Advertisement

ಎರಡು ವರ್ಷಗಳ ಬಳಿಕ ಕಾಣಿಸಿಕೊಂಡ ದಲೈ ಲಾಮಾ

09:45 AM Mar 19, 2022 | Team Udayavani |

ಧರ್ಮಶಾಲ: ಭಾರತದಲ್ಲಿ ಕೊರೊನಾ ತೀವ್ರವಾದ ನಂತರ ಎರಡು ವರ್ಷಗಳ ನೊಬೆಲ್‌ ಪುರಸ್ಕೃತ ಬೌದ್ಧಗುರು ದಲೈ ಲಾಮಾ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಶುಕ್ರವಾರ ಹಿಮಾಚಲ ಪ್ರದೇಶದ ಧರ್ಮಶಾಲದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

Advertisement

ಈ ವೇಳೆ ಅವರು ಸಣ್ಣ ಭಾಷಣವನ್ನೂ ಮಾಡಿದರು. ಜೊತೆಗೆ ತ್ಸುಗ್ಲಕ್‌ಖಂಗ್‌ನಲ್ಲಿರುವ ಟಿಬೆಟ್‌ ದೇವಸ್ಥಾನದಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು. ತಮ್ಮ ಆರೋಗ್ಯ ಪರೀಕ್ಷೆಗಾಗಿ ದೆಹಲಿಗೆ ಹೋಗಬೇಕಾಗಿತ್ತು. ಆದರೆ ಪರಿಸ್ಥಿತಿ ಸುಧಾರಿಸಿರುವುದರಿಂದ ದೆಹಲಿ ಭೇಟಿಯನ್ನು ನಿಲ್ಲಿಸಿದ್ದೇನೆ ಎಂದರು.

ಇದನ್ನೂ ಓದಿ:ಸಪ್ತ ಸಾಗರ ದಾಟಿದ ಪುನೀತ್‌ ಚಿತ್ರ: ವಿದೇಶದಲ್ಲೂ ಜೇಮ್ಸ್‌ ಅಬ್ಬರ

ಸದ್ಯ ತಾವು ವೈದ್ಯರೊಂದಿಗೆ ಬಾಕ್ಸಿಂಗ್‌ ಆಡುವ ಮಟ್ಟಕ್ಕೆ ಉತ್ತಮ ಆರೋಗ್ಯ ಹೊಂದಿದ್ದೇನೆಂದು ತಮಾಷೆ ಮಾಡಿದರು. ಕಾರ್ಯಕ್ರಮದಲ್ಲಿ ಸಾವಿರಾರು ಟಿಬೆಟಿಯನ್ನರು ಪಾಲ್ಗೊಂಡಿದ್ದರು

Advertisement

Udayavani is now on Telegram. Click here to join our channel and stay updated with the latest news.

Next