ಚಿತ್ರದ ಬಿಡುಗಡೆ ಪತ್ರಿಕಾಗೋಷ್ಠಿ ನಡೆಯಿತು.
Advertisement
ಇದೊಂದು ನೃತ್ಯ ಪ್ರಧಾನ ಚಿತ್ರವಂತೆ. “ಬಿಂದಾಸ್ ತರಹ ಇರುವ ಹುಡುಗರು, ಗೂಗ್ಲಿ ತರಹ ಡ್ಯಾನ್ಸ್ ಮಾಡುವ ಕಥೆ ಇದು. ಈ ಚಿತ್ರದ ಮೂಲಕ ಓದಿನಷ್ಟೇ ಕಲೆ ಸಹ ಮುಖ್ಯ ಎಂದು ಹೇಳುತ್ತಿದ್ದೇವೆ. ಎಷ್ಟೋ ಜನರಿಗೆ ನೃತ್ಯ ಮಾಡುವ ಉತ್ಸಾಹವಿರುತ್ತದೆ. ಆದರೆ, ಅದಕ್ಕೆ ಮಾರ್ಗದರ್ಶನವಾಗಲೀ, ವೇದಿಕೆಯಾಗಲೀ ಇರುವುದಿಲ್ಲ. ಹಾಗಿರುವಾಗ ಉತ್ಸಾಹಿಗಳು ಹೇಗೆ ಬೆಳೆಯುತ್ತಾರೆ ಎಂದು ಹೇಳುತ್ತಿದ್ದೇವೆ. ಚಿತ್ರದಲ್ಲಿ 11 ಹಾಡುಗಳಿವೆ. ಇನ್ನು ಹಿನ್ನೆಲೆ ಸಂಗೀತ ಸಹ ಬಹಳ ಚೆನ್ನಾಗಿ ಮೂಡಿಬಂದಿದೆ’ ಎನ್ನುತ್ತಾರೆ ಸಂತೋಷ್. ಹಿರಿಯ ನಟರಾದ ರಾಮಕೃಷ್ಣ ಮತ್ತು
ಕೀರ್ತಿರಾಜ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಧರ್ಮ ಕೀರ್ತಿರಾಜ್ ಡ್ಯಾನ್ಸ್ ಕೋಚ್ ಆಗಿ ನಟಿಸಿದರೆ, ವಾಣಿಶ್ರೀ
ನಾಯಕನಾಗಿ ತಾಯಿಯಾಗಿ ಕಾಣಿಸಿಕೊಂಡಿದ್ದಾರೆ. ಅವರೆಲ್ಲರೂ ಚಿತ್ರದಲ್ಲಿನ ತಮ್ಮ ಪಾತ್ರಗಳ ಬಗ್ಗೆ ಹೇಳಿಕೊಂಡರು. ಚಿತ್ರಕ್ಕೆ ವಿನು ಮನಸು ಸಂಗೀತ ಸಂಯೋಜಿಸಿದ್ದು, ಮ್ಯಾಥ್ಯೂ ರಾಜನ್ ಛಾಯಾಗ್ರಹಣ ಮಾಡಿದ್ದಾರೆ.