ಜನ ವಸತಿ ಪ್ರದೇಶಗಳಿಗೆ ಸಂಪರ್ಕ ಕೊಂಡಿಯಾಗಿ ಈ ಸೇತುವೆ ಇದ್ದು ಸೇತುವೆ ಕುಸಿಯುವ ಭೀತಿಯಿಂದ ಜನರು ಭಯಭೀತರಾಗಿದ್ದಾರೆ.
Advertisement
ಕುಸಿಯುವ ಭೀತಿ
Related Articles
Advertisement
ದುರ್ಗಮ ಹಾದಿ
ಸೇತುವೆ ಸಮಸ್ಯೆಯೊಂದಿಗೆ ಹದಗೆಟ್ಟ ರಸ್ತೆ ಸಮಸ್ಯೆಯೂ ಇಲ್ಲಿನದು. ಮರಗಳು ರಸ್ತೆಗೆ ಬಿದ್ದು ಸಂಚಾರಕ್ಕೆ ಸಮಸ್ಯೆಯಾಗಿದೆ. ಈ ಭಾಗದಲ್ಲಿ ಸುಮಾರು 65-70 ಮನೆಗಳಿದ್ದು 400ಕ್ಕೂ ಮಿಕ್ಕಿ ಜನ ದುರ್ಗಮ ಹಾದಿಯ ಸಂಚಾರದಿಂದ ಬೇಸತ್ತು ಹೋಗಿದ್ದಾರೆ.
ಜನಪ್ರತಿನಿಧಿಗಳೇ ಇತ್ತ ಗಮನ ಹರಸಿ
ಒಂದೆಡೆ ಸೇತುವೆ ಅಪಾಯದಲ್ಲಿದ್ದರೆ, ರಸ್ತೆಯ ಪರಿಸ್ಥಿತಿ ಹದಗೆಟ್ಟಿದೆ. ಸಮರ್ಪಕವಾದ ರಸ್ತೆಯೂ ಇಲ್ಲ. ರಸ್ತೆ ಬದಿಯ ಚರಂಡಿಗೆ ಕಟ್ಟಿದ ಮೋರಿ ಕುಸಿದಿದೆ. ಮೋರಿ ಸಮಸ್ಯೆಯಿಂದಾಗಿ ರಸ್ತೆಯೂ ಹದಗೆಟ್ಟಿದ್ದು, ಬಾಡಿಗೆ ವಾಹನ ಚಾಲಕರು ಸಂಚರಿಸಲು ನಿರಾಕರಿಸುತ್ತಾರೆ. ಜನಪ್ರತಿನಿಧಿಗಳು ಇತ್ತ ಗಮನಹರಿಸದಿದ್ದರೆ ಪ್ರತಿಭಟನೆ ಅನಿವಾರ್ಯ ಎಂಬುದು ಈ ಭಾಗದ ಗ್ರಾಮಸ್ಥರ ಆಗ್ರಹ .
ಪಂಚಾಯತ್ ಮಟ್ಟದಲ್ಲಿ ಬಗೆಹರಿಸಲು ಸಾಧ್ಯವಿಲ್ಲ
ಈ ಭಾಗದ ಗ್ರಾಮಸ್ಥರ ಸಮಸ್ಯೆಯನ್ನು ಪಂಚಾಯತ್ ಮಟ್ಟದಲ್ಲಿ ಪರಿಹಸರಿಲು ಸಾಧ್ಯವಿಲ್ಲ. ಸಂಬಂಧಪಟ್ಟವರು ಕೂಡಲೇ ಗಮನಹರಿಸಿದರೆ ಸಮಸ್ಯೆ ಬಗೆಹರಿಯುತ್ತದೆ.
– ಸಂತೋಷ ಕುಮಾರ್ ಶೆಟ್ಟಿ, ಪಂಚಾಯತ್ ಸದಸ್ಯರು
– ಉದಯ್ ಕುಮಾರ್ ಶೆಟ್ಟಿ ಹೆಬ್ರಿ