Advertisement

ದಾಲ್‌ಮಿಲ್‌ ಪುನಶ್ಚೇತನಕ್ಕೆ ಒತ್ತಾಯ

02:01 PM Jun 03, 2018 | Team Udayavani |

ಕಲಬುರಗಿ: ಬೆಲೆ ಕುಸಿತ ಹಾಗೂ ಪೂರೈಕೆ ಬೇಡಿಕೆ ಕಡಿಮೆಯಾಗಿರುವ ಕಾರಣ ಬಂದ್‌ ಆಗಿರುವ ದಾಲ್‌ಮಿಲ್‌ಗ‌ಳ ಪುನಶ್ಚೇತನಕ್ಕೆ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಹೈದ್ರಾಬಾದ ಕರ್ನಾಟಕ ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಪತ್ರ ಬರೆದು ಆಗ್ರಹಿಸಿದೆ.

Advertisement

ಜಿಲ್ಲೆಯಲ್ಲಿರುವ 297 ದಾಲ್‌ಮಿಲ್‌ಗ‌ಳ ಪೈಕಿ 38 ದಾಲ್‌ಮಿಲ್‌ಗ‌ಳು ಎನ್‌ಪಿಎದಿಂದ ಉದ್ಭವಿಸಿರುವ ಗಂಭೀರ ಸಮಸ್ಯೆಯಿಂದ ರೋಗಗ್ರಸ್ತವಾಗಿ ಕಾರ್ಯನಿರ್ವಹಿಸದೆ ಸ್ಥಗಿತಗೊಂಡಿವೆ. ಮಾರುಕಟ್ಟೆಯಲ್ಲಿ ತೊಗರಿ ಬೆಲೆ ಏರಿಳಿತಗಳಿಂದ ಮತ್ತು ಸರಕಾರದ ತಪ್ಪು ನೀತಿಗಳಿಂದಾಗಿ 156 ದಾಲ್‌ಮಿಲ್‌ಗ‌ಳ ಬೆಳೆ ಉತ್ಪಾದಿಸುವ ಪ್ರಮಾಣವು
ಗಣನೀಯವಾಗಿ ಕುಸಿದಿದೆ. ಜತೆಗೆ 103 ದಾಲ್‌ ಮಿಲ್‌ಗ‌ಳ ಗರಿಷ್ಠ ಪ್ರಮಾಣದ ಬೆಳೆ ಉತ್ಪಾದನೆ ಮಟ್ಟವು ನೀರಿಕ್ಷೆಗೆ ಮೀರಿ ವಿಫಲವಾಗಿವೆ ಎಂದು ಎಚ್‌ಕೆಸಿಸಿಐ ಅಧ್ಯಕ್ಷ ಅಮರನಾಥ ಪಾಟೀಲ ಹಾಗೂ ಗೌರವ ಕಾರ್ಯದರ್ಶಿ ಶಶಿಕಾಂತ ಪಾಟೀಲ ವಿವರಿಸಿದ್ದಾರೆ.

ದಾಲ್‌ಮಿಲ್‌ಗ‌ಳು ಆರ್ಥಿಕ ಸಂಕಷ್ಟ ಎದುರಿಸಿ, ಬ್ಯಾಂಕ್‌ಗಳಿಂದ ಪಡೆದ ಸಾಲಗಳನ್ನು ಸಕಾಲದಲ್ಲಿ ಮರುಪಾವತಿಸುವಲ್ಲಿ ವಿಫಲವಾಗಿವೆ. ಕಳೆದ ಅಕ್ಟೋಬರ್‌ 28ರಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವರು ಕಲಬುರಗಿಗೆ ಭೇಟಿ ನೀಡಿದ  ಸಂದರ್ಭದಲ್ಲಿ, ಮಿತಿಮಿರಿದ ಸಂಕಷ್ಟದಲ್ಲಿರುವ ದಾಲ್‌ಮಿಲ್‌ಗ‌ಳ ಮಾಲೀಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನಕ್ಕೆ ತಂದಾಗ, ಸಚಿವರು ಕಲಬುರಗಿ ಜಿಲ್ಲಾ ಧಿಕಾರಿಗಳಿಗೆ ಸಮಸ್ಯೆ ಕುರಿತು
ವರದಿ ಮತ್ತು ಕೈಗೊಳ್ಳಬೇಕಾದ ಪರಿಹಾರ ಕ್ರಮಗಳ ಬಗ್ಗೆ ಸಲಹೆ ಸಲ್ಲಿಸುವಂತೆ ಸೂಚನೆ ನೀಡಿದ್ದರು.

ಸಚಿವರ ಆದೇಶದ ಮೇರೆಗೆ ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಆದರೆ ವರದಿಯನ್ನು ಜಾರಿ ಮಾಡುವ ಮುಖಾಂತರ ದಾಲ್‌ಮಿಲ್‌ಗ‌ಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಜಿಲ್ಲಾಧಿಕಾರಿಗಳು ಸಲ್ಲಿಸಿರುವ ಸಲಹೆಗಳ ಜೊತೆಯಲ್ಲಿ ಸರಕಾರವು ಕಲಬುರಗಿಯಲ್ಲಿರುವ ದಾಲ್‌ ಮಿಲ್‌ಗ‌ಳಿಗೆ ನಾಫೇಡ್‌ ಮೂಲಕ ತೊಗರಿ ಸರಬರಾಜು ಮಾಡಿದರೆ ದಾಲ್‌ಮಿಲ್‌ಗ‌ಳು ಉತ್ಪಾದನೆ ಶುಲ್ಕದ ಮೇಲೆ ತೊಗರಿ ಬೆಳೆಯಾಗಿ ಉತ್ಪಾದಿಸುವರು ಮತ್ತು ತೊಗರಿ ಬೆಳೆಯನ್ನು ಸರಕಾರವು ನ್ಯಾಯ ಬೆಲೆ ಅಂಗಡಿಗಳ ಮೂಲಕ ವಿತರಿಸಲು ಸಹಾಯಕವಾಗುವುದು. ಸರಕಾರವು ಜವಳಿ ಫಟಕಗಳಿಗೆ ವಿದ್ಯುತ್‌ನ್ನು 1ರೂ. ದರದಲ್ಲಿ ಸರಬರಾಜು ಮಾಡುತ್ತಲಿದೆ. ಸಂಕಷ್ಟದಲ್ಲಿರುವ ದಾಲ್‌ಮಿಲ್‌ಗ‌ಳಿಗೆ ಇದೇ ದರದಲ್ಲಿ ವಿದ್ಯುತ್‌ ಸರಬರಾಜು ಮಾಡಿದಲ್ಲಿ ಅನುಕೂಲವಾಗುತ್ತದೆ.

Advertisement

ಸರಕಾರವು ಸಕ್ಕರೆ ಉತ್ಪಾದಿಸುವ ಕೈಗಾರಿಕೆಗಳನ್ನು ಮರು ಸ್ಥಾಪಿಸಲು 60,000 ಕೋಟಿ ರೂ. ಗಳ ಆರ್ಥಿಕ ಸಹಾಯ ಒದಗಿಸಿದೆ. ಹೈಕ ಪ್ರದೇಶದ ಐದು ಜಿಲ್ಲೆಗಳ ರೈತರು ತೊಗರಿಯನ್ನು ಬೆಳೆಯಲು ನೆರವಾಗುರುತ್ತಿರುವುದರಿಂದ ಸರಕಾರವು ದಾಲ್‌ ಮಿಲ್‌ಗ‌ಳನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ, ಸಕ್ಕರೆ ಉತ್ಪಾದಿಸುವ ಕೈಗಾರಿಕೆಗಳಿಗೆ ನೀಡಿರುವ ಆರ್ಥಿಕ ಸಹಾಯದ ಮಾದರಿಯಲ್ಲಿ ಒಂದು ಆರ್ಥಿಕ ಸಹಾಯದ ಪ್ಯಾಕೆಜ್‌ನ್ನು ಘೋಷಿಸಬೇಕೆಂದು ಒತ್ತಾಯಿಸಿದ್ದಾರೆ. ಒಟ್ಟಾರೆ ಕಲಬುರಗಿ ಜಿಲ್ಲಾಧಿಕಾರಿ ನೀಡಿರುವ ದಾಲ್‌ಮಿಲ್‌ಗಳ ಪುನಶ್ಚೇತನಾ ವರದಿಯನ್ನು ಜಾರಿ ತರಬೇಕೆಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next