Advertisement

ರಾಷ್ಟೀಯ ಪಕ್ಷಗಳಿಂದ ದಲಿತರ ಕಡೆಗಣನೆ

11:40 AM May 05, 2018 | Team Udayavani |

ಮಹದೇವಪುರ: ರಾಷ್ಟೀಯ ಪಕ್ಷಗಳು ಸ್ಥಳೀಯ ದಲಿತರನ್ನು ಕಡೆಗಣಿಸಿ ಅನ್ಯಾಯವೆಸಗಿವೆ ಎಂದು ಪಕ್ಷೇತರ ಅಭ್ಯರ್ಥಿ ನಲ್ಲೂರಹಳ್ಳಿ ನಾಗೇಶ್‌ ಬೇಸರ ವ್ಯಕ್ತಪಡಿಸಿದರು. ಕ್ಷೇತ್ರದ ವೈಟ್‌ಫೀಲ್ಡ್‌ ಸಮೀಪವಿರುವ ನಾಗೊಂಡನಹಳ್ಳಿ, ಗಾಂಧಿಪುರ, ವಿಜಯನಗರ ಮತ್ತು ಇಮ್ಮಡಿಹಳ್ಳಿ ಗ್ರಾಮಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಮತಯಾಚಿಸಿದ ನಂತರ ಮಾತನಾಡಿದರು.

Advertisement

ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಸಂವಿಧಾನದತ್ತವಾಗಿ ನೀಡಿರುವ ಮೀಸಲಾತಿಯ ಹಕ್ಕನ್ನು ರಾಷ್ಟೀಯ ಪಕ್ಷಗಳು ಕಸಿದುಕೊಂಡು ದಲಿತರನ್ನು ವಂಚಿಸುತ್ತಿವೆ. ಮಹದೇವಪುರ ಎಸ್‌.ಸಿ ಮೀಸಲು ಕ್ಷೇತ್ರವಾದರೂ ಸ್ಥಳೀಯ ಪರಿಶಿಷ್ಟ ಜನಾಂಗದ ಮುಖಂಡರಿಗೆ ಟಿಕೆಟ್‌ ನೀಡದೆ, ಹಣಬಲ, ತೋಳ್ಬಲ ಹೊಂದಿರುವವರಿಗೆ ಮಣೆ ಹಾಕುವ ಮೂಲಕ ಸ್ಥಳೀಯರನ್ನು ಮೂಲೆಗುಂಪು ಮಾಡಿವೆ ಎಂದು ದೂರಿದರು.

ಕ್ಷೇತ್ರದಲ್ಲಿ ಟ್ರಾಫಿಕ್‌ ಸಮಸ್ಯೆ ಮಿತಿಮೀರಿದ್ದು, ಎರಡು ಭಾರಿ ಶಾಸಕರಾಗಿರುವ ಅರವಿಂದ ಲಿಂಬಾವಳಿ ಮೂಲಸೌಕರ್ಯ ಕಲ್ಪಿಸುವಲ್ಲಿ ಹಾಗೂ ಪರಿಸರ ರಕ್ಷಣೆ, ಕೆರೆಗಳ ಸಂರಕ್ಷಣೆ ಮಾಡುವಲ್ಲಿ ವಿಫ‌ಲರಾಗಿದ್ದಾರೆ. ಸ್ಥಳೀಯನಾಗಿರುವ ನನಗೆ ಕ್ಷೇತ್ರದ ಜನರೊಂದಿಗೆ ಒಡನಾಟವಿದ್ದು, ಜನತೆಯ ಸಮಸ್ಯೆಗಳ ಅರಿವಿದೆ. ಹಾಗಾಗಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲು ಈ ಬಾರಿ ನನ್ನನ್ನು ಚುನಾಯಿಸಿ ನಿಮ್ಮ ಸೇವೆಗೆ ಅವಕಾಶ ಮಾಡಿಕೊಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next