ದಾಂಡೇಲಿ : ಹೆಸ್ಕಾಂ ಉಪ ವಿಭಾಗ ವ್ಯಾಪ್ತಿಯಲ್ಲಿರುವ ಜೋಯಿಡಾ ತಾಲೂಕಿನ ಗಣೇಶಗುಡಿ – ಅನ್ಮೋಡ ಮಾರ್ಗದ ವಿದ್ಯುತ್ ಟವರ್ ಬಿದ್ದು, ಸಂಪೂರ್ಣ ಜಲಾವೃತಗೊಂಡಿದ್ದು, ಇದರಿಂದ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.
ಹಾಗೆಂದೂ ದುರಸ್ತಿ ಮಾಡಲು ಅಲ್ಲಿ ತೆರಳಬೇಕಾದರೇ ಟವರ್ ಇರುವ ಎರಡ್ಮೂರು ಕಿ.ಮೀ ವರೆಗೆ ನೀರು ತುಂಬಿಕೊಂಡಿದ್ದರಿಂದ ಅಲ್ಲಿಗೆ ಹೋಗಿ ದುರಸ್ತಿ ಮಾಡುವುದು ಕಷ್ಟಸಾಧ್ಯವಾಗಿತ್ತು.
ಅಂತಿಮವಾಗಿ ಪ್ರವಾಸೋದ್ಯಮಿ ರವಿಕುಮಾರ್.ಜಿ.ನಾಯಕ ರಾಪ್ಟ್ ಮತ್ತು ನುರಿತ ಸಿಬ್ಬಂದಿಗಳನ್ನು ಸ್ಥಳಕ್ಕೆ ಕಳುಹಿಸಿಕೊಟ್ಟು ದುರಸ್ತಿಗೆ ಸಹಕರಿಸಿದ್ದರು.
ಹೆಸ್ಕಾಂ ದಾಂಡೇಲಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಪುರುಷೋತ್ತಮ ಮಲ್ಯ ಮಾರ್ಗದರ್ಶನದಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ದೀಪಕ್ ನಾಯಕ ಸಹಕಾರದಲ್ಲಿ ಹೆಸ್ಕಾಂನ ಕಿರಿಯ ಅಭಿಯಂತರ ಜೈನುದ್ದೀನ್ ರೋಣ ನೇತೃತ್ವದಲ್ಲಿ 10 ಜನ ಸಿಬ್ಬಂದಿಗಳು ಜಲಾವೃತಗೊಂಡಿದ್ದ ವಿದ್ಯುತ್ ಟವರ್ ಇದ್ದ ಸ್ಥಳಕ್ಕೆ ರಾಪ್ಟ್ ಮೂಲಕ ಸಾಗಿ ದುರಸ್ತಿ ಕಾರ್ಯವನ್ನು ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಶೀಘ್ರಗತಿಯಲ್ಲಿ ದುರಸ್ತಿ ಕಾರ್ಯವನ್ನು ಮಾಡಿ ಇಲಾಖೆಯ ಘನತೆಯನ್ನು ಹೆಚ್ಚಿಸಿದ ಕಿರಿಯ ಅಭಿಯಂತರ ಜೈನುದ್ದೀನ್ ರೋಣ ಹಾಗೂ ಅವರ ನೇತೃತ್ವದ ಸಿಬ್ಬಂದಿಗಳ ಕಾರ್ಯಕ್ಕೆ ಕಾರ್ಯನಿರ್ವಾಹಕ ಅಭಿಯಂತರ ಪುರುಷೋತ್ತಮ ಮಲ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.