Advertisement

ದಿ| ದಾಮೋದರ ಆರ್‌. ಸುವರ್ಣ ಸ್ಮಾರಕ; ಕುಂಜತ್ತಬೈಲಿನಲ್ಲಿ “ಬಿಲ್ಲವ ಹಾಸ್ಟೆಲ್‌’ ಉದ್ಘಾಟನೆ

12:38 AM Sep 25, 2023 | Team Udayavani |

ಮಂಗಳೂರು: ಧಾರ್ಮಿಕ ಕೇಂದ್ರಗಳು ಇರುವಂತೆಯೇ ಉತ್ತಮ ಮನುಷ್ಯ ನಿರ್ಮಾಣದ ಸಂಕಲ್ಪದಿಂದ ವಿವಿಧ ಕಡೆಗಳಲ್ಲಿ ಶಿಕ್ಷಣ ಮಂದಿರದ ನಿರ್ಮಾಣಕ್ಕೆ ವಿಶೇಷ ಒತ್ತು ನೀಡಬೇಕಿದೆ. ಶಿಕ್ಷಣದಿಂದ ಶಕ್ತಿ ಎಂಬ ಬ್ರಹ್ಮಶ್ರೀ ನಾರಾಯಣ ಗುರುಗಳ ಮಾರ್ಗದರ್ಶನ ನಮ್ಮೆಲ್ಲರಿಗೂ ಮಾದರಿ ಎಂದು ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಹೇಳಿದರು.

Advertisement

ಅಖಿಲ ಭಾರತ ಬಿಲ್ಲವರ ಯೂನಿಯನ್‌ ವತಿಯಿಂದ ಮಂಗಳೂರಿನ ಕುಂಜತ್ತಬೈಲಿನಲ್ಲಿ ನಿರ್ಮಾಣಗೊಂಡ ದಿ| ದಾಮೋದರ ಆರ್‌. ಸುವರ್ಣ ಸ್ಮಾರಕ “ಬಿಲ್ಲವ ಹಾಸ್ಟೆಲ್‌’ ಅನ್ನು ಕುದ್ಮಲ್ ರಂಗರಾವ್‌ ಪುರಭವನದಲ್ಲಿ ರವಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಶೈಕ್ಷಣಿಕ ಕೊಡುಗೆ
ಕಾರ್ಯಕ್ರಮ ಉದ್ಘಾಟಿಸಿದ ವಿಧಾನಸಭಾ ಸ್ಪೀಕರ್‌ ಯು.ಟಿ. ಖಾದರ್‌ ಮಾತನಾಡಿ,ಅಖಿಲ ಭಾರತ ಬಿಲ್ಲವರ ಯೂನಿಯನ್‌ ಬಿಲ್ಲವ ಹಾಸ್ಟೆಲ್‌ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಬಹುದೊಡ್ಡ ಕೊಡುಗೆ ನೀಡಿದೆ. ವಿದ್ಯಾರ್ಥಿ ಸಮುದಾಯ ಇಂತಹ ಅವಕಾಶಗಳನ್ನು ಸದುಪ ಯೋಗಪಡಿಸಿಕೊಳ್ಳಬೇಕು. ಉತ್ತಮ ಶಿಕ್ಷಣದ ಮೂಲಕ ಸದೃಢ ಸಮಾಜ ನಿರ್ಮಿಸಬೇಕು ಎಂದರು.

ಶ್ಲಾಘನೀಯ: ನಳಿನ್‌
ಸಂಸದ ನಳಿನ್‌ ಕುಮಾರ್‌ ಕಟೀಲು ಮಾತನಾಡಿ, ನಾರಾಯಣ ಗುರುಗಳು ಅಧ್ಯಾತ್ಮ ಕ್ರಾಂತಿಪುರುಷನಾಗಿ ಅಕ್ಷರದಿಂದ ಜ್ಞಾನ, ಜ್ಞಾನದಿಂದ ವಿಜ್ಞಾನ, ವಿಜ್ಞಾನದಿಂದ ತಂತ್ರಜ್ಞಾನ, ತಂತ್ರಜ್ಞಾನದಿಂದ ತಂತ್ರಾಂಶ ಜ್ಞಾನವನ್ನು ಈ ನಾಡಿಗೆ ಕೊಟ್ಟಿದ್ದಾರೆ. ಗುರುಗಳ ಚಿಂತನೆಯಂತೆ ನವೀನ್‌ಚಂದ್ರ ಡಿ. ಸುವರ್ಣರ ಕುಟುಂಬವು ಬಿಲ್ಲವ ಹಾಸ್ಟೆಲ್‌ ಸಮಾಜಕ್ಕೆ ಅರ್ಪಿಸಿರುವುದು ಶ್ಲಾಘನೀಯ ಎಂದರು.

ಅಖೀಲ ಭಾರತ ಬಿಲ್ಲವರ ಯೂನಿಯನ್‌ ಅಧ್ಯಕ್ಷ ನವೀನ್‌ಚಂದ್ರ ಡಿ. ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಉದ್ಯಮ ಕ್ಷೇತ್ರದ ಸಾಧಕರಾದ ಸುಶೀರ್‌ ಕುಮಾರ್‌ ಮತ್ತು ಬಾಬ ಅಲಂಕಾರ್‌ ಅವರನ್ನು ಸಮ್ಮಾನಿಸಲಾಯಿತು.
ಶಾಸಕರಾದ ಉಮಾನಾಥ ಕೋಟ್ಯಾನ್‌, ವೇದವ್ಯಾಸ ಕಾಮತ್‌, ವಿಧಾನ ಪರಿಷತ್‌ ಸದಸ್ಯ ಹರೀಶ್‌ ಕುಮಾರ್‌, ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು, ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ, ಸಣ್ಣ ಕೈಗಾರಿಕಾ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಉದಯಚಂದ್ರ ಡಿ. ಸುವರ್ಣ, ಮುಂಬಯಿ ಬಿಲ್ಲವ ಚೇಂಬರ್‌ ಆಫ್‌ ಕಾಮರ್ಸ್‌ ಅಧ್ಯಕ್ಷ ಎನ್‌.ಟಿ. ಪೂಜಾರಿ, ಮುಂಬಯಿ ಬಿಲ್ಲವ ಅಸೋಸಿಯೇಶನ್‌ ಅಧ್ಯಕ್ಷ ಹರೀಶ್‌ ಜೆ. ಅಮೀನ್‌, ಬೆಂಗಳೂರು ಬಿಲ್ಲವರ ಅಸೋಸಿಯೇಶನ್‌ ಅಧ್ಯಕ್ಷ ವೇದಕುಮಾರ್‌, ಅಖೀಲ ಭಾರತ ಬಿಲ್ಲವರ ಮಹಿಳಾ ಸಂಘ ಅಧ್ಯಕ್ಷ ಸುಮಲತಾ ಎನ್‌. ಸುವರ್ಣ, ಕಾರ್ಪೊರೇಟರ್‌ ಶರತ್‌ ಕುಮಾರ್‌ ಉಪಸ್ಥಿತರಿದ್ದರು.

Advertisement

ಎಂ.ಎಸ್‌. ಕೋಟ್ಯಾನ್‌ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಜೀವನ್‌ ಕುಮಾರ್‌ ವಂದಿಸಿದರು. ಕೇಶವ ಬಂಗೇರ ಮತ್ತು ಪ್ರಮೀಳಾ ನಿರೂಪಿಸಿದರು.

ಶಿಕ್ಷಣದಲ್ಲಿ ಗುರುಗಳ ಚಿಂತನೆ
ಮುಖ್ಯ ಅತಿಥಿಯಾಗಿದ್ದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, ನಾರಾಯಣ ಗುರುಗಳ ತಣ್ತೀ, ಆದರ್ಶಗಳನ್ನು ಪಾಲಿಸುವಲ್ಲಿ ನಾವು ಹಿಂದುಳಿದಿದ್ದೇವೆ. ಶೈಕ್ಷಣಿಕವಾಗಿ ನಾವು ಸಶಕ್ತರಾದರೆ ಮಾತ್ರ ಸಮಾಜ ಶಕ್ತಿಯುತವಾಗಲಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಶಿಕ್ಷಣ ಇಲಾಖೆಯಲ್ಲೂ ಗುರುಗಳ ಚಿಂತನೆಯನ್ನು ಅಳವಡಿಸಿಕೊಳ್ಳಲಾಗುವುದು ಎಂದರು.

ಬಡ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌
ಹಿಂದುಳಿದ ಸಮಾಜದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿ ಅವರು ಸಮಾಜದಲ್ಲಿ ಉತ್ತಮ ಸಾಧನೆ ಮಾಡುವ ದೃಷ್ಟಿಯಿಂದ ಬಿಲ್ಲವ ಹಾಸ್ಟೆಲ್‌ ನಿರ್ಮಿಸಲಾಗಿದೆ. ಈ ಹಾಸ್ಟೆಲ್‌ನಲ್ಲಿ ಬಡ ವಿದ್ಯಾರ್ಥಿಗಳಿಗೆ ಉಚಿತ ವ್ಯವಸ್ಥೆ ನೀಡಲಾಗುವುದು ಎಂದು ಯೂನಿಯನ್‌ ಅಧ್ಯಕ್ಷ ನವೀನ್‌ಚಂದ್ರ ಡಿ. ಸುವರ್ಣ ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next