Advertisement

ದಂಗಲ್‌ 26ನೇ ದಿನದ ಬಾಕ್ಸ್‌ ಆಫೀಸ್‌ ವಿಕ್ರಮ: 372.73 ಕೋಟಿ ಗಳಿಕೆ

05:06 PM Jan 18, 2017 | udayavani editorial |

ಮುಂಬಯಿ : ಬಾಲಿವುಡ್‌ ಸೂಪರ್‌ ಸ್ಟಾರ್‌, ಮಿಸ್ಟರ್‌ ಫ‌ರ್‌ಫೆಕ್ಷನಿಸ್ಟ್‌ ಆಮಿರ್‌ ಖಾನ್‌ ಅವರ ಹೊಸ ಚಿತ್ರ ದಂಗಲ್‌ ಬಿಡುಗಡೆಗೊಂಡು 26 ದಿನಗಳಾಗಿದ್ದು ಚಿತ್ರದ ಬಾಕ್ಸ್‌ ಆಫೀಸ್‌ ಗಳಿಕೆಯು 372.73 ಕೋಟಿ ರೂ.ಗಳಿಗೆ ಏರಿದೆ.

Advertisement

26ನೇ ದಿನವಾದ ಇಂದು ದಂಗಲ್‌ ಗಳಿಸಿರುವ ಸಂಪಾದನೆ 1.27 ಕೋಟಿ  ರೂ. ಎಂದು ಬಾಲಿವುಡ್‌ ಹಂಗಾಮಾ ವರದಿ ಮಾಡಿದೆ. 400 ಕೋಟಿ ರೂ. ಗಡಿ ದಾಟಲು ದಂಗಲ್‌ ಇನ್ನೂ 27.27 ಕೋಟಿ ರೂ.ಗಳಿಸಬೇಕಾಗಿದೆ. ಹಾಗಿದ್ದರೂ ದಂಗಲ್‌ 400 ಕೋಟಿ ಗಳಿಕೆಯ ವಿಕ್ರಮ ಸಾಧಿಸುವಲ್ಲಿ ಕೆಲವೇ ಕೆಲವು ಕೋಟಿ ರೂ.ಗಳಷ್ಟು ಹಿಂದೆ ಬೀಳುವ ಸಂಭವವಿದೆ ಎಂದು ಬಾಲಿವುಡ್‌ ಹಂಗಾಮಾ ಹೇಳಿದೆ. 

ಮುಂದಿನ ವಾರ ಬಾಲಿವುಡ್‌ ಸೂಪರ್‌ ಸ್ಟಾರ್‌ ಶಾರುಖ್‌ ಖಾನ್‌ ಅವರ ರಯೀಸ್‌ ಮತ್ತು ಹೃತಿಕ್‌ ರೋಶನ್‌ ಅವರ ಕಾಬಿಲ್‌ ಹೊಸ ಚಿತ್ರಗಳು ತೆರೆ ಕಾಣಲಿವೆ; ಆದರೆ ಅವು ಗಳಿಕೆಯಲ್ಲಿ ದಂಗಲ್‌ ಚಿತ್ರದ ಸನಿಹಕ್ಕೆ ಬರುವುದು ಸಾಧ್ಯವೇ ಇಲ್ಲವೆಂಬ ಅಭಿಪ್ರಾಯ ವ್ಯಕ್ತವಾಗಿದೆ. 

ಈಚೆಗೆ ತೆರೆಕಂಡ ಹೊಸ ಚಿತ್ರ ಓಕೆ ಜಾನು ಮತ್ತು xXx: Return Of Xander Cage ಚಿತ್ರಗಳು ಸಿನೆಮಾ ಮಂದಿರಗಳಲ್ಲಿ ಚೆನ್ನಾಗಿ ನಡೆಯುತ್ತಿರುವ ಹೊರತಾಗಿಯೂ ದಂಗಲ್‌ ಚಿತ್ರದ ಜನಾಕರ್ಷಣೆ ಕುಂಠಿತವಾಗಿಲ್ಲ. ಹಾಗೆಯೇ ರಯೀಸ್‌ ಮತ್ತು ಕಾಬಿಲ್‌ ಚಿತ್ರಗಳು ಮುಂದಿನ ವಾರ ತೆರೆಕಂಡರೂ ಆಮಿರ್‌ ಖಾನ್‌ ಅವರ ದಂಗಲ್‌ ಬಗ್ಗೆ ಜನರಲ್ಲಿ ಇನ್ನೂ ಆಸಕ್ತಿ, ಕುತೂಹಲ ಇರುವುದರಿಂದ ಅದು 400 ಕೋಟಿ ರೂ.ಗಳಿಕೆಯ ಗಡಿ ದಾಟಲೂಬಹುದು ಎಂದು ಅಂದಾಜಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next