Advertisement
ಅಮಲಿಹಾಳ ಗ್ರಾಮದ ಹನುಮಂತ ದೇವರ ದೇವಸ್ಥಾನದ ಪ್ರವೇಶಕ್ಕೆ ಹೂವಿನಹಳ್ಳಿ ಗ್ರಾಮದ ದಲಿತರಿಗೆ ನಿರಾಕರಣೆ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಕಲಹ ಏರ್ಪಟಿತ್ತು. ಇದಕ್ಕೆ ಸಂಬಂಧಿಸಿದಂತೆ ತಾಲೂಕು ಕೇಂದ್ರ ಸುರಪುರದಲ್ಲಿ ವಿವಿಧ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿ ಘಟನೆ ಖಂಡಿಸಿದ್ದರು. ಶುಕ್ರವಾರ ಎಸ್ಪಿ ವೇದಮೂರ್ತಿ ಗ್ರಾಮಗಳಿಗೆ ಖುದ್ದು ಭೇಟಿ ನೀಡಿ ಗ್ರಾಮಸ್ಥರ ಮನವೊಲಿಸುವ ಪ್ರಯತ್ನ ಮಾಡಿದ್ದರೂ ಶನಿವಾರ ಮತ್ತೆ ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಮನಗಂಡ ಜಿಲ್ಲಾಡಳಿತ ಎರಡೂ ಗ್ರಾಮಗಳಲ್ಲಿ ಕಲಂ 144 ಜಾರಿ ಮಾಡಿದ್ದು ಪೊಲೀಸರ ದಂಡು ಗ್ರಾಮಗಳಲ್ಲಿ ಬೀಡುಬಿಟ್ಟಿದೆ.
Related Articles
Advertisement
ಸಂಧಾನ ಯಶಸ್ವಿ
ಶನಿವಾರ ದೇವಸ್ಥಾನ ಪ್ರವೇಶಕ್ಕೆ ಸಂಬಂಧಿಸಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದ ತಂಡ ಗ್ರಾಮಸ್ಥರ ಮನವೊಲಿಸಿ ಪೊಲೀಸ್ ಭದ್ರತೆಯಲ್ಲಿ ದಲಿತ ಜನಾಂಗದ ಸುಮಾರು 8 ಜನರನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ದೇವಸ್ಥಾನಕ್ಕೆ ಕರೆದುಕೊಂಡು ಬರುವ ಮೂಲಕ ಸ್ವಲ್ಪ ಸಮಾಧಾನದ ಘಟನೆಗೆ ನಾಂದಿ ಹಾಡಿದ್ದಾರೆ. ಆದರೆ ಎರಡೂ ಗ್ರಾಮಗಳಲ್ಲಿ ಪರಿಸ್ಥಿತಿ ಇನ್ನೂ ಬೂದಿ ಮುಚ್ಚಿದ ಕೆಂಡದಂತಿದ್ದು ಸಿಪಿಐ ಸುನೀಲ ಮೂಲಿಮನಿ, ಬಾಪುಗೌಡ ಪಾಟೀಲ, ದೌಲತ್ ಎನ್.ಕೆ ನೇತೃತ್ವದಲ್ಲಿ ಪಿಎಸೈ ಸುರೇಶಕುಮಾರ, ಗಜಾನಂದ ಬಿರಾದಾರ ಬಂದೋಬಸ್ತ್ ಕಲ್ಪಿಸಿದ್ದಾರೆ.