Advertisement

Dallas Open ಟೆನಿಸ್‌ : ಟಾಮಿ ಪೌಲ್‌ ಚಾಂಪಿಯನ್‌

11:16 PM Feb 12, 2024 | Team Udayavani |

ಡಲ್ಲಾಸ್‌: “ಆಲ್‌ ಅಮೆರಿಕನ್‌’ ಡಲ್ಲಾಸ್‌ ಓಪನ್‌ ಟೆನಿಸ್‌ ಫೈನಲ್‌ನಲ್ಲಿ ದ್ವಿತೀಯ ಶ್ರೇಯಾಂಕದ ಟಾಮಿ ಪೌಲ್‌ ಪ್ರಶಸ್ತಿ ಎತ್ತಿದ್ದಾರೆ. ಅವರು ತೀವ್ರ ಹೋರಾಟ ನೀಡಿದ ಮಾರ್ಕೋಸ್‌ ಗಿರೋನ್‌ ವಿರುದ್ಧ 7-6 (3), 5-7, 6-3 ಅಂತರದಿಂದ ಗೆಲುವು ಸಾಧಿಸಿದರು.

Advertisement

ಇದು ಟಾಮಿ ಪೌಲ್‌ ಗೆದ್ದ ದ್ವಿತೀಯ ಟೂರ್‌ ಲೆವೆಲ್‌ ಪ್ರಶಸ್ತಿ. ಮೊದಲ ಪ್ರಶಸ್ತಿಯನ್ನು 2021ರ ಸ್ಟಾಕ್‌ಹೋಮ್‌ ಟೂರ್ನಿಯಲ್ಲಿ ಜಯಿಸಿದ್ದರು.

ಇದು 2021ರ “ಟೋಕಿಯೊ ಓಪನ್‌’ ಬಳಿಕ ಅಮೆರಿಕನ್ನರಿಬ್ಬರು ಮುಖಾಮುಖೀಯಾದ ಮೊದಲ ಫೈನಲ್‌ ಆಗಿತ್ತು. ಈ ಜಯದೊಂದಿಗೆ 26 ವರ್ಷದ ಟಾಮಿ ಪೌಲ್‌ ವಿಶ್ವ ರ್‍ಯಾಂಕಿಂಗ್‌ನಲ್ಲಿ 14ನೇ ಸ್ಥಾನಕ್ಕೆ ಮರಳಿದ್ದಾರೆ. ಹಾಗೆಯೇ ಅಮೆರಿಕದ ನಂ.2 ಟೆನಿಸಿಗನೆಂಬ ಗೌರವಕ್ಕೂ ಪಾತ್ರರಾಗಿದ್ದಾರೆ. ಅಗ್ರಸ್ಥಾನದಲ್ಲಿರುವವರು ಟೇಲರ್‌ ಫ್ರಿಟ್ಜ್.
“ಇದೊಂದು ನಂಬಲಾಗದ ಸಾಧನೆ. ನಾನು ಆಡಿದ ಅತ್ಯುತ್ತಮ ಫೈನಲ್‌’ ಎಂಬುದಾಗಿ ಟಾಮಿ ಪೌಲ್‌ ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next