Advertisement

ದಕ್ಷಿಣಕನ್ನಡ ಹಾಗೂ ಉಡುಪಿಯಲ್ಲಿ ರವಿವಾರ ಕರ್ಫ್ಯೂ ಹಿಂದೆಗೆತ: ಸೀಮಿತ ಬಸ್‌ ಸಂಚಾರ

09:48 PM Aug 01, 2020 | sudhir |

ಮಂಗಳೂರು/ ಉಡುಪಿ: ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ವಿಧಿಸಲಾಗಿದ್ದ ರವಿವಾರದ ಕರ್ಫ್ಯೂವನ್ನು ಹಿಂಪಡೆದಿರುವ ಕಾರಣ ಆ. 2ರಿಂದ ರವಿವಾರಗಳಲ್ಲಿ ವ್ಯಾಪಾರ ವಹಿವಾಟಿಗೆ ಯಾವುದೇ ನಿರ್ಬಂಧ ಇರುವುದಿಲ್ಲ.

Advertisement

ಆ. 2ರಂದು ದ.ಕ. ಜಿಲ್ಲೆಯಲ್ಲಿ ಕೆಎಸ್ಸಾರ್ಟಿಸಿ ಮತ್ತು ಖಾಸಗಿ ಬಸ್‌ಗಳು ಸಂಚರಿಸಲಿವೆ. ಮಂಗಳೂರು ನಗರದಲ್ಲಿ ಸೀಮಿತ ಸಂಖ್ಯೆಯಲ್ಲಿ ಸಿಟಿ ಬಸ್‌ಗಳು ಓಡಾಡಲಿವೆ.

ಉಡುಪಿ ಜಿಲ್ಲೆಯಾದ್ಯಂತ ರವಿವಾರ ಜನರ ಓಡಾಟಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಕಂಟೈನ್‌ಮೆಂಟ್‌ ವಲಯಗಳಲ್ಲಿ ಮಾತ್ರ ಆಗಸ್ಟ್‌ 31ರ ವರೆಗೆ ಕಟ್ಟುನಿಟ್ಟು ಮುಂದುವರಿಯಲಿದೆ.

ಎಂದಿನಂತೆ ಸಂತೆ
ರವಿವಾರ ಲಾಕ್‌ಡೌನ್‌ ಇದ್ದಾಗ ಸಂತೆಕಟ್ಟೆ ಸಂತೆ ಶನಿವಾರ ನಡೆಯುತ್ತಿತ್ತು. ಆ. 2ರಿಂದ ಮತ್ತೆ ಪ್ರತೀ ರವಿವಾರ ನಡೆಯಲಿದೆ.

ಸಿಟಿ ಬಸ್‌ ಸಂಚಾರ ಇಲ್ಲ
ಪ್ರಯಾಣಿಕರು ಇರುವುದಿಲ್ಲ ಎಂಬ ಕಾರಣಕ್ಕೆ ಈ ರವಿವಾರವೂ ಸಿಟಿ ಬಸ್‌ಗಳು ಸಂಚಾರ ಮೊಟಕುಗೊಳಿಸಲಿವೆ. ರವಿವಾರ ಬಸ್‌ ಓಡಿಸುವುದರಿಂದ ಆರ್ಥಿಕ ನಷ್ಟ ಉಂಟಾಗಲಿದೆ ಎಂದು ಉಡುಪಿ ಸಿಟಿ ಬಸ್‌ ಮಾಲಕರ ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌ ತಿಳಿಸಿದ್ದಾರೆ.

Advertisement

ನರ್ಮ್ ಬಸ್‌ ಇದೆ
ನರ್ಮ್ ಹಾಗೂ ಕೆಎಸ್ಸಾರ್ಟಿಸಿ ಬಸ್‌ಗಳು ಸಾರ್ವಜನಿಕರ ಸೇವೆಗೆ ಲಭ್ಯವಿರಲಿವೆ ಎಂದು ಕೆಎಸ್ಸಾರ್ಟಿಸಿ ಉಡುಪಿ ವಿಭಾಗದ ಡಿಪೋ ಮ್ಯಾನೇಜರ್‌ ಉದಯ ಕುಮಾರ್‌ ಶೆಟ್ಟಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next