ಮೈಸೂರು: ಮೈಸೂರಿನ ನೃತ್ಯಗಿರಿ ಪ್ರದರ್ಶಕ ಕಲೆಗಳ ಸಂಶೋಧನಾ ಕೇಂದ್ರದವತಿಯಿಂದ ಶುಕ್ರವಾರ (ಮಾ.9) ನೃತ್ಯನಮನ ಭರತನಾಟ್ಯ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಕುವೆಂಪುನಗರದ ಗಾನಭಾರತೀ, ವೀಣೆಶೇಷಣ್ಣ ಭವನದಲ್ಲಿ ಅಂದು ಸಂಜೆ 6.30ರಿಂದ 7.30ರವರೆಗೆ ನೃತ್ಯನಮನ ಕಾರ್ಯಕ್ರಮದಲ್ಲಿ ನೃತ್ಯಗಿರಿಯ ಯುವ ಕಲಾವಿದೆ ದಕ್ಷಿಣ ಕನ್ನಡದ ಬೆಳ್ತಂಗಡಿ ಮೂಲದ ದಿವಾಕರ ಫಡೆ ಮತ್ತು ಶೈಲಾ ಫಡೆ ಅವರ ಮಗಳು ವಿದುಷಿ ಪಂಚಮಿ ಫಡೆR ಅವರು ಭರತನಾಟ್ಯ ನೃತ್ಯ ಪ್ರದರ್ಶನ ನೀಡಲಿದ್ದಾರೆ.
ನೃತ್ಯವಿಂಶತಿ ಪ್ರಯುಕ್ತ ನೃತ್ಯಗಿರಿಯ ವಿದ್ಯಾರ್ಥಿನಿಯರು ತಿಂಗಳ ಕಾರ್ಯಕ್ರಮ ನೀಡಲಿದ್ದು, ಈ ತಿಂಗಳು ಸುಮಾರು 11 ವಿದ್ಯಾರ್ಥಿನಿಯರು ವೇದಿಕೆ ಅನುಭವಪಡೆಯಲಿದ್ದಾರೆ. ರಾತ್ರಿ 7.30 ರಿಂದ 8.30ರವರೆಗೆ ನೃತ್ಯಗಿರಿಯ ಹಿರಿಯ ವಿದ್ಯಾರ್ಥಿನಿಯರಾದ ವಿದುಷಿ ಅಮೃತ ಜಿ.,
ವಿದುಷಿ ವಿಸ್ಮಿತ, ಕಾತ್ಯಾಯಿನಿ ಎಸ್.ಸಿ., ಕು.ಸುರûಾ, ಕು.ತನುಜಾ ಹೆಗಡೆ,ಕು.ಅಕ್ಷತಾ ಎನ್.ಎಸ್., ಕು.ಆಶಿಕಾ ರಾಜನ್, ಕು.ಪೂಜಾ ಸುಗಮ್, ಕು.ತೇಜಶ್ರೀ ಮೂರ್ತಿ, ಕು.ಲಕ್ಷ್ಮೀ ಎನ್.ಎಸ್. ಶ್ರೀ ರಾಮಾಯಣ ದರ್ಶನಂ (ಭಾವಯಾಮಿ ರಘುರಾಮಂ) ನೃತ್ಯ ರೂಪಕವನ್ನು ಪ್ರದರ್ಶಿಸಲಿದ್ದಾರೆ.
ಹಿಮ್ಮೇಳದಲ್ಲಿ ನಟುವಾಂಗ- ವಿದುಷಿ ಡಾ.ಕೃಪಾಫಡೆ, ಗಾಯನ-ವಿದ್ವಾನ್ ದೀಪು ನಾಯರ್, ಮೃದಂಗ- ವಿದ್ವಾನ್ ಶಿವಶಂಕರ ಸ್ವಾಮಿ, ಕೊಳಲು- ವಿದ್ವಾನ್ ಎ.ಪಿ.ಕೃಷ್ಣಪ್ರಸಾದ್ ಭಾಗವಹಿಸಲಿದ್ದಾರೆ ಎಂದು ನೃತ್ಯಗಿರಿ ಪ್ರದರ್ಶಕ ಕಲೆಗಳ ಸಂಶೋಧನಾ ಕೇಂದ್ರದ ನಿರ್ದೇಶಕರಾದ ಡಾ.ಕೃಪಾಫಡೆ ತಿಳಿಸಿದ್ದಾರೆ.