Advertisement

ತಮಟೆ ಚಳವಳಿಯಾಗಿ ಬದಲಾದ ದಲಿತರ ಧರಣಿ

09:06 PM Dec 28, 2021 | Girisha |

ಮುದ್ದೇಬಿಹಾಳ: ತಂಗಡಗಿ ಪಿಡಿಒ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ, ಮುದ್ದೇಬಿಹಾಳ ಪಟ್ಟಣದಲ್ಲಿ ಎರಡು ಮದ್ಯದ ಅಂಗಡಿಗಳಿಗೆ ಅನಧಿಕೃತ ಪರವಾನಗಿ ನೀಡಿರುವುದನ್ನು ರದ್ದುಪಡಿಸುವಂತೆ ಆಗ್ರಹಿಸಿ ಮತ್ತು ಅಬಕಾರಿ ಇಲಾಖೆ ದುರಾಡಳಿತ ಖಂಡಿಸಿ ವಿವಿಧ ದಲಿತ ಪರ ಸಂಘಟನೆಗಳ ಒಕ್ಕೂಟದ ತಾಲೂಕು ಶಾಖೆ ಪದಾಧಿಕಾರಿಗಳು ಇಲ್ಲಿನ ತಾಪಂ ಕಚೇರಿ ಎದುರು ಡಿ. 23ರಿಂದ ನಡೆಸುತ್ತಿರುದ ಧರಣಿ ಸತ್ಯಾಗ್ರಹ ಸೋಮವಾರ 4ನೇ ದಿನಕ್ಕೆ (ರವಿವಾರ ಹೊರತುಪಡಿಸಿ) ಕಾಲಿಟ್ಟಿದ್ದು ತಮಟೆ ಚಳವಳಿಯಾಗಿ ಮಾರ್ಪಾಡಾಯಿತು.

Advertisement

ಸಂಘಟನೆ ಸದಸ್ಯರು ತಾಪಂ ಕಚೇರಿಯಿಂದ ಅಬಕಾರಿ ಕಚೇರಿವರೆಗೆ, ಅಬಕಾರಿ ಕಚೇರಿಯಿಂದ ತಾಪಂ ಕಚೇರಿವರೆಗೆ ಪ್ರಮುಖ ರಸ್ತೆಯಲ್ಲಿ ತಮಟೆ ಬಾರಿಸುತ್ತ ತೆರಳಿದರು. ತಾಪಂ ಮತ್ತು ಅಬಕಾರಿ ಕಚೇರಿ ಎದುರು ಕೂಡಾ ಬಹಳ ಹೊತ್ತು ತಮಟೆ ಬಾರಿಸಿ ಆಕ್ರೋಶ ಹೊರಹಾಕಿದರು. ಈ ಬಾರಿ ತಮ್ಮ ಹೆಚ್ಚಿನ ಗಮನವನ್ನು ಅಬಕಾರಿ ಇಲಾಖೆ ವಿರುದ್ಧ ಕೇಂದ್ರೀಕರಿಸಿದ್ದಂತೆ ಕಂಡ ಮುಖಂಡರು ಮುದ್ದೇಬಿಹಾಳ ಪಟ್ಟಣದ ಸಿಎಲ್‌-2 ತೋರಗಲ್ಲ ಬಾರ್‌ ಮತ್ತು ಮಹಾಲಕ್ಷಿ ¾à ಬಾರ್‌ ರೆಸ್ಟೋರೆಂಟ್‌ನ ಸಿಎಲ್‌-9 ಮದ್ಯದ ಅಂಗಡಿ ಮಾಲಿಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.

ಮುಖಂಡರಾದ ಹರೀಶ ನಾಟೀಕಾರ, ಬಸವರಾಜ ಪೂಜಾರಿ, ಪರಶುರಾಮ ಮುರಾಳ ಮತ್ತಿತರರು ಮಾತನಾಡಿ, ಅಬಕಾರಿ ಇಲಾಖೆ ಅಧಿಕಾರಿಗಳ ಮೀನ ಮೇಷದ ನಡವಳಿಕೆಯನ್ನು ಖಂಡಿಸಿದರು. ಮುಖಂಡರಾದ ಚನ್ನಪ್ಪ ವಿಜಯಕರ್‌, ಲಕ್ಷ ¾ಣ ವಡ್ಡರ, ತಿಪ್ಪಣ್ಣ ದೊಡಮನಿ, ಪ್ರಕಾಶ ಚಲವಾದಿ ಸರೂರ, ಶೇಖರ ಆಲೂರ, ತಂಗಡಗಿ ಗ್ರಾಪಂ ಮಾಜಿ ಅಧ್ಯಕ್ಷ ಸಂಗಯ್ಯ ಸಾರಂಗಮಠ, ಗೋವಿಂದ ಅರಮನಿ, ಸಂತೋಷ ಅಜಮನಿ, ಅಂಬರೀಷ ಹಂಗರಗಿ, ಪಾವಡೆಪ್ಪ ದೊಡಮನಿ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ಹಲವರು ಪಾಲ್ಗೊಂಡಿದ್ದರು. ಈ ಮಧ್ಯೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಹೊಕ್ರಾಣಿ ಅವರು ಧರಣಿ ಸ್ಥಳಕ್ಕೆ ಭೇಟಿ ನೀಡಿ ಧರಣಿ ಕೈ ಬಿಡುವಂತೆ ಮನವೊಲಿಸುವ ಪ್ರಯತ್ನ ನಡೆಸಿದರೂ ಫಲಕಾರಿಯಾಗಲಿಲ್ಲ.

 

Advertisement

Udayavani is now on Telegram. Click here to join our channel and stay updated with the latest news.

Next