Advertisement

ಭಾರತದ ನೃತ್ಯ: ಶಿಕ್ಷೆ

12:30 AM Feb 17, 2019 | |

ಕರಾಚಿ: ಪಾಕಿಸ್ಥಾನದ ಕರಾಚಿಯಲ್ಲಿನ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳು ಭಾರತದ ಹಾಡಿಗೆ ನೃತ್ಯ ಮಾಡುತ್ತಾ, ತ್ರಿವರ್ಣ ಧ್ವಜವನ್ನು ಹಾರಿಸಿದ್ದಕ್ಕೆ ಆ ಶಾಲೆಯ ನೋಂದಣಿಯನ್ನೇ ರದ್ದು ಮಾಡಲಾಗಿದೆ! ಮಾಮಾ ಬೇಬಿಕೇರ್‌ ಕೇಂಬ್ರಿಡ್ಜ್ ಸ್ಕೂಲ್‌ನಲ್ಲಿ ಇತ್ತೀಚೆಗೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಲ್ಲಿ ಪುಟಾಣಿಗಳು “ಫಿರ್‌ ಬಿ ದಿಲ್‌ ಹೇ ಹಿಂದೂಸ್ಥಾನಿ’ ಹಾಡಿಗೆ ನೃತ್ಯ ಮಾಡಿದ್ದರು. ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಶಾಲೆಯ ಮಾಲೀಕರಿಗೆ ಸ್ಥಳೀಯಾಡಳಿತ ಶೋಕಾಸ್‌ ನೋಟಿಸ್‌ ಜಾರಿ ಮಾಡಿತ್ತು. ಆದರೆ, ಮಾಲೀಕರು ಅದನ್ನು ನಿರ್ಲಕ್ಷಿಸಿದ್ದರು. ಹೀಗಾಗಿ ಶಾಲೆಯ ನೋಂದಣಿಯನ್ನೇ ರದ್ದು ಮಾಡಲಾಗಿದೆ. ಈ ಕುರಿತು ಮಾತನಾಡಿರುವ ಉಪಪ್ರಾಂಶುಪಾಲೆ ಫಾತಿಮಾ, ಎಲ್ಲ ದೇಶಗಳ ಸಂಸ್ಕೃತಿಯನ್ನೂ ಮಕ್ಕಳು ಅರಿಯಲಿ ಎಂಬ ಕಾರಣಕ್ಕೆ ಈ ಕಾರ್ಯಕ್ರಮ ಆಯೋಜಿಸಿದ್ದೆವು. ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next