ಕಾಪು: ಶ್ರೀ ಮಧ್ವಾಚಾರ್ಯ ಅವರು ಗುರುದಕ್ಷಿಣೆ ರೂಪದಲ್ಲಿ ದಂಡವೂರಿ ಸೃಷ್ಟಿಸಿದ, ಉಡುಪಿ ಪರ್ಯಾಯ ಪೀಠಾರೋಹಣ ಗೈಯ್ಯಲಿರುವ ಯತಿವರೇಣ್ಯರು ಪರ್ಯಾಯ ಪೂರ್ವಭಾವಿ ತೀರ್ಥ ಸ್ನಾನಗೈಯ್ಯುವ ದಂಡತೀರ್ಥ ಮಠದ ಶ್ರೀ ರಾಮಕೃಷ್ಣ ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ನಿರ್ಮಿಸಲಾದ ಮಧ್ವ ಮಂಟಪದಲ್ಲಿ ಬುಧವಾರ ಶ್ರೀ ಮಧ್ವಾಚಾರ್ಯರ ಬಿಂಬ ಪ್ರತಿಷ್ಠಾಪನ ಕಾರ್ಯಕ್ರಮ ನೆರವೇರಿತು.
ಭಾವೀ ಪರ್ಯಾಯ ಪೀಠಾಧಿಪತಿ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾ ಸಾಗರತೀರ್ಥ ಶ್ರೀಪಾದರು ಮತ್ತು ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಬಿಂಬ ಪ್ರತಿಷ್ಠಾಪೂರ್ವಕ ಧಾರ್ಮಿಕ ಕಾರ್ಯಕ್ರಮ ಗಳನ್ನು ನೆರವೇರಿಸಿದರು.
ಆ ಬಳಿಕ ಕಲಶಾಭಿಷೇಕ, ಮಹಾ ಪೂಜೆ ಮತ್ತು ಮಹಾ ಅನ್ನಸಂತರ್ಪಣೆ ಸಂಪನ್ನಗೊಂಡಿತು. ಅನುಗ್ರಹ ಸಂದೇಶ ನೀಡಿದ ಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು, ಆಚಾರ್ಯ ಮಧ್ವರು ದಂಡದ ಮೂಲಕ ಸೃಷ್ಟಿಸಿದ ದಂಡತೀರ್ಥ ಕೆರೆಯನ್ನು ಸ್ಮರಿಸಿಕೊಂಡರೆ ದೇಶವನ್ನು ಕಾಡುವ ಜಲ ಮೂಲದ ಕೊರತೆ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ ಎಂಬ ನಂಬಿಕೆಯಿದೆ. ಆಚಾರ್ಯ ಮಧ್ವರ ಬಿಂಬ ಪ್ರತಿಷ್ಠಾಪನೆಯ ಮೂಲಕ ದಂಡತೀರ್ಥ ಮಠವು ಧಾರ್ಮಿಕ ಮತ್ತು ಆಧ್ಯಾತ್ಮಿಕತೆ ಪಸರಿರುವ ತಾಣವಾಗಿ, ಪ್ರವಾಸಿ ತಾಣವಾಗಿ ರೂಪುಗೊಳ್ಳುತ್ತಿದೆ. ಮಧ್ವರ ಜೀವನಾದರ್ಶ ಮತ್ತು ತಣ್ತೀ ಸಂದೇಶಗಳ ಪ್ರಚಾರಕ್ಕೆ ಸೂಕ್ತ ಕ್ಷೇತ್ರವಾಗಿ ಇದು ಮಾರ್ಪಾಡಾಗಲಿ ಎಂದು ಹೇಳಿದರು.
ಇದನ್ನೂ ಓದಿ:ಹುಬ್ಬಳ್ಳಿಯಲ್ಲಿ ಪೈಲಟ್ ತರಬೇತಿ ಕೇಂದ್ರ: ಪ್ರಹ್ಲಾದ್ ಜೋಷಿ
ದಂಡತೀರ್ಥ ಪ್ರತಿಷ್ಠಾನದ ಅಧ್ಯಕ್ಷ ಸೀತಾರಾಮ ಭಟ್ ದಂಡತೀರ್ಥ, ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಉದ್ಯಮಿ ಮನೋಹರ್ ಶೆಟ್ಟಿ ಕಾಪು, ರತ್ನಾಕರ ಶೆಟ್ಟಿ ನಡಿಕೆರೆ ಉಪಸ್ಥಿತರಿದ್ದರು.