ಬಾಗಲಕೋಟೆ: ಸ್ವಾತಂತ್ರ್ಯ ದೊರೆತು 75 ವರ್ಷ ಕಳೆದಿವೆ. ಆದರೆ ಇಂದಿಗೂ ರಾಜ್ಯಕ್ಕೆ ಒಬ್ಬ ದಲಿತ ಸಿಎಂ ಆಗಿಲ್ಲ. ಅಂಬೇಡ್ಕರ್ ಬರೆದ ಸಂವಿಧಾನಕ್ಕೆ ಗೌರವ ಕೊಡುವುದಾದರೆ ದಲಿತ ನಾಯಕರೊಬ್ಬರನ್ನು ಮುಖ್ಯಮಂತ್ರಿ ಮಾಡಬೇಕು. ಇದಕ್ಕೆ ಸತೀಶ ಜಾರಕಿಹೊಳಿ ಅರ್ಹ ವ್ಯಕ್ತಿ ಎಂದು ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಜಗದ್ಗುರು ಪ್ರಸನ್ನನಾನಂದಪುರಿ ಸ್ವಾಮೀಜಿ ಹೇಳಿದರು.
ವಾಲ್ಮೀಕಿ ಜನ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಕೆಲವು ಸಮುದಾಯಗಳಿಗೆ ಗುತ್ತಿಗೆ ನೀಡಲಾಗಿದೆಯೇ? ದಲಿತರು ಸಿಎಂ ಆಗಬೇಕು. ದಲಿತರಲ್ಲಿ ಸತೀಶ ಜಾರಕಿಹೋಳಿ ಅವರಂತ ನಾಯಕರು ಸಿಎಂ ಸ್ಥಾನ ನಿರ್ವಹಿಸಲು ಅರ್ಹರಿದ್ದಾರೆ. ಅವರಿಗೆ ಇಡೀ ಸಮಾಜ ಬೆಂಬಲವಾಗಿ ನಿಲ್ಲಬೇಕು. ದಲಿತ ನಾಯಕರಲ್ಲಿ ಸತೀಶ ಜಾರಕಿಹೋಳಿಗೆ ಆ ಶಕ್ತಿ ಇದೆ ಎಂದರು.
ಶಾಸಕರೊಂದಿಗೆ ದುಬಾೖಗೆ ಪ್ರವಾಸ ಹೋಗುವುದಾಗಿ ನಾನು ಹೇಳಿಲ್ಲ. ಮಾಜಿ ಶಾಸಕರು ಯಾವಾಗ ಹೇಳುತ್ತಾರೋ ಆಗ ನೋಡೋಣ. ಮಹಾರಾಷ್ಟ್ರದ ರೀತಿ ಕರ್ನಾಟಕದಲ್ಲಿ ಯಾವುದೇ ರಾಜಕೀಯ ಬಿಕ್ಕಟ್ಟು ಉದ್ಭವಿಸು ವುದಿಲ್ಲ. ಕರ್ನಾಟಕದಲ್ಲಿ ನಾನು ಅಜಿತ್ ಪವಾರ್ ಆಗುವುದಿಲ್ಲ. ನಾವೆಲ್ಲ ಒಟ್ಟಾಗಿದ್ದೇವೆ.
-ಸತೀಶ ಜಾರಕಿಹೋಳಿ, ಲೋಕೋಪಯೋಗಿ ಸಚಿವ