Advertisement

ದಾಂಡೇಲಿಯಲ್ಲಿ ಶ್ವಾನಗಳಿಗೆ ಉಚಿತ ರೇಬಿಸ್ ಚುಚ್ಚುಮದ್ದು

04:25 PM Sep 28, 2021 | Team Udayavani |

ದಾಂಡೇಲಿ : ಪಶುವೈದ್ಯ ಇಲಾಖೆ ಹಾಗೂ ನಗರದ ವೆಸ್ಟ್ ಕೊಸ್ಟ್ ಕಾಗದ ಕಾರ್ಖಾನೆಯ ಸಂಯುಕ್ತ ಆಶ್ರಯದಲ್ಲಿ ವಿಶ್ವ ರೇಬಿಸ್ ದಿನಾಚರಣೆಯ ನಿಮಿತ್ತವಾಗಿ ನಗರದ ಪಶುವೈದ್ಯ ಆಸ್ಪತ್ರೆಯಲ್ಲಿ ಶ್ವಾನಗಳಿಗೆ ಉಚಿತ ಲಸಿಕೆ ನೀಡುವ ಕಾರ್ಯಕ್ರಮವನ್ನು ಮಂಗಳವಾರ ಬೆಳಗ್ಗಿನಿಂದಲೇ ಹಮ್ಮಿಕೊಳ್ಳಲಾಗಿತ್ತು.

Advertisement

ಪಶುವೈದ್ಯ ಆಸ್ಪತ್ರೆಯ ಸಹಾಯಕ ನಿರ್ದೇಶಕರಾದ ಡಾ: ಕೆ.ಎಂ.ನದಾಫ್ ಅವರ ನೇತೃತ್ವದಲ್ಲಿ ನಡೆದ ರೇಬಿಸ್ ಚುಚ್ಚುಮದ್ದು ಹಾಕುವ ಶಿಬಿರದ ಯಶಸ್ಸಿಗೆ ಪಶುವೈದ್ಯ ಆಸ್ಪತ್ರೆಯ ಪಶು ಪರೀಕ್ಷಕರಾದ ಪಿ.ಜಿ.ಅವರಾಧಿ ಹಾಗೂ ಹಂಚಿನಮನಿ ಮತ್ತು ಸಿಬ್ಬಂದಿ ಸಂದೀಪ್ ಶಿರೋಡ್ಕರ್ ಅವರು ಸಹಕರಿಸಿದರು.

ಇದನ್ನೂ ಓದಿ:ಸಿಧು ರಾಜೀನಾಮೆ ಬಗ್ಗೆ ಅಮರೀಂದರ್ ಪ್ರತಿಕ್ರಿಯೆ | ಟ್ವಿಟ್ ಮಾಡಿ ದೆಹಲಿಗೆ ಹೊರಟ ಕ್ಯಾಪ್ಟನ್

ಉಚಿತ ರೇಬಿಸ್ ಲಸಿಕೆ ನೀಡುವ ಕಾರ್ಯಕ್ರಮವಾಗಿದ್ದು, ನಗರ ಹೆಚ್ಚಿನ ಜನರು ತಮ್ಮ ತಮ್ಮ ನಾಯಿಗಳಿಗೆ ರೇಬಿಸಿ ಲಸಿಕೆಯನ್ನು ಹಾಕಿಸಿಕೊಂಡರು. ವಿಶ್ವ ರೇಬಿಸ್ ದಿನಾಚರಣೆಯ ನಿಮಿತ್ತ ನಗರದ ಕನ್ಯಾ ವಿದ್ಯಾಲಯದಲ್ಲಿ ಮತ್ತು ಹಳೆ ದಾಂಡೇಲಿಯ ಉರ್ದು ಪ್ರೌಢಶಾಲೆಯಲ್ಲಿ ಡಾ: ಕೆ.ಎಂ.ನದಾಫ್ ಅವರು ರೇಬಿಸ್ ಚುಚ್ಚುಮದ್ದು ಅವಶ್ಯಕತೆ ಹಾಗೂ ರೇಬಿಸ್ ರೋಗ ಲಕ್ಷಣಗಳು ಮತ್ತು ರೇಬಿಸ್ ರೋಗದಿಂದಾಗಬಹುದಾದ ಅಪಾಯಗಳನ್ನು ವಿವರಿಸಿ ಮಾಹಿತಿಯನ್ನು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next