Advertisement

ದಾಂಡೇಲಿ ಯುವತಿ ಆತ್ಮಹತ್ಯೆ

05:55 PM Nov 26, 2021 | Team Udayavani |

ದಾಂಡೇಲಿ: ನಗರದ ಹಳಿಯಾಳ ರಸ್ತೆಯ 3 ನಂ ಗೇಟ್ ಪ್ರದೇಶದಲ್ಲಿ ಯುವತಿಯೊಬ್ಬಳು ನೇಣಿಗೆ ಶರಣಾದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.

Advertisement

ನಗರದ ಹಳಿಯಾಳ ರಸ್ತೆಯ 3 ನಂ ಗೇಟಿನ ನಿವಾಸಿ 24 ವರ್ಷ ವಯಸ್ಸಿನ ಅವಿವಾಹಿತೆ ಪ್ರಿಯಾಂಕಾ ವಿಶ್ವನಾಥ ಭಟ್ಕಳಕರ ಎಂಬ ಯುವತಿಯೆ ಆತ್ಮಹತ್ಯೆ ಮಾಡಿಕೊಂಡವಳಾಗಿದ್ದಾಳೆ.

ಈಕೆಯ ತಾಯಿ ಅನಾರೋಗ್ಯದಿಂದಿದ್ದು, ಚಿಕಿತ್ಸೆಗಾಗಿ ತಾಯಿಯನ್ನು ತಂದೆ ವಿಶ್ವನಾಥ ಭಟ್ಕಳಕರ ಅವರು ಧಾರವಾಡದ ಎಸ್.ಡಿ.ಎಂ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಮನೆಯಲ್ಲಿ ವಯಸ್ಸಾದ ಅಜ್ಜಿಯೊಬ್ಬರೆ ಇದ್ದಿದ್ದರು. ಈ ಸಮಯದಲ್ಲಿ ಪ್ರಿಯಾಂಕಾ ನೇಣಿಗೆ ಶರಣಾಗಿದ್ದಾಳೆ. ಮೃತಳ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದೆ.

ಆತ್ಮಹತ್ಯೆಗೆ ಕಾರಣ ಏನೆಂದು ತಿಳಿದು ಬಂದಿಲ್ಲ. ಈ ಬಗ್ಗೆ ನಗರ ಪೊಲೀಸ್ ಠಾಣೆಯ ಪಿಎಸೈಗಳಾದ ಯಲ್ಲಪ್ಪ.ಎಸ್, ಕಿರಣ್ ಪಾಟೀಲ ಅವರುಗಳು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next