Advertisement

ದಲಿತರು ಕರಗ ಮಹೋತ್ಸವ ನಡೆಸದಂತೆ ಕ್ರಮಕ್ಕೆ ಆಗ್ರಹ

11:57 AM May 10, 2019 | pallavi |

ದೇವನಹಳ್ಳಿ: ವಿಜಯಪುರ ಹೋಬಳಿಯ ಚಂದೇನಹಳ್ಳಿಯಲ್ಲಿ ಪೂಜಾಂಬಿಕಾ ದೇವಿ ಜಾತ್ರೆ ಪ್ರಯುಕ್ತ ದಲಿತ ಸಮುದಾಯದವರು ಕರಗ ಮಹೋತ್ಸವ ನಡೆಸದಂತೆ ನೋಡಿಕೊಳ್ಳ ಬೇಕೆಂದು ವಹ್ನಿಕುಲ ಕ್ಷತ್ರಿಯ ಸಮುದಾಯದ ಮುಖಂಡರು ತಹಶೀಲ್ದಾರ್‌ರಿಗೆ ಮನವಿ ಸಲ್ಲಿಸಿದರು.

Advertisement

ಅಹವಾಲು ಸ್ವೀಕರಿಸಿದ ನಂತರ ನಗರದ ಮಿನಿವಿಧಾನಸೌಧದ ತಮ್ಮ ಕಚೇರಿ ಸಭಾಂಗಣದಲ್ಲಿ ದಲಿತ ಹಾಗೂ ತಿಗಳ ಸಮುದಾಯಗಳ ಮುಖಂಡರ ಸಭೆ ನಡೆಸಿದ ತಹಶೀಲ್ದಾರ್‌ ಸಮಸ್ಯೆ ಬಗ್ಗೆ ಚರ್ಚೆ ನಡೆಸಿದರು.

ದಲಿತರಿಂದ ಕರಗೋತ್ಸವ ಬೇಡ: ಈ ವೇಳೆ ಮತ ನಾಡಿದ ತಿಗಳ ಸಮುದಾಯದ ಮುಖಂಡರು, ಕರಗ ಮಹೋತ್ಸವವನ್ನು ವೀರಕುಮಾರರು ಹಾಗೂ ತಿಗಳ ಸಮುದಾಯದವರು ಸಾಂಪ್ರಾದಾಯಿಕವಾಗಿ ನಡೆಸಿಕೊಂಡು ಬರುತ್ತಿದ್ದೇವೆ. ಇದೀಗ ಕರಗ ಮಹೋತ್ಸವವನ್ನು ದಲಿತ ಸಮುದಾಯದವರು ಆಚರಿಸುವುದು ಸರಿಯಲ್ಲ ಎಂದು ತಿಳಿಸಿದರು.

ವೀರಕುಮಾರರು ಎದೆಯನ್ನು ಹೊಡೆದು ಕೊಳ್ಳುವುದು, ಗಂಟೆ, ಪೂಜಾರಿ, ಪೋತಲರಾಜ ಹೀಗೆ ಹಲವಾರು ಸಂಪ್ರದಾಯಗಳಿವೆ. ಸುಮಾರು ವರ್ಷಗಳಿಂದ ಕರಗ ಮಹೋತ್ಸವವನ್ನು ನಮ್ಮ ಸಮುದಾಯ ದವರೇ ನಡೆಸಿಕೊಂಡು ಬರುತ್ತಿ ದ್ದಾರೆ. ಹಾಗೆಯೇ, ದೇಶ ಹಾಗೂ ಎಲ್ಲಾ ಜನಾಂಗಕ್ಕೂ ದೇವರು ಅಂಬೇಡ್ಕರ್‌ ಆಗಿದ್ದಾರೆ. ಅದೇ ರೀತಿ ನಮ್ಮ ಸಮುದಾಯದ ದೇವರು ಎಂದರೆ ಅದು ತಾಯಿ ದ್ರೌಪದಮ್ಮ ಆಗಿದ್ದಾರೆ. ಆದ್ದರಿಂದ, ದಯವಿಟ್ಟು ದಲಿತರು ಕರಗ ಮಹೋತ್ಸವವನ್ನು ಕೈಬಿಡಬೇಕು ಎಂದು ಮನವಿ ಮಾಡಿದರು.

ಬೇರೆ ನಿಮ್ಮ ಜಾತ್ರಾ ಮಹೋತ್ಸವಗಳಿಗೆ ನಮ್ಮ ಕೈಲಾದ ಸಹಾಯ ಮಾಡಲಾಗುತ್ತದೆ. ದಯವಿಟ್ಟು ದಲಿತ ಸಹೋದರರು ಸಹಕರಿಸಬೇಕು ಎಂದು ಕರ್ನಾಟಕ ವಹ್ನಿಕುಲ ಕ್ಷತ್ರಿಯ ಸಂಘದ ರಾಜ್ಯಾಧ್ಯಕ್ಷ ಹೊಸಕೋಟೆ ಜಯರಾಜ್‌ ಹೇಳಿದರು.

Advertisement

ಕರಗ ಮಾಡಿದರೆ ತಪ್ಪೇನು?: ಕರ್ನಾಟಕ ರಾಜ್ಯ ಮಾದಿಗ ದಂಡೋರ ರಾಜ್ಯಾಧ್ಯಕ್ಷ ಶಂಕರಪ್ಪ ಮಾತನಾಡಿ, ವಹ್ನಿಕುಲ ಜನಾಂಗದವರಿಗೆ ಜಾತಿ ಮುಖ್ಯವೋ, ಧರ್ಮ ಮುಖ್ಯವೋ ಎಂಬುವುದನ್ನು ಮೊದಲು ಸ್ಪಷ್ಟಪಡಿಸಬೇಕು. ಊರೂರು, ಕಾಲೋನಿ, ಗ್ರಾಮಗಳಲ್ಲಿ ಚರ್ಚ್‌ಗಳು, ಮಸೀದಿ ಗಳು ಆಗುತ್ತಿವೆ. ಅದರಂತೆ ಕರಗವೂ ನಮ್ಮ ಸಮುದಾಯದವರು ಕೇಳುವುದರಲ್ಲಿ ತಪ್ಪೇನು? ಮಾಡಲಿ ಬಿಡಿ ಎಂದರು.

ಒಮ್ಮತದ ನಿರ್ಧಾರ ಕೈಗೊಳ್ಳಿ: ತಹಶೀಲ್ದಾರ್‌ ಮಂಜುನಾಥ್‌ ಮಾತನಾಡಿ, ಈ ವಿಚಾರವನ್ನು ಎರಡು ದಿನಗಳ ಕಾಲ ಮುಂದೂಡಲಾಗಿದೆ. ಎರಡೂ ಸಮುದಾಯದವರು ಒಮ್ಮತದಿಂದ ಒಂದು ನಿರ್ಧಾರವನ್ನು ತೆಗೆದುಕೊಂಡು ನಮ್ಮ ಗಮನಕ್ಕೆ ತರುವಂತೆ ಸಲಹೆ ನೀಡಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕ್ಷತ್ರಿಯ ಮಹಾಸಭಾ ರಾಜ್ಯಾಧ್ಯಕ್ಷ ಸುಬ್ಬಣ್ಣ, ದಲಿತ ಮುಖಂಡರಾದ ಬುಳ್ಳಹಳ್ಳಿ ರಾಜಪ್ಪ, ಮಾರಪ್ಪ, ಪಿವಿಬಿಎಸ್‌ ಸಂಸ್ಥಾಪಕ ರಾಜ್ಯಾಧ್ಯಕ್ಷ ಬಿ.ಎನ್‌.ನಾಗರಾಜ್‌, ಚಂದೇನಹಳ್ಳಿ ಮುನಿಯಪ್ಪ, ವಹ್ನಿಕುಲ ಸಮಾಜದ ಮುಖಂಡರಾದ ಗೋಪಾಲಕೃಷ್ಣ, ಎನ್‌.ಚಂದ್ರಶೇಖರ್‌, ಆರ್‌.ಮುನಿಶಾಮಪ್ಪ, ಬೈಚಾಪುರ ಆರ್‌.ವೆಂಕಟೇಶ್‌ ಸೇರಿದಂತೆ ಉಭಯ ಸಮು ದಾಯಗಳ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next