Advertisement

Dandeli: 7 ತಿಂಗಳ ಹಿಂದೆ ಖರೀದಿಸಿದ್ದ ಎಲೆಕ್ಟ್ರಿಕ್ ಸ್ಕೂಟರಿಗೆ ಬೆಂಕಿ… ತಪ್ಪಿದ ಅನಾಹುತ

02:54 PM Jan 27, 2024 | Team Udayavani |

ದಾಂಡೇಲಿ: ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಘಟನೆ ನಗರದ ಜೆ.ಎನ್.ರಸ್ತೆಯಲ್ಲಿರುವ ಶ್ರೀಹರಿ ಚಿತ್ರಮಂದಿರ ಹತ್ತಿರದಲ್ಲಿ ಶನಿವಾರ ಬೆಳಿಗ್ಗೆ 11.30 ಗಂಟೆಗೆ ನಡೆದಿದೆ.

Advertisement

ಹಳೆದಾಂಡೇಲಿ‌ಯ ನಿವಾಸಿಯಾದ ಮಾನಸಿಂಗ್ ರಾಠೋಡ್ ಅವರು ರಸ್ತೆ ಬದಿ ನಿಲ್ಲಿಸಿದ್ದ ಎಲೆಕ್ಟ್ರಿಕ್ ಸ್ಕೂಟರ್ ನಿಲ್ಲಿಸಿದ್ದರು ಈ ವೇಳೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಈ ಸಂದರ್ಭದಲ್ಲಿ ಅಲ್ಲೇ ಇದ್ದ ಸಾರ್ವಜನಿಕರು ನೀರನ್ನು ಹಾಕಿ ಬೆಂಕಿಯನ್ನು ನಂದಿಸಿದ್ದಾರೆ. ಅದೃಷ್ಟವಶಾತ್ ಯಾವುದೆ ಅಹಿತಕರ ಘಟನೆ ನಡೆದಿಲ್ಲ. ಕೇವಲ 7 ತಿಂಗಳ ಹಿಂದೆಯಷ್ಟೆ ಖರೀದಿ ಮಾಡಲಾಗಿದ್ದ ಎಲೆಕ್ಟ್ರಿಕ್ ಸ್ಕೂಟರ್ ಬೆಂಕಿಗಾಹುತಿಯಾಗಿದ್ದು ಅಚ್ಚರಿಗೆ ಕಾರಣವಾಗಿದೆ. ಬ್ಯಾಟರಿ ಬಿಸಿಯಾಗಿ ಅಥವಾ ಶಾರ್ಟ್ ಸರ್ಕ್ಯೂಟಿನಿಂದಾಗಿ ಈ ಘಟನೆ ನಡೆದಿರಬಹುದೆಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: Hubli; ಭಾರತದ ನಂಬರ್ 1 ಆಗಲು ಯುವಕರು ಶ್ರಮಿಸಬೇಕು: ಇಸ್ರೋ ಮಾಜಿ ಅಧ್ಯಕ್ಷ ಡಾ.ಕಿರಣ್ ಕುಮಾರ್

Advertisement

Udayavani is now on Telegram. Click here to join our channel and stay updated with the latest news.

Next