Advertisement
ಸಾಂತೂರು ಗುರುವ ಮುಖಾರಿ ಅವರ ಪುತ್ರರಾದ ಸದಾನಂದ, ಉದಯ ಮುಖಾರಿ ಹಾಗೂ ಅವರ ಕುಟುಂಬ ಸಂಕಷ್ಟದಲ್ಲಿದ್ದು, ಕುಸಿದ ಮನೆ ದುರಸ್ತಿಯೂ ಮಾಡಲಾಗದೆ, ಹೊಸದು ಕಟ್ಟಲೂ ಆಗದೆ ಇದ್ದಾರೆ.
ದಿ| ಗುರುವ ಮುಖಾರಿ ಅವರು ಎಲ್ಲೂರು ಗ್ರಾಮದ ಕುಕ್ಕಿಕಟ್ಟೆ ಎಂಬಲ್ಲಿ ಜಮೀನು ಹೊಂದಿದ್ದರು. ಯುಪಿಸಿಎಲ್ ಯೋಜನೆಗಾಗಿ 2015ರಲ್ಲಿ ಭೂಸ್ವಾಧೀನ ನಡೆದಿತ್ತು. ಇವರ ಸುತ್ತಲಿನ ಜಮೀನು ಭೂಸ್ವಾಧೀನಗೊಂಡಿದೆ. ಆದರೆ ಗುರುವ ಮುಖಾರಿ ಜಮೀನು ಹಾಗೆಯೇ ಇದೆ. ಭೂಸ್ವಾಧೀನ ಬಗ್ಗೆ ಅಂತಿಮ ನೋಟಿಸ್ ಕೆಐಎಡಿಬಿಯಿಂದಲೂ ಆಗಿಲ್ಲ. ಹಾಗಾಗಿ ಯುಪಿಸಿಎಲ್ ಕಡೆಯಿಂದ ಪರಿಹಾರ ನೀಡಲಾಗಿಲ್ಲ. ಮನೆಯೂ ಬಿದ್ದುದರಿಂದ ಕುಟುಂಬ ಅತಂತ್ರ ಸ್ಥಿತಿಗೆ ತಲುಪಿದೆ. ಸದಾನಂದ ಅವರು ರಿಕ್ಷಾ ಚಾಲಕರು. ಲಾಕ್‌ಡೌನ್‌ನಿಂದಾಗಿ ದುಡಿಯುವುದೂ ಸಾಧ್ಯವಿಲ್ಲದಾಗಿದೆ. “ಒಂದು ವೇಳೆ ಕಂಪೆನಿಯವರಿಗೆ ಭೂಮಿ ಬೇಡವಾದರೆ ವಾಪಸು ನೀಡಲಿ. ಪರಿಹಾರಕ್ಕಾಗಿ ಅಲೆದು ಇದ್ದ ಹಣವೂ ಖರ್ಚಾಗಿದೆ. ನಮಗೆ ಜಿಲ್ಲಾಧಿಕಾರಿ ಅಥವಾ ಸಮಾಜ ಕಲ್ಯಾಣ ಇಲಾಖೆ ಸಹಾಯವನ್ನು ಮಾಡಬೇಕಿದೆ’ ಎಂದು ಸದಾನಂದ ಅವರು ಅಳಲು ತೋಡಿಕೊಂಡಿದ್ದಾರೆ.
Related Articles
ಈ ಮೊದಲು ಪರಿಹಾರ ಹಣ ಸಿಕ್ಕರೆ ಹೊಸ ಮನೆ ಕಟ್ಟಿಕೊಳ್ಳುವುದು ಅಥವಾ ಈಗಿದ್ದ ಮನೆ ದುರಸ್ತಿಗೆ ತೀರ್ಮಾನಿಸಲಾಗಿತ್ತು. ಇತ್ತೀಚಿನ ಮಳೆಗೆ ಮನೆ ಛಾವಣಿ ಕುಸಿದಿದ್ದು, ಪರಿಸ್ಥಿತಿ ಮತ್ತಷ್ಟು ಕಷ್ಟಕರವಾಗಿದೆ. ರಿಪೇರಿಯಾಗದಿದ್ದರೆ ಮಳೆಗಾಲ ಕಷ್ಟಕರವಾಗಲಿದೆ.
Advertisement