Advertisement

ಡ್ಯಾನ್ಸ್‌ ಡಾಕ್ಯುಮೆಂಟರಿ! 

04:21 PM Feb 03, 2018 | Team Udayavani |

ಭಾರತದಲ್ಲಿ ಗುರು ಶಿಷ್ಯ ನೃತ್ಯ ಪರಂಪರೆಗೆ ದೊಡ್ಡ ಇತಿಹಾಸವೇ ಇದೆ. ಈ ಕುರಿತು ತಯಾರಾಗಿಸುವ ಸಾಕ್ಷ್ಯಚಿತ್ರ “ನೃತ್ಯಂ ಶಿವಂ’ ಪ್ರದರ್ಶನ ನಗರದಲ್ಲಿ ನಡೆಯುತ್ತಿದೆ. ಮುಂಬರುವ ದಿನಗಳಲ್ಲಿ ಕಥಕ್‌ ನೃತ್ಯ ಯಾವ ಯಾವ ಮಾರ್ಪಾಡುಗಳಿಗೆ ಒಳಗಾಗಲಿದೆ ಮುಂತಾದ ವಿಚಾರಗಳ ಕುರಿತು ಡಾಕ್ಯುಮೆಂಟರಿ ಬೆಳಕು ಚೆಲ್ಲಲಿದೆ.

Advertisement

ಕೊಳಲು ವಾದಕ ಪ್ರವೀಣ್‌ ಗೋಡಿಂಡಿ, ಸುರೇಶ್‌ ಅರಸ್‌ ಅವರ ಸಂಕಲನವಿರುವ ಈ ಸಾಕ್ಷ್ಯಚಿತ್ರದ ಪರಿಕಲ್ಪನೆ ಮತ್ತು ನಿರ್ದೇಶನ ಕಥಕ್‌ ಗುರು ರೂಪಾ ರವೀಂದ್ರನ್‌ ಅವರದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾರದಾ ಮಠದ ಅಧ್ಯಕ್ಷರಾಗಿರುವ ಪ್ರವ್ರಾಜಿಕ ಗೀತಾಪ್ರಾಣ ಮಾತಾಜಿ ಅವರು ವಹಿಸಿಕೊಳ್ಳಲಿದ್ದಾರೆ. ಸಾಯಿ ಆರ್ಟ್ಸ್ ಇಂಟರ್‌ನ್ಯಾಷನಲ್‌ ಸಂಸ್ಥೆಯ ನಿರ್ದೇಶಕಿ ಸುಪರ್ಣಾ ವೆಂಕಟೇಶ್‌ ಅವರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಎಲ್ಲಿ?: ಶ್ರೀ ಶಾರದಾ ಮಠ, ನಂದಿದುರ್ಗ ರಸ್ತೆ
ಯಾವಾಗ?: ಫೆ. 4, ಸಂಜೆ 5.30

Advertisement

Udayavani is now on Telegram. Click here to join our channel and stay updated with the latest news.

Next