Advertisement
ಇದು ಕೇಳ್ಳೋಕೆ ಬಹಳ ಸುಲಭ ಅನಿಸಿಬಿಡುತ್ತದೆ. ಆದರೆ, ಈ ಮ್ಯಾಜಿಕನ್ನು ಮಾಡಬೇಕಾದರೆ ಸ್ವಲ್ಪ ಪೂರ್ವ ತಯಾರಿ ಅಗತ್ಯ. ಅಂದರೆ, ಒಂದಷ್ಟು ಸರ್ಕಸ್ ಮಾಡಲೇಬೇಕಾಗುತ್ತದೆ. ಅದು ಹೇಗೆಂದರೆ, ಒಂದು ಬಾಣಲೆಯಲ್ಲಿ ಸುಮಾರು ಅರ್ಧ ಕಿಲೋ ಶುದ್ಧವಾದ ಮರಳನ್ನು ಹಾಕಿ. ಮರಳು ತೀರಾ ನಯವಾಗಿರದೆ ಸ್ವಲ್ಪ ಹರಳು ಹರಳಾಗಿರಲಿ. ಬಾಣಲೆಯನ್ನು ಸ್ಟೌ ಮೇಲೆ ಇಟ್ಟು ಉಪ್ಪಿಟ್ಟಿಗೆ ರವೆಯನ್ನು ಫ್ರೈ ಮಾಡಿದಂತೆ ಮಾಡಿ. ಮರಳು ಕಾದ ನಂತರ ಇದಕ್ಕೆ ಒಂದು ಮೇಣದ ಬತ್ತಿಯನ್ನು ಚಿಕ್ಕ, ಚಿಕ್ಕ ಚೂರುಗಳನ್ನಾಗಿ ಮಾಡಿ ಹಾಕಿ. ಇನ್ನೂ ಚೆನ್ನಾಗಿ ಫ್ರೈ ಮಾಡಿ (ಮೇಣದ ಬತ್ತಿಯ ಬದಲಿಗೆ ಒಳ್ಳೆಯ ಜೇನು ಮೇಣವನ್ನೂ ಬೇಕಾದರೆ ಉಪಯೋಗಿಸಬಹುದು). ಈಗ ಮರಳಿನ ಹರಳುಗಳ ಮೇಲೆ ಮೇಣದ ತೆಳುವಾದ ಲೇಪನವಾಗುತ್ತದೆ. ನಂತರ ಮರಳನ್ನು ಆರಲು ಬಿಡಿ. ಈ ರೀತಿ ಮೇಣದ ಲೇಪನ ಆಗಿರುವ ಕಾರಣ ಮರಳು ನೀರಲ್ಲಿ ಮುಳುಗಿದರೂ ಒದ್ದೆಯಾಗುವುದಿಲ್ಲ.
Advertisement
ಒದ್ದೆಯಾಗದ ಮರಳು
07:23 PM Jan 15, 2020 | Sriram |
Advertisement
Udayavani is now on Telegram. Click here to join our channel and stay updated with the latest news.