Advertisement

ತಿಮ್ಮಾಪುರದಲ್ಲಿ ಸ್ಮಶಾನಕ್ಕಾಗಿ ದಲಿತರ ಪ್ರತಿಭಟನೆ

10:35 AM Dec 18, 2019 | Suhan S |

ಧಾರವಾಡ: ತಿಮ್ಮಾಪುರ ಗ್ರಾಮದಲ್ಲಿ ದಲಿತರಿಗೆ ಶವಸಂಸ್ಕಾರ ಮಾಡಲು 2 ಎಕರೆ ಜಮೀನು ಮಂಜೂರು ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‌ ಧ್ವನಿ ಸಂಘಟನೆ ವತಿಯಿಂದ ನಗರದ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

Advertisement

ಮರೇವಾಡ ಗ್ರಾಪಂಗೆ ಒಳಪಟ್ಟ ತಿಮ್ಮಾಪುರ ಗ್ರಾಮದ ದಲಿತರಿಗೆ ಗ್ರಾಮದ ಸರ್ವೇ ನಂ. 16ರ ಪೈಕಿ 91ಎಕರೆ 29 ಗುಂಟೆ ಸಶ್ಮಾನ ಜಮೀನು ಇದೆ. ಈ ಜಮೀನಲ್ಲಿ ದಲಿತರು ಹಲವು ವರ್ಷಗಳಿಂದ ಶವ ಸಂಸ್ಕಾರ ನೆರವೇರಿಸುತ್ತಾ ಬಂದಿದ್ದು, ಆದರೆ ಈಗ ಜಮೀನನ್ನು ಮೇಲ್ವರ್ಗದ ಜನರು ಅತಿಕ್ರಮಣ ಮಾಡಿದ್ದರಿಂದ ಸದ್ಯ 10ರಿಂದ 15 ಎಕರೆ ಭೂಮಿ ಮಾತ್ರ ಉಳಿಯುವಂತಾಗಿದೆ. ಶವ ಸಂಸ್ಕಾರ ಮಾಡುವ ಜಮೀನಿನಲ್ಲಿ ದಲಿತರು ಸುತ್ತಲು ಹಾಕಿದ ಬೇಲಿಯನ್ನು ಕಿತ್ತೂಗೆದು ತಮಗೆ ಬೇಕಾದ ರೀತಿಯಲ್ಲಿ ಜಾಗೆಯನ್ನು ಅತಿಕ್ರಮಣ ಮಾಡಿಕೊಳ್ಳುತ್ತಿದ್ದಾರೆ. ಈ ಜಮೀನು ಗಯರಾಣಾ ಅಂತ ಇದ್ದು, ಎಲ್ಲ ಜಾಗೆಯನ್ನು ಅತಿಕ್ರಮಮ ಮಾಡಿ, ಶವ ಸಂಸ್ಕಾರ ಮಾಡಲು ಹೋಗುವ ದಾರಿಯನ್ನು ಕೂಡ ಬಂದ್‌ ಮಾಡಿದ್ದಾರೆ ಎಂದು ಆರೋಪಿಸಿದರು.

ಪ್ರತ್ಯೇಕವಾಗಿ ದಲಿತರಿಗೆ ಶವಸಂಸ್ಕಾರ ಮಾಡಲು ಎರಡು ಎಕರೆ ಜಮೀನು ಮಂಜೂರು ಮಾಡಬೇಕು. ಅತಿಕ್ರಮಣ ಮಾಡಿಕೊಂಡವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅತಿಕ್ರಮಣ ಮಾಡಲು ಕಾರಣರಾದ ಗ್ರಾಮ ಲೆಕ್ಕಾಧಿಕಾರಿಯನ್ನು ಅಮಾನತು ಮಾಡಬೇಕು. ನಿವೇಶನ ರಹಿತ ದಲಿತರಿಗೆ ಪ್ರತಿ ಕುಟುಂಬಕ್ಕೆ 2 ಗುಂಟೆ ಜಾಗೆ ಮಂಜೂರು ಮಾಡಬೇಕು. ಒಂದು ವೇಳೆ ಸೂಕ್ತ ಕ್ರಮ ಕೈಗೊಳ್ಳದೇ ಇದ್ದರೆ ಬರುವ ದಿನದಲ್ಲಿ ಉಗ್ರ ಹೋರಾಟದ ಜೊತೆಗೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಲಾಯಿತು. ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ ಬಳಿಕ ಡಿಸಿ ಕಚೇರಿಗೂ ತೆರಳಿ ಪ್ರತಿಭಟನೆ ಕೈಗೊಂಡು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ನಿಂಗಪ್ಪ ಹಂಚಿನಾಳ ಸೇರಿದಂತೆ ತಿಮ್ಮಾಪುರದ ದಲಿತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next