ಸಾಮಾಜಿಕ ಜಾಲತಾಣಗಳಲ್ಲಿ ಕಂಟೆಂಟ್ ಕ್ರಿಯೇಟರ್‌ಗಳಿಗೇನೂ ಬರವಿಲ್ಲ. ಅದೇ ರೀತಿ ಈಗ ವಿಶೇಷ ನೃತ್ಯದ ಮೂಲಕ ಮನರಂಜನೆ ಕೊಟ್ಟಿರುವ ವಿಡಿಯೋವೊಂದು ವೈರಲ್ ಆಗಿದೆ.
Advertisement
ನೃತ್ಯ ಸಂಯೋಜಕಿ ಉಷಾ ಜೆಯ್ ಅವರ ವಿಡಿಯೋ ಅದಾಗಿದೆ. ಹಿಪ್‌ಹಾಪ್ ನೃತ್ಯಕ್ಕೆ ಹೊಂದುವಂತಹ ಆಡಿಯೋ ಒಂದಕ್ಕೆ ಮೂರು ಭರತನಾಟ್ಯ ಕಲಾವಿದರು ಹೆಜ್ಜೆ ಹಾಕಿದ್ದಾರೆ.
ಫ್ರೀ ಸ್ಟೈಲ್ ಹಿಪ್‌ಹಾಪ್ ಜತೆ ಜತೆಗೆ ಭರತನಾಟ್ಯದ ಹೆಜ್ಜೆಯನ್ನೂ ಹಾಕಿರುವ ಈ ವಿಡಿಯೋವನ್ನು ನೋಡಿ ನೆಟ್ಟಿಗರು “ವಾವ್’ ಎನ್ನಲಾರಂಭಿಸಿದ್ದಾರೆ. ಈ ಎರಡೂ ನೃತ್ಯ ಶೈಲಿಯನ್ನು ಅತಿ ಹೆಚ್ಚು ಇಷ್ಟಪಡುವುದಾಗಿ ಉಷಾ ಅವರು ವಿಡಿಯೋದ ಕ್ಯಾಪ್ಶನ್‌ನಲ್ಲಿ ಹೇಳಿಕೊಂಡಿದ್ದಾರೆ.