ಕುಣಿಗಲ್: ಬಜೆಟ್‌ನಲ್ಲಿ ದಲಿತರಿಗೆ ಮೀಸ ಲಿಟ್ಟ ಅಭಿವೃದ್ಧಿ ಹಣ ಸಮರ್ಪಕವಾಗಿ ಜಾರಿ ಮಾಡದ ಅಧಿಕಾರಿಗಳ ಮೇಲೆ ಕ್ರಿಮಿನಲ್ ಪ್ರಕರಣಕ್ಕೆ ಆಗ್ರಹಿಸಿ ತಾಲೂಕು ದಲಿತ ಹಕ್ಕುಗಳ ಸಮಿತಿಯ ಪದಾಧಿಕಾರಿಗಳು ಸೋಮವಾರ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಹಲವು ಬೇಡಿಕೆಗಳಿಗಾಗಿ ಆಗ್ರಹಿಸಿ ತಾಲೂಕು ದಲಿತ ಹಕ್ಕುಗಳ ಸಮಿತಿಯ ಪದಾಧಿಕಾರಿಗಳು ಸಮಿತಿಯ ಸಂಚಾಲಕ ರಾಜುವೆಂಕಟಪ್ಪ ಅವರ ನೇತೃತ್ವದಲ್ಲಿ ತಾಲೂಕು ಕಚೇರಿ ಮುಂಭಾಗ ಜಮಾವಣೆ ಗೊಂಡು, ಪ್ರತಿಭಟನೆ ನಡೆಸಿ ಎಸ್ಸಿ, ಎಸ್ಟಿ ದಲಿತ ವಿರೋಧಿ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಮಿತಿ ಮೀರಿದ ದಬ್ಟಾಳಿಕೆ: ಪ್ರತಿಭಟನಾ ಕಾರರನ್ನು ಉದ್ದೇಶಿಸಿ ಮಾತನಾಡಿದ ಸಮಿತಿಯ ಸಂಚಾಲಕ ರಾಜುವೆಂಕಟಪ್ಪ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಐದು ವರ್ಷದ ಅವಧಿಯಲ್ಲಿ ದಲಿತರ ಮೇಲೆ ದೌರ್ಜನ್ಯ, ದಬ್ಟಾಳಿಕೆ ಕೊಲೆ, ಸುಲಿಗೆ ಮಿತಿ ಮೀರಿದ್ದು, ಸಂವಿಧಾನಬದ್ಧ ಹಕ್ಕು ಭಾದ್ಯತೆಗಳು ಉಲ್ಲಂಘನೆಯಾಗಿವೆ. ಅಸ್ಪೃಶ್ಯತೆ ಜಾತಿ ತಾರತಮ್ಯ ನಾಗರಿಕ ಹಕ್ಕುಗಳು ನಿರಾಕರಿಸಲ್ಪಟ್ಟಿವೆ.
ದಲಿತ ಉಪ ಯೋಜನೆಯನ್ನು ಸಂಪೂರ್ಣ ವಾಗಿ ಕೈ ಬಿಟ್ಟಿದೆ. ನೀತಿ ಯೋಜನೆ ಆಧಾರದ ಮೇಲೆ ಹಣ ಕಡಿತ ಮಾಡಿ ದಲಿತರಿಗೆ ವಂಚನೆ ಮಾಡಲಾಗಿದೆ. ಕೇಂದ್ರ ಸರ್ಕಾರ ದೇಶದ ಪ.ಜಾತಿ, ಪ.ಪಂಗಡ ಜನ ಸಂಖ್ಯೆಗೆ ಅನುಗುಣ ವಾಗಿ ಹಣ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ತಪ್ಪಿತಸ್ಥ ಅಧಿಕಾರಿಗಳನ್ನು ಶಿಕ್ಷಿಸಿ: ರಾಜ್ಯದ ಉಪಯೋಜನೆ ಜಾರಿಯಲ್ಲಿ ಹಿಂದಿನಿಂದಲೂ ಬಜೆಟ್‌ನಲ್ಲಿ ಹಣ ಒದಗಿಸಲಾಗಿದೆ ಎಂದು ಸರ್ಕಾರ ಹೇಳುತ್ತಾ ಬಂದಿದೆ. ದಲಿತರ ನಿರಂತರ ಹೋರಾಟಗಳಿಂದ ಎಸ್ಸಿ, ಎಸ್ಪಿ, ಟಿಎಸ್ಪಿ ಕಾಯ್ದೆ ಅಧಿನಿಯಮ ಜಾರಿಗೆ ಬಂದ ನಂತರದಲ್ಲಿ ದಲಿತರ ಸಂಖ್ಯೆಗೆ ಅನುಗುಣ ವಾಗಿ 24.1 ರಷ್ಟು ಹಣ ಒದಗಿಸಲಾಗುತ್ತಿದೆ. 2017-18ನೇ ಸಾಲಿನ ಪ್ರಗತಿಯಲ್ಲಿ ಒಟ್ಟು 27.840.98 ಕೋಟಿಯಲ್ಲಿ 26.124.33 ಕೋಟಿ ರೂ. ವೆಚ್ಚ ಮಾಡಿದೆ.
1198.99 ಕೋಟಿ ಕಳೆದ ವರ್ಷವೇ ಉಳಿಯವಾಗಿದೆ. ಈ ಹಣವನ್ನು ಮುಂದಿನ ವರ್ಷಕ್ಕೆ ಸೇರಿ ಕೊಳ್ಳುವುದಾಗಿ ಸರ್ಕಾರ ತಿಳಿಸಿದೆ. ಆದರೆ, ಅಧಿಕಾರಿಗಳು ಇದನ್ನು ಪರಿಪೂರ್ಣವಾಗಿ ಜಾರಿಗೆ ತಂದು ಈ ಸಮುದಾಯದ ಜನರಿಗೆ ಅನುಕೂಲ ಮಾಡಿಕೊಡುವಲ್ಲಿ ವಿಫಲಗೊಂಡಿದ್ದಾರೆ. ಹಾಗಾಗಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿದರು.
ಬಳಿಕ ತಾಲೂಕು ಕಚೇರಿ ಶಿರಸ್ತೇದಾರ್ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆ ಯಲ್ಲಿ ಡಿಎಸ್‌ಎಸ್ ಜಿಲ್ಲಾ ಸಂಘಟನಾ ಸಂಚಾಲಕ ವಿ.ಶಿವಶಂಕರ್, ಐಎನ್‌ಟಿಯುಸಿ ಅಧ್ಯಕ್ಷ ಅಬ್ದುಲ್‌ವುುನಾಫ್, ಶ್ರಮಜೀವಿ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಕೃಷ್ಣರಾಜು, ಮುಖಂಡರಾದ ನಂಜಪ್ಪ, ಮಂಜುಳಾ, ಪವನ್‌ಕುಮಾರ್, ರಮೇಶ್ ಮತ್ತಿತರರಿದ್ದರು.