Advertisement

ಐವತ್ತು ಎಕರೆಗೂ ಹೆಚ್ಚು ಬೆಳೆ ಮಣ್ಣು ಪಾಲು

06:37 PM Aug 12, 2022 | Team Udayavani |

ಸಕಲೇಶಪುರ: ದೂರದೃಷ್ಟಿಯಿಲ್ಲದೆ ಅವೈಜ್ಞಾನಿಕವಾಗಿ ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪತ ರಸ್ತೆ ಕಾಮಗಾರಿ ಮಾಡಿದ ಪರಿಣಾಮ ಐವತ್ತಕ್ಕೂ ಹೆಚ್ಚು ಎಕರೆ ಜಮೀನಿನ ಬೆಳೆ ನಾಶಕ್ಕೆ ಕಾರಣವಾಗಿದೆ. ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪತ ರಸ್ತೆ ಕಾಮಗಾರಿಗಾಗಿ ತಾಲೂಕಿನ ದೋಣಿಗಾಲ್‌ ಗ್ರಾಮದ ಸಮೀಪ ಅವೈಜ್ಞಾನಿಕವಾಗಿ ಸುರಿದಿದ್ದ ಐವತ್ತು ಸಾವಿರಕ್ಕೂ ಅಧಿಕ ಲೋಡ್‌ ಮಣ್ಣಿನಿಂದಾಗಿ ಸೃಷ್ಟಿಯಾಗಿದ್ದ ಕೃತಕ ಕೆರೆ ಬುಧವಾರ ರಾತ್ರಿ ಬಿದ್ದ ಭಾರೀ
ಮಳೆ-ಗಾಳಿಯಿಂದಾಗಿ ಒಡೆದಿದೆ.

Advertisement

ಅಪಾರ ಬೆಳೆ ನಾಶ: ಇದರಿಂದಾಗಿ ದೋಣಿಗಾಲ್‌ ಏಲಕ್ಕಿ ಸಂಶೋಧನಾ ಮಂಡಳಿ ಏಲಕ್ಕಿ ತೋಟ ಸೇರಿದಂತೆ 15 ಖಾತೆದಾರರ ಸುಮಾರು ಐವತ್ತು ಎಕರೆಗೂ ಅಧಿಕ ಕಾಫಿ, ಅಡಕೆ ಹಾಗೂ ಏಲಕ್ಕಿ ತೋಟ ಹಾಗೂ ಅಷ್ಟೇ ಪ್ರಮಾಣದ ನಾಟಿ ಮಾಡಿದ ಭತ್ತದ ಗದ್ದೆ ಗಳು, ಬೆಳೆಗಳು ನಾಶವಾಗಿವೆ. ಇದಲ್ಲದೆ, ಸೌರಾಗ್‌, ಮಸ್ತಾರೆ ಲೋಕೇಶ್‌, ವೀರಭದ್ರ, ರಾಜ್‌, ರಾಣಿ ಮಲ್ಲೇಶ್‌, ಸುಲೋಚನಾ, ದೊಡ್ಡಮ್ಮ, ಮುತ್ತಮ್ಮ, ಕಮಲ ಮ್ಮ ಎಂಬುವವರಿಗೆ ಸೇರಿದ ಕಾಫಿ
ತೋಟ ಗದ್ದೆಗಳು ಸೇರಿದಂತೆ ಸುಮಾರು ಐದು ಕೆರೆಗಳು ಮುಚ್ಚಿಹೋಗಿವೆ. ಬಸವಣ್ಣ ಎಂಬುವರ ಮೋಟರ್‌ ಮನೆ ಸಂಪೂರ್ಣವಾಗಿ ಕೆಸರಿನಿಂದ ಮುಚ್ಚಿ ಹೋಗಿದೆ. ಮತ್ತೆ ಕೆಲವು ಮೋಟಾರ್‌ಗಳು ಕೊಚ್ಚಿಕೊಂಡು ಹೋಗಿವೆ. ಅಪಾರ ನಷ್ಟ ಸಂಭವಿಸಿದೆ.

ಘಟನ ಸ್ಥಳದಿಂದ ಸುಮಾರು ಎರಡು ಕಿ.ಮೀ. ದೂರದಲ್ಲಿನ ರೈಲ್ವೆ ಕಂಬಿಯ ಮೇಲೂ ಮಣ್ಣು ಶೇಖರಣೆಗೊಂ ಡಿತ್ತು. ತಕ್ಷಣವೆ ಎಚ್ಚೆತ್ತ ರೈಲ್ವೆ ಅಧಿಕಾರಿಗಳು ರಾತ್ರೋರಾತ್ರಿ ಮಣ್ಣನ್ನು ತೆರವುಗೊಳಿಸಿ ರೈಲು ಸಂಚಾರಕ್ಕೆ ಅನುವು ಮಾಡಿ ಕೊಟ್ಟರು.ಇದರಿಂದಾಗಿ ರಾತ್ರಿ 10 ಗಂಟೆಗೆ ಬೆಂಗಳೂರಿನಿಂದ ಮಂಗಳೂರಿಗೆ ಸಂಚರಿಸುವ ರೈಲು ಸುಮಾರು ಎರಡು ಗಂಟೆಗಳ ಕಾಲ ವಿಳಂಬವಾಗಿ ಸಂಚರಿಸಿತು.

ಪ್ರತಿಭಟನೆ: ಬುಧವಾರ ರಾತ್ರಿ 8 ಗಂಟೆ ವೇಳೆ ಘಟನೆ ನಡೆದಿದೆ. ಆದರೆ, ಗುರುವಾರ ಮಧ್ಯಾಹ್ನವಾದರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಅಥವಾ ಕಂದಾಯ ಇಲಾಖೆ ಅಧಿಕಾರಿಗಳಾಗಲಿ ಸ್ಥಳಕ್ಕೆ ಬಾರದಿರುವುದನ್ನು ಖಂಡಿಸಿ ಪರಿಹಾರಕ್ಕೆ ಆಗ್ರಸಿ ದೋಣಿಗಾಲ್‌ , ಕಪ್ಪಳ್ಳಿ, ಹುಲ್ಲಹಳ್ಳಿ ಗ್ರಾಮಸ್ಥರು ಹೆದ್ದಾರಿಗೆ ವಾಹನಗಳನ್ನು ಅಡ್ಡ ನಿಲುಗಡೆ ಮಾಡುವ ಮೂಲಕ ಸಂಚಾರಕ್ಕೆ ತಡೆವೊಡ್ಡಿ ಪ್ರತಿಭಟಿಸಿದರು.

ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್‌ ಜಯ ಕುಮಾರ್‌ ಹಾಗೂ ಪಟ್ಟಣ ಠಾಣೆ ಪಿಎಸ್‌ಐ ಶಿವಶಂಕರ್‌ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿ ಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು. ಸಮಸ್ಯೆ ವಿವರಿಸಿದ ನಂತರ ಶುಕ್ರವಾರ ಅಧಿಕಾರಿಗಳು ಸ್ಥಳಕ್ಕೆ ಬರಲು ಒಪ್ಪಿಗೆ ಸೂಚಿಸಿದರು.

Advertisement

ಸಂಚಾರ ದಟ್ಟಣೆ: ಶುಕ್ರವಾರ ಅಧಿಕಾರಿಗಳು ಆಗಮಿಸದಿದ್ದರೆ ಮತ್ತೆ ಪ್ರತಿಭಟನೆ ನಡೆಸಲಾ ಗುವುದು ಎಂಬ ಎಚ್ಚರಿಕೆ ನೀಡುವ ಮೂಲಕ ಪ್ರತಿಭಟನೆ ಹಿಂದೆ ಪಡೆಯಲಾ ಯಿತು. ಪ್ರತಿಭಟನೆಯಿಂದಾಗಿ ಸುಮಾರು ಒಂದೂಗಂಟೆಗೂ ಹೆಚ್ಚು ಕಾಲ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಉಂಟಾಗಿತ್ತು. ಪ್ರತಿಭಟನೆ ನೇತೃತ್ವವವನ್ನು ಶಿವ ಶಂಕರ್‌(ಪಚ್ಚಿ), ಸುರೇಂದ್ರ ಕುಮಾರ್‌, ಪ್ರದೀಪ್‌, ಈರಯ್ಯ, ವೀರಭದ್ರ, ಹು ಲ್ಲಹಳ್ಳಿ ವಿಕ್ರಮ್‌ ಮುಂತಾದವರು ವಹಿಸಿದ್ದರು.

ತಪ್ಪಿದ ಪ್ರಾಣಹಾನಿ: ರಾತ್ರಿ ವೇಳೆ ಕೆರೆ ಒಡೆದ ಪರಿಣಾಮ ಸೃಷ್ಟಿಯಾದ ಭಾರಿ ಅನಾಹುತದಲ್ಲಿ ಯಾವುದೇ ಜೀವಹಾನಿ ಸಂಭವಿಸಲಿಲ್ಲ. ಹಗಲು ವೇಳೆ ಈ ಘಟನೆ ನಡೆದಿದ್ದರೆ ಕಾಫಿ ತೋಟ ಹಾಗೂ ಭತ್ತದ ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದ ಸಾಕಷ್ಟು ಜನರು ಜೀವ ಕಳೆದುಕೊಳ್ಳುವ ಸಾಧ್ಯತೆ ಇತ್ತು ಎಂಬುದು ಸ್ಥಳೀಯರ ಅನಿಸಿಕೆ. ಸ್ಥಳಕ್ಕೆ ಶಾಸಕ ಎಚ್‌.ಕೆ ಕುಮಾರ ಸ್ವಾಮಿ, ತಹಶೀಲ್ದಾರ್‌ ಜಯಕುಮಾರ್‌, ಬಿಜೆಪಿ ಮುಖಂಡ ಸಿಮೆಂಟ್‌ ಮಂಜುನಾಥ್‌, ಬಿಜೆಪಿ ತಾಲೂಕು ಅಧ್ಯಕ್ಷ ಮಂಜುನಾಥ್‌ ಸಂ , ಕಾಂಗ್ರೆಸ್‌ ಮುಖಂಡ ಮುರಳಿ ಮೋಹನ್‌ ಮುಂತಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next