Advertisement

ಫೆಬ್ರವರಿಯಲ್ಲಿ ದಳಪತಿ

10:45 AM Jan 17, 2018 | |

ಫೆಬ್ರವರಿ 9 ಕ್ಕೆ ಬಿಡುಗಡೆಯಾಗುವ ಚಿತ್ರಗಳ ಸಾಲಿಗೆ ಮತ್ತೂಂದು ಸೇರ್ಪಡೆಯಾಗಿದೆ. ಅದು “ದಳಪತಿ’. ಈಗಾಗಲೇ “ಸಂಹಾರ’ ಮತ್ತು “ಪ್ರೇಮಬರಹ’ ಚಿತ್ರಗಳು ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿವೆ. ಈಗ “ದಳಪತಿ’ ಕೂಡಾ ಫೆ.9 ರಂದು ತೆರೆಕಾಣಲು ಸಿದ್ಧವಾಗಿದೆ.

Advertisement

ನವೀನ್‌ ಜಿ.ಎಸ್‌. ಅವರು ನಿರ್ಮಿಸಿರುವ “ದಳಪತಿ’ ಚಿತ್ರವನ್ನು  “ಲವ್‌ ಗುರು’ ಪ್ರಶಾಂತ್‌ರಾಜ್‌ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರದ ನಾಯಕರಾಗಿ ಲವ್ಲಿಸ್ಟಾರ್‌ ಪ್ರೇಮ್‌ ಅಭಿನಯಿಸಿದ್ದಾರೆ. ಕೃತಿ ಕರಬಂದ, ಚಿಕ್ಕಣ್ಣ, ಶರತ್‌ ಲೋಹಿತಾಶ್ವ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಚರಣ್‌ರಾಜ್‌ ಸಂಗೀತ ನೀಡಿರುವ ಈ ಚಿತ್ರಕ್ಕೆ  ಸಂತೋಷ್‌ ರೈ ಪಾತಾಜೆ ಅವರ ಛಾಯಾಗ್ರಹಣವಿದೆ. ರವಿಚಂದ್ರನ್‌ ಸಂಕಲನ, ಮುರಳಿ ನೃತ್ಯ ನಿರ್ದೇಶನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ಎಮ್‌.ಎಸ್‌.ರಮೇಶ್‌ ಸಂಭಾಷಣೆ ಬರೆದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next