Advertisement

ಟ್ಯಾಕ್ಸಿ ಚಾಲಕನ ಕೊಲೆ ಯತ್ನ ಪ್ರಕರಣ : ಬಾಡಿಗೆ ಪ್ರಯಾಣಕ್ಕೆ ಮುನ್ನ ಎಚ್ಚರ ಅಗತ್ಯ

02:58 PM Aug 23, 2022 | Team Udayavani |

ಮಂಗಳೂರು : ಬಾಡಿಗೆಗೆ ಟ್ಯಾಕ್ಸಿ ನಿಗದಿ ಮಾಡಿ ಅರ್ಧ ದಾರಿಯಲ್ಲಿ ಚಾಲಕರನ್ನು ಲೂಟಿ ಮಾಡುವ ಹಾಗೂ ಹಲ್ಲೆ ಮಾಡುವ ದುಷ್ಕೃತ್ಯಗಳು ಕರಾವಳಿಯಲ್ಲಿ ನಡೆಯುತ್ತಿದ್ದು, ಈ ಬಗ್ಗೆ ಚಾಲಕರು ಎಚ್ಚರಿಕೆ ವಹಿಸಬೇಕು ಎಂದು ದ.ಕ. ಜಿಲ್ಲಾ ಟ್ಯಾಕ್ಸಿಮೆನ್ಸ್‌ ಮತ್ತು ಮ್ಯಾಕ್ಸಿಕ್ಯಾಬ್‌ ಅಸೋಸಿಯೇಶನ್‌ ಸಲಹೆ ನೀಡಿದೆ.

Advertisement

ಸಂಘದ ಅಧ್ಯಕ್ಷ ದಿನೇಶ್‌ ಕುಂಪಲ ಎಂ. ಅವರು ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಆ. 20ರಂದು ಲೇಡಿಗೋಶನ್‌ ಬಳಿಯ ಪಾರ್ಕ್‌ನಿಂದ ಅಬ್ದುಲ್‌ ರಹಿಮಾನ್‌ ಎಂಬ ಟ್ಯಾಕ್ಸಿ ಚಾಲಕರ ಬಳಿ ಬಂದ ಮೂವರು ಅಪರಿಚಿತರು ಸುಬ್ರಹ್ಮಣ್ಯಕ್ಕೆ ಬಾಡಿಗೆ ಗೊತ್ತುಪಡಿಸಿದ್ದರು. ಆ ಬಳಿಕ ಅರ್ಧ ದಾರಿಯಲ್ಲಿ ಮುರುಡೇಶ್ವರಕ್ಕೆ ತೆರಳಲು ಸೂಚಿಸಿದ್ದರು. ಅಲ್ಲಿಗೆ ತೆರಳಿದ ವೇಳೆ ಹೊನ್ನಾವರ ಕಡೆಗೆ ಹೋಗುವಂತೆ ಒತ್ತಾಯಿಸಿದ್ದಾರೆ. ಚಾಲಕನಿಗೆ ಈ ಸಂದರ್ಭ ಅನುಮಾನ ಬಂದು ವಾಹನ ನಿಲ್ಲಿಸಲು ಪ್ರಯತ್ನಿಸುವ ಸಂದರ್ಭ ಟ್ಯಾಕ್ಸಿಯಲ್ಲಿದ್ದ ಪ್ರಯಾಣಿಕರು ಹಠಾತ್ತಾಗಿ ಚೂರಿಯಿಂದ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭ ಮಂಕಿ ಠಾಣೆಯ ಬಳಿ ಗಸ್ತು ನಿರತರಾಗಿದ್ದ ಪೊಲೀಸರು ಬಂದು ಚಾಲಕನನ್ನು ರಕ್ಷಿಸಿದ್ದಾರೆ. ಮಾತ್ರವಲ್ಲದೆ ಟ್ಯಾಕ್ಸಿಯಿಂದ ತಪ್ಪಿಸಿ ಓಡಿಹೋಗಲು ಯತ್ನಿಸಿದ್ದ ಮೂವರು ದುಷ್ಕರ್ಮಿಗಳನ್ನು ಸ್ಥಳೀಯರು ಹಾಗೂ ಪೊಲೀಸರು ಬೆನ್ನಟ್ಟಿ ಹಿಡಿದು ಪ್ರಕರಣ ದಾಖಲಿಸಿದ್ದಾರೆ ಎಂದರು.

ಪ್ರಯಾಣಿಕರ ಸೋಗಿನಲ್ಲಿದ್ದ ದುಷ್ಕರ್ಮಿಗಳು ತಮ್ಮ ಜತೆ ಖಾರದ ಪುಡಿ, ಹಗ್ಗ, ಚಾಕುವನ್ನು ಹೊಂದಿದ್ದರು. ಕಾರು ಚಲಾಯಿಸುತ್ತಿರುವಾಗಲೇ ಚಾಲಕ ದುಷ್ಕರ್ಮಿಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದುದ್ದನ್ನು ದಾರಿಯಲ್ಲಿ ಗಸ್ತಿನಲ್ಲಿದ್ದ ಪೊಲೀಸರು ಕಂಡು ಸಹಕರಿಸಿದ ಕಾರಣ ಚಾಲಕ ತನ್ನ ಪ್ರಾಣ ಉಳಿಸಿಕೊಳ್ಳಲು ಸಾಧ್ಯವಾಗಿದೆ. ಚಾಲಕನ ಕೈ ಹಾಗೂ ಕುತ್ತಿಗೆಗೆ ಚೂರಿ ಇರಿತದ ಗಾಯವಾಗಿದೆ. ಬಾಡಿಗೆ ಗೊತ್ತುಪಡಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ಯುವ ಈ ತಂಡ ಅಲ್ಲಿ ಚಾಲಕನಿಂದ ವಾಹನವನ್ನು ಬಲವಂತವಾಗಿ ಪಡೆದು ಪರಾರಿಯಾಗುವ ತಂಡ ಇದಾಗಿದೆ. ಇಂತಹ ಹಲವು ಘಟನೆಗಳು ಕೆಲವು ಕಡೆಯಲ್ಲಿ ನಡೆದಿವೆ ಎಂದವರು ವಿವರಿಸಿದರು.

ಇದನ್ನೂ ಓದಿ : ಪುತ್ರಿಯನ್ನು ನೀರಿನ ಟಬ್‌ನಲ್ಲಿ ಮುಳುಗಿಸಿ ಕೊಂದು, ಆತ್ಮಹತ್ಯಗೆ ಯತ್ನಿಸಿದ ತಾಯಿ

Advertisement

Udayavani is now on Telegram. Click here to join our channel and stay updated with the latest news.

Next