Advertisement

ಕಾಳಿ ನದಿ ತೀರದ ದಂಡಕಾರಣ್ಯ

09:45 PM Dec 13, 2019 | Lakshmi GovindaRaj |

ಉತ್ತರ ಕನ್ನಡದ, ಕಾಳಿನದಿಯ ತಟದಲ್ಲಿರುವ ದಾಂಡೇಲಿಯು ತನ್ನ ಪ್ರಾಕೃತಿಕ ಮೈಸಿರಿಯಿಂದಲೇ ಜನಪ್ರಿಯ. ಈ ಪ್ರದೇಶದ ಹೆಸರಿನ ಹಿಂದೆ, ಮೂರು ವಾದಗಳನ್ನು ಕೇಳಬಹುದು. ದಂಡಕಾರಣ್ಯದಂಥ ಕಾಡು ಇದ್ದಿದ್ದರಿಂದ ಇಲ್ಲಿಗೆ “ದಾಂಡೇಲಿ’ ಎಂಬ ಹೆಸರು ಬಂತು ಎನ್ನುವ ವಾದ ಒಂದು. ದಾಂಡೇಲಪ್ಪನ ನೆಲೆವೀಡು ಇದಾಗಿದ್ದರಿಂದ, ಅವನ ಹೆಸರನ್ನೇ ಈ ಪ್ರದೇಶಕ್ಕೆ ಇಡಲಾಗಿದೆ ಎಂದೂ ಸ್ಥಳೀಯರು ಹೇಳುತ್ತಾರೆ. ಇದಕ್ಕೆ ಪೂರಕವಾಗಿ ಈಗಲೂ ಇಲ್ಲೊಂದು ದಾಂಡೇಲಪ್ಪ ಸ್ವಾಮಿಯ ದೇವಸ್ಥಾನವನ್ನು ಕಾಣಬಹುದು. ದಂಡಕ ನಾಯಕ ಎಂಬ ರಾಜ, ಈ ಕಾಡಿನ ಸೌಂದರ್ಯಕ್ಕೆ ಮನಸೋತು, ಈ ಪ್ರದೇಶಕ್ಕೆ ತನ್ನ ಹೆಸರನ್ನೇ ಇಟ್ಟ ಎನ್ನುವ ವಾದವೂ ಇದೆ.

Advertisement

* ವಿಶ್ವಾಸ್‌ ಕಾಮತ್‌, ಜೋಗ

Advertisement

Udayavani is now on Telegram. Click here to join our channel and stay updated with the latest news.

Next