Advertisement
ಇದು ಹೆಸರುಬೇಳೆಯಿಂದ ಮಾಡುವ ರೆಸಿಪಿಯಾಗಿದ್ದು, ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಯಾಕೆಂದರೆ ಹೆಸರುಬೇಳೆಯಲ್ಲಿ ಪ್ರೋಟೀನ್, ಕಬ್ಬಿಣಾಂಶ ಮತ್ತು ಪೊಟ್ಯಾಷಿಯಂ ಸಮೃದ್ಧವಾಗಿದ್ದು ಪೌಷ್ಟಿಕಾಂಶಯುಕ್ತ ಆಹಾರವಾಗಿದೆ. ಇದು ಸುಲಭವಾಗಿ ಜೀರ್ಣವಾಗುತ್ತದೆ ಇದರಿಂದ ಮಕ್ಕಳಿಗಂತೂ ತುಂಬಾನೇ ಒಳ್ಳೆಯದು.
ಹೆಸರುಬೇಳೆ-ಅರ್ಧ ಕಪ್, ಬೆಳ್ತಿಗೆ ಅಕ್ಕಿ-1ಕಪ್, ಜೀರಿಗೆ-1ಚಮಚ, ಪೆಪ್ಪರ್ ಪುಡಿ-ಸ್ವಲ್ಪ, ಅರಿಶಿನ ಪುಡಿ-1ಚಮಚ, ಈರುಳ್ಳಿ-2, ಒಣಮೆಣಸು-3, ಗರಂ ಮಸಾಲ-ಸ್ವಲ್ಪ, ಕೊತ್ತಂಬರಿ ಸೊಪ್ಪು-ಸ್ವಲ್ಪ, ಟೊಮೆಟೋ-1, ಶುಂಠಿ-ಬೆಳ್ಳುಳ್ಳಿ ಪೇಸ್ಟ್- 2ಚಮಚ, ತುಪ್ಪ-3ಚಮಚ, ಗೋಡಂಬಿ-ಸ್ವಲ್ಪ, ಕರಿಬೇವು,ರುಚಿಗೆ ತಕ್ಕಷ್ಟು ಉಪ್ಪು.
Related Articles
ಮೊದಲಿಗೆ ಅಕ್ಕಿ ಹಾಗೂ ಹೆಸರುಬೇಳೆಯನ್ನು ಚೆನ್ನಾಗಿ ನೀರಿನಲ್ಲಿ ತೊಳೆದು ಕುಕ್ಕರ್ ಗೆ ಹಾಕಿ ,ಅರಿಶಿನ ಪುಡಿ, ಸ್ವಲ್ಪ ತುಪ್ಪ , ರುಚಿಗೆ ತಕ್ಕಷ್ಟು ಉಪ್ಪು ನೀರನ್ನು ಸೇರಿಸಿ ಬೇಯಿಸಿ ಇಟ್ಟುಕೊಳ್ಳಿ. ನಂತರ ಒಂದು ಬಾಣಲೆಗೆ ತುಪ್ಪ , ಜೀರಿಗೆ ,ಒಣಮೆಣಸು, ಕರಿಬೇವು, ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಸ್ವಲ್ಪ ಹೊತ್ತು ಹುರಿಯಿರಿ ಆಮೇಲೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಗೋಡಂಬಿ, ಟೊಮೆಟೋ ಸೇರಿಸಿ ಪುನಃ ಹುರಿಯಿರಿ. ತದನಂತರ ಮೆಣಸಿನ ಪುಡಿ, ಗರಂ ಮಸಾಲ ಮತ್ತು ಪೆಪ್ಪರ್ ಪುಡಿ ಸೇರಿಸಿರಿ. ನಂತರ ಬೇಯಿಸಿಟ್ಟ ಅಕ್ಕಿ-ಹೆಸರುಬೇಳೆಯನ್ನು ಹಾಕಿ ಸ್ವಲ್ಪ ನೀರನ್ನು ಸೇರಿಸಿ ಅದಕ್ಕೆ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಕರವಾದ ದಾಲ್ ಕಿಚಡಿ ಸವಿಯಲು ಸಿದ್ಧ.
Advertisement
-ಶ್ರೀರಾಮ್ ಜಿ ನಾಯಕ್