Advertisement

ದಂಡಿ ಯಾತ್ರೆಯಿಂದ ಅಪ್ಪಳಿಸಿತು ರಾಷ್ಟ್ರೀಯತೆಯ ಅಲೆ

11:49 PM Mar 11, 2021 | Team Udayavani |

ಐತಿಹಾಸಿಕ ದಂಡಿ ಯಾತ್ರೆ ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಬಹು ಮುಖ್ಯವಾದ ಪಾತ್ರ ವಹಿಸಿತ್ತು. ಅದಕ್ಕಾಗಿಯೇ ಭಾರತ ಸ್ವಾತಂತ್ರ್ಯದ 75 ವರ್ಷಗಳ ಅದ್ದೂರಿ ಆಚರಣೆಯ ಆರಂಭಕ್ಕೆ ದಂಡಿ ಯಾತ್ರೆಯು ಆರಂಭವಾದ ವಿಶೇಷ ದಿನವನ್ನು ಆರಿಸಿಕೊಳ್ಳಲಾಗಿದೆ. ದಂಡಿ ಯಾತ್ರೆ ಭಾರತ ಸ್ವಾತಂತ್ರÂ ಸಂಗ್ರಾಮದಲ್ಲಿ ಅತ್ಯಂತ ಪ್ರಭಾವಶಾಲಿ ಮತ್ತು ಸ್ಫೂರ್ತಿದಾಯಕ ಸತ್ಯಾಗ್ರಹವಾಗಿದೆ. ದಂಡಿ ಯಾತ್ರೆಯ ಅನಂತರದ ಘಟನೆಗಳನ್ನು ನಾವು ಗಮನಿಸಿದರೆ, ಅದು ಖಂಡಿತವಾಗಿಯೂ ಬ್ರಿಟಿಷರ ವಸಾಹತುಶಾಹಿ ಆಡಳಿತವನ್ನು ಒತ್ತಡಕ್ಕೆ ಸಿಲುಕಿಸಿತು. ಈ ಚಳವಳಿಯ ಮೂಲಕ ಮಹಾತ್ಮಾ ಗಾಂಧಿಯವರು ಮತ್ತೂಮ್ಮೆ ಸತ್ಯ ಮತ್ತು ಅಹಿಂಸೆಯ ಶಕ್ತಿಯನ್ನು ಜಗತ್ತಿಗೆ ತೋರಿಸಿದರು. ಭಾರತದಲ್ಲಿ ಉಪ್ಪು ತಯಾರಿಕೆ ಪ್ರಾಚೀನ ಕಾಲದಿಂದಲೂ ಇದೆ. ಈ ಸಾಂಪ್ರದಾಯಿಕ ಉಪ್ಪು ತಯಾರಿಕೆಯನ್ನು ರೈತರು ಮಾಡುತ್ತಿದ್ದರು. ಅವರನ್ನು ಉಪ್ಪು ರೈತರು ಎಂದೂ ಕರೆಯಲಾಗುತ್ತಿತ್ತು ಬಿಹಾರ ಮತ್ತು ಇತರ ಅನೇಕ ಪ್ರಾಂತ್ಯಗಳಲ್ಲಿ, ಈ ಕೆಲಸವನ್ನು ವಿಶೇಷ ಸಮುದಾಯ ನಿರ್ವಹಿಸುತ್ತಿತ್ತು. ಕ್ರಮೇಣ ಉಪ್ಪು ತಯಾರಿಕೆಯ ತಂತ್ರವು ಸುಧಾರಿಸಿತು. ಕಾಲಾಅನಂತರದಲ್ಲಿ, ಉಪ್ಪು ಸಹ ವಾಣಿಜ್ಯ ವಸ್ತುವಾಯಿತು.

Advertisement

ಮಾರ್ಚ್‌ 2, 1930 ರಂದು ಗಾಂಧೀಜಿಯವರು ಲಾರ್ಡ್‌ ಇರ್ವಿನ್‌ ಅವರಿಗೆ ಬರೆದ ಪತ್ರದಲ್ಲಿ, ರಾಜಕೀಯವಾಗಿ, ನಾವು ಗುಲಾಮರಿಗಿಂತ ಉತ್ತಮ ಸ್ಥಾನದಲ್ಲಿಲ್ಲ. ನಮ್ಮ ಸಂಸ್ಕೃತಿಯ ಬೇರುಗಳನ್ನು ಟೊಳ್ಳು ಮಾಡಲಾಗಿದೆ ಎಂದು ಹೇಳುತ್ತಾರೆ. ಈ ಪತ್ರವು ಬೆದರಿಕೆಯ ಉದ್ದೇಶವನ್ನು ಹೊಂದಿಲ್ಲ. ಇದು ಒಬ್ಬ ಸರಳ ಮತ್ತು ಪವಿತ್ರ ಸತ್ಯಾಗ್ರಹಿಯ ಕರ್ತವ್ಯ. ಆದ್ದರಿಂದ ಇದನ್ನು ನಾನು ಭಾರತೀಯ ದೃಷ್ಟಿಕೋನವನ್ನು ಸಮರ್ಥಿಸುವ ಬ್ರಿಟಿಷ್‌ ಯುವ ಸ್ನೇಹಿತನ ಮೂಲಕ ಕಳುಹಿಸುತ್ತಿದ್ದೇನೆ, ಅವನು ಅಹಿಂಸೆಯಲ್ಲಿ ಸಂಪೂರ್ಣ ನಂಬಿಕೆ ಇಟ್ಟಿದ್ದಾನೆ ಮತ್ತು ಆ ದೇವರು  ಈ ಉದ್ದೇಶಕ್ಕಾಗಿಯೇ ಆತನನ್ನು ಕಳುಹಿಸಸಿದ್ದಾನೆ ಎಂದು ಅವರು ಬರೆಯುತ್ತಾರೆ. ಅವನ ಹೆಸರು ರೆಜಿನಾಲ್ಡ್ ರೆನಾಲ್ಡ್ಸ್. ಆ ಯುವಕ ಗಾಂಧೀಜಿಯೊಂದಿಗೆ ಆಶ್ರಮದಲ್ಲಿ ವಾಸಿಸುತ್ತಿದ್ದ ಮತ್ತು ಗಾಂಧೀಜಿಯ ತಣ್ತೀಗಳಲ್ಲಿ ನಂಬಿಕೆ ಇಟ್ಟಿದ್ದ. ಲಾರ್ಡ್‌ ಇರ್ವಿನ್‌ ಅವರಿಗೆ ಬರೆದ ಪತ್ರದಲ್ಲಿ, ಗಾಂಧೀಜಿಯವರು ಬಡವರಿಗೆ ದೊಡ್ಡ ಅನ್ಯಾಯವಾದ ಉಪ್ಪಿನ ಕಾನೂನನ್ನು ಮುರಿಯುವ ನಿರ್ಧಾರದ ಬಗ್ಗೆ ತಿಳಿಸಿದ್ದರು.

ದಂಡಿ ಯಾತ್ರೆಯು ನಿಗದಿಯಂತೆ ಸಾಬರಮತಿ ಆಶ್ರಮದಿಂದ ಮಾ.12 ರಂದು ಪ್ರಾರಂಭವಾಯಿತು. ಬೆಳಗ್ಗೆ ಸರಿಯಾಗಿ ಆರೂವರೆ ಗಂಟೆಗೆ ಗಾಂಧೀಜಿಯವರು 79 ಮಂದಿ ಅನುಯಾಯಿಗಳೊಂದಿಗೆ ಆಶ್ರಮದಿಂದ ಯಾತ್ರೆ ಪ್ರಾರಂಭಿಸಿದರು. ಅವರು 24 ದಿನಗಳಲ್ಲಿ ದಂಡಿಯವರೆಗೆ 241 ಮೈಲಿಗಳನ್ನು ನಡೆದರು. ಈ ಅವಧಿಯಲ್ಲಿ ಗಾಂಧೀಜಿಯವರು ಯಾತ್ರೆಯ ಸಮಯದಲ್ಲಿ ಸಭೆಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಅವರ ಭಾಷಣಗಳು ಬ್ರಿಟಿಷರ ನೀತಿಗಳ ವಿರುದ್ಧ ಜನರ ಮನಸ್ಸಿನ ಮೇಲೆ ಪ್ರಭಾವ ಬೀರುವಲ್ಲಿ ಯಶಸ್ವಿಯಾದವು.

ದಂಡಿ ಯಾತ್ರೆಯ ಸಮಯದಲ್ಲಿ, ಜನರು ತಮ್ಮ ಗಮನವನ್ನು ಉಪ್ಪಿನ ಕಾನೂನಿನ ಮೇಲೆ ಕೇಂದ್ರೀಕರಿಸಬೇಕು ಎಂದು ಸ್ಪಷ್ಟವಾಗಿ ಹೇಳಲಾಯಿತು ಮತ್ತು ಅದೇ ಸಮಯದಲ್ಲಿ ಗಾಂಧೀಜಿಯವರು ದಂಡಿಯಲ್ಲಿ ಉಪ್ಪಿನ ಕಾನೂನು ಮುರಿಯುವ ಮೊದಲು ಯಾರೂ ನಾಗರಿಕ ಅಸಹಕಾರ ತೋರಬಾರದು ಎಂದು ಎಚ್ಚರಿಸಲಾಯಿತು. ಗಾಂಧೀಜಿಯವರ ಅನು ಮತಿಯೊಂದಿಗೆ ಸತ್ಯಾಗ್ರಹಿಗಳಿಗೆ ಪ್ರತಿಜ್ಞೆಯ ಪತ್ರ ಬರೆಯಲಾಯಿತು. ನಾನು ಜೈಲಿಗೆ ಹೋಗಲು ಸಿದ್ಧನಿದ್ದೇನೆ ಮತ್ತು ಈ ಸತ್ಯಾಗ್ರಹದ ಭಾಗವಾಗಿ ನಾನು ಯಾವುದೇ ತೊಂದರೆ ಮತ್ತು ಶಿಕ್ಷೆಯನ್ನು ಸಂತೋಷ ದಿಂದ ಸಹಿಸಿಕೊಳ್ಳಲು ಸಿದ್ದನಿದ್ದೇನೆ ಎಂಬುದು ಆ ಪತ್ರದ ವಿಷಯ ವಾಗಿತ್ತು. 1930ರ ಎ.4ರ ರಾತ್ರಿ ಪಾದಯಾತ್ರೆ ದಂಡಿಗೆ ಪ್ರವೇಶಿಸಿತು. ಎ.5ರ ಬೆಳಗ್ಗೆ ನೂರಾರು ಗಾಂಧೀವಾದಿ ಸತ್ಯಾಗ್ರಹಿಗಳು ಖಾದಿ ಧರಿಸಿ ದಂಡಿ ಸಮುದ್ರ ತೀರದಲ್ಲಿ ಜಮಾಯಿಸಿದರು. ದಂಡಿಯಲ್ಲಿ ಪತ್ರಿಕಾಗೋಷ್ಠಿಯನ್ನು ಸಹ ಆಯೋಜಿಸಲಾಗಿತ್ತು. ಸರೋಜಿನಿ ನಾಯ್ಡು, ಡಾ| ಸುಮಂತ್‌, ಅಬ್ಟಾಸ್‌ ತ್ಯಾಬ್ಜಿ, ಮಿಥುಬೆನ್‌ ಪೆಟಿಟ್‌ ದಂಡಿ ಯಾತ್ರೆಗೆ ಸೇರಿಕೊಂಡರು. ಗಾಂಧೀಜಿ ತಮ್ಮ ಭಾಷಣದಲ್ಲಿ ಮರುದಿನ ಬೆಳಗ್ಗೆ ಉಪ್ಪು ಕಾನೂನು ಉಲ್ಲಂ ಸುವ ಬಗ್ಗೆ ಮಾಹಿತಿ ನೀಡಿದರು. ಗಾಂಧೀಜಿಯವರು ಎ.6ರ ಬೆಳಗ್ಗೆ ದಂಡಿ ಸಮುದ್ರ ತೀರದಲ್ಲಿ ಮುಷ್ಟಿಯಲ್ಲಿ ಉಪ್ಪನ್ನು ಎತ್ತಿ ಹಿಡಿಯುವ ಮೂಲಕ ಉಪ್ಪಿನ ಕಾನೂನನ್ನು ಮುರಿದರು. ಅವರನ್ನು ಬ್ರಿಟಿಷ್‌ ಕಾನೂನಿನಡಿಯಲ್ಲಿ ಬಂಧಿಸಲಾಯಿತು.

ಬಂಧನಕ್ಕೆ ಮುಂಚಿತವಾಗಿ ಗಾಂಧೀಜಿಯವರು, ತ್ಯಾಗವಿಲ್ಲದೆ ಸ್ವರಾಜ್ಯವನ್ನು ಪಡೆಯಲು ಸಾಧ್ಯವಿಲ್ಲ ಎಂದು ಸ್ಪಷ್ಟ ಸಂದೇಶವನ್ನು ನೀಡಿದ್ದರು. ಆದ್ದರಿಂದ, ಜನರು ಅಪಾರ ತ್ಯಾಗಕ್ಕೆ ಸಿದ್ಧರಾಗುವ ಸಾಧ್ಯತೆಯಿತ್ತು. ಮತ್ತೂಂದು ಕಡೆಯವರಿಗೆ ಪ್ರತೀಕಾರ ವನ್ನು ಬಯಸದೇ ಇರುವುದು ನಿಜವಾದ ತ್ಯಾಗವಾಗಿತ್ತು. ಲಂಡನ್‌ನ ಟೆಲಿಗ್ರಾಫ್ ವರದಿಗಾರ ಅಶ್ಮೀದ್‌ ಬಾಟ್ಲೇಟ್‌ ದಂಡಿ ಯಾತ್ರೆಯ ಬಗ್ಗೆ ವಿವರಿಸುತ್ತಾ ಭವಿಷ್ಯದಲ್ಲಿ ಇದೊಂದು ಐತಿಹಾಸಿಕ ಘಟನೆಯಾಗಲಿದೆ ಎಂದು ಯಾರಿಗೆ ಗೊತ್ತಿತ್ತು? ಎಂದು ಬರೆದರು. ಮಹಾತ್ಮರ ಬಂಧನವು ಸಣ್ಣ ವಿಷಯವೇ? ನಿಸ್ಸಂ ದೇಹವಾಗಿ, ಗಾಂಧೀಜಿಯವರು ಇಂದು ಕೋಟ್ಯಂತರ ಭಾರತೀಯರ ದೃಷ್ಟಿಯಲ್ಲಿ ಮಹಾತ್ಮಾ ಮತ್ತು ದೈವಿಕ ಪುರುಷನಾಗಿ ಹೊರಹೊಮ್ಮಿದ್ದಾರೆ ಎಂದು ಬಾಟ್ಲೇಟ್‌ ಬರೆದಿದ್ದಾರೆ.

Advertisement

ದಂಡಿ ಯಾತ್ರೆಯ ಬೀಜಗಳ ಈ ಮೊಳಕೆಯು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ತಿರುವಾಯಿತು. ಅಸಹಕಾರ ಎನ್ನುವುದು ಒಂದು ಪರಿಕಲ್ಪನೆ ಮಾತ್ರವಲ್ಲದೆ ಬ್ರಿಟಿಷ್‌ ಆಡಳಿತಕ್ಕೆ ಪ್ರತಿರೋಧ ತೋರಲು ವ್ಯವಸ್ಥಿತವಾಗಿ ರೂಪಿಸಿದ ಯೋಜನೆ ಯಾಗಿತ್ತು ಎಂದು ಜನರು ಈಗ ಅರ್ಥಮಾಡಿಕೊಂಡಿದ್ದಾರೆ. ಗಾಂಧೀಜಿಯವರ ದಂಡಿ ಭೇಟಿಯೊಂದಿಗೆ, ಭಾರತದಾದ್ಯಂತ ರಾಷ್ಟ್ರೀಯತೆಯ ಅಲೆಯೊಂದು ಅಪ್ಪಳಿಸಿತು. ದಂಡಿ ಯಾತ್ರೆಯು ಜನರಲ್ಲಿ ಸ್ವಾತಂತ್ರÂದ ಪರವಾದ ಭಾವನೆಯನ್ನು ಸೃಷ್ಟಿಸಿತು. ಗಾಂಧೀಜಿಯವರ ದಂಡಿ ಯಾತ್ರೆಯು ಇಂದಿಗೂ ಸಹ ಜನರಿಗೆ ಕಷ್ಟದ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಮಾರ್ಗವನ್ನು ತೋರಿಸುತ್ತದೆ ಮತ್ತು ತ್ಯಾಗದ ಮಹತ್ವವನ್ನು ತಿಳಿಸುತ್ತದೆ.

ಸುಮಾರು 91 ವರ್ಷಗಳ ಅನಂತರ ಸ್ವಾತಂತ್ರ್ಯದ ಅಮೃತ ಮಹೋತ್ಸ ವದ ಸಂದರ್ಭದಲ್ಲಿ ನಾನು ಅದೇ ಮಣ್ಣಿನಲ್ಲಿ ಪಾದಯಾತ್ರೆ ಮಾಡುವೆ. ಆದರೆ ಅಂದಿನ ಮತ್ತು ಈಗಿನ ದೇಶದ ಪರಿಸ್ಥಿತಿಯಲ್ಲಿ ಸಾಗರದಷ್ಟು ಬದಲಾವಣೆಯಾಗಿದೆ.. ಭಾರತದ ಪಯಣವನ್ನು ಈಗ ಸ್ವಾವಲಂಬನೆ ಮತ್ತು ಸ್ವಾಭಿಮಾನದಿಂದ ವ್ಯಾಖ್ಯಾನಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನಾವು ಇನ್ನು ಮುಂದೆ ಬೇಡುವವ ರಾಗುವುದಿಲ್ಲ. ನಾವು ಜಗತ್ತಿಗೆ ಕೊಡುವವರಾಗುತ್ತೇವೆ. ಪ್ರಪಂಚ ದಾದ್ಯಂತದ ಬಿಕ್ಕಟ್ಟಿನ ಈ ಸಮಯಯಲ್ಲಿ, ನಾವು ವಿವಿಧ ದೇಶಗಳಿಗೆ ಔಷಧಗಳನ್ನು ಅಥವಾ ಲಸಿಕೆಗಳನ್ನು ತಲುಪಿಸಿದ್ದೇವೆ. ವಸುದೈವ ಕುಟುಂಬಕಂ ಎಂಬ  ನಮ್ಮ ಹಳೆಯ ನಂಬಿಕೆ ಇನ್ನೂ ಜೀವಂತ ವಾಗಿದೆ ಎಂಬುದನ್ನು ಇದು ತೋರಿಸುತ್ತದೆ. ನಾವು ಶ್ರಮಿಕ ಮತ್ತು ಶ್ರಮದ ಬಗ್ಗೆ ಮಾತನಾಡಲು ಬಯಸುತ್ತೇವೆ. ಇದರಿಂದ ನಮ್ಮ ಭವಿಷ್ಯದ ಪೀಳಿಗೆಗಳು ಹೆಚ್ಚು ಬಲಶಾಲಿ ಗಳಾಗುತ್ತವೆ. ದೇಶವು ಸ್ವಾತಂತ್ರÂದ ಶತಮಾನೋತ್ಸವವನ್ನು (100 ನೇ ವರ್ಷ) ಆಚರಿಸುವ ಹೊತ್ತಿಗೆ, ನಮ್ಮ ಸಾಧನೆ ಮತ್ತು ಸಾಂಸ್ಕೃತಿಕ ವೈಭವವು ಜಗತ್ತಿನ ಮುಂದೆ ಒಂದು ಅತ್ಯುತ್ತಮ ಉದಾಹರಣೆ ಯಾಗಿರಬೇಕು ಎಂದು ಪ್ರಧಾನಿಯವರು ಆಶಿಸಿದ್ದಾರೆ.

 

– ಪ್ರಹ್ಲಾದ್‌ ಸಿಂಗ್‌ ಪಟೇಲ್‌,

ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ರಾಜ್ಯ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next