Advertisement

ದಕ್ಷಿಣ ಕನ್ನಡಿಗರ ಪ್ರತಿಭಾ ಪಲಾಯನ ನಿಲ್ಲಬೇಕು

12:42 PM Oct 01, 2018 | Team Udayavani |

ಬೆಂಗಳೂರು: ಕರಾವಳಿಗರು ಎಲ್ಲ ಕ್ಷೇತ್ರದಲ್ಲೂ ಸಾಧನೆ ಮಾಡಿದ್ದಾರೆ ಹಾಗೂ ವಿಶ್ವದ ಎಲ್ಲ ಭಾಗದಲ್ಲೂ ಇದ್ದಾರೆ. ಆದರೆ, ಅಲ್ಲಿನ ಯುವ ಜನತೆಯ ಉದ್ಯೋಗ ಪಲಾಯನ ತಪ್ಪಿಸಲು ಸಾಧ್ಯವಾಗಿಲ್ಲ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

Advertisement

ನಗರದಲ್ಲಿ ಭಾನುವಾರ ದಕ್ಷಿಣ ಕನ್ನಡಿಗರ ಸಂಘದಿಂದ ಹಮ್ಮಿಕೊಂಡಿದ್ದ ಕರಾವಳಿರತ್ನ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಯಕ್ಷಗಾನ ವಿಶ್ವಕ್ಕೆ ದಕ್ಷಿಣ ಕನ್ನಡವನ್ನು ಪರಿಚಯಿಸಿದೆ. ಈ ವಿಶಿಷ್ಟ ನೆಲದಲ್ಲಿ ಬತ್ತ, ಅಡಿಕೆ, ತೆಂಗು, ಕೊಕ್ಕೊ, ಕಾಫಿ, ಮೆಣಸು ಸಹಿತವಾಗಿ ಬಹುತೇಕ ಎಲ್ಲ ಬೆಳೆ ಬೆಳೆಯುವ ಗುಣವಿದೆ. ಮೀನು ತಿಂದವರು ಮಾತ್ರವಲ್ಲ, ಮೀನು ತಿನ್ನದ ಬುದ್ಧಿವಂತರೂ ಇಲ್ಲಿದ್ದಾರೆ ಎಂದು ಬಣ್ಣಿಸಿದರು.

ಸಂಸ್ಕೃತಿ, ಸಂಸ್ಕಾರ ಅಧಃಪತನವಾದರೆ, ಪ್ರೀತಿ, ನಂಬಿಕೆ , ವಿಶ್ವಾಸ ಕಳೆದುಕೊಂಡರೆ ಕುಟುಂಬ ನಾಶವಾಗುತ್ತದೆ. ಹೀಗಾಗಿ ಮಕ್ಕಳಿಗೆ ಸಂಸ್ಕಾರ ತುಂಬಿ ಬೆಳೆಸಬೇಕು. ಮನೆ ವರ್ಷಕ್ಕೊಮ್ಮೆ ಬರುವ ರೆಸಾರ್ಟ್‌ ಆಗಬಾರದು ಎಂಬುದರನ್ನು ಎಲ್ಲರೂ ಅರಿಯಬೇಕು ಎಂದರು. ಉಡುಪಿ ಪೇಜಾವರ ಮಠದ ಕಿರಿಯ ಯತಿ ವಿಶ್ವಪ್ರಸನ್ನ ತೀರ್ಥರು, ಸಂಘದ ಅಧ್ಯಕ್ಷ ಬಾ.ರಾಮಚಂದ್ರ ಉಪಾಧ್ಯ, ಉಪಾಧ್ಯಕ್ಷ ಡಾ.ಕೆ.ಸಿ.ಬಲ್ಲಾಳ್‌, ಕಾರ್ಯದರ್ಶಿ ವೈ. ಜಯಂತ್‌ರಾವ್‌, ಪ್ರಸ್‌ಕ್ಲಬ್‌ ಅಧ್ಯಕ್ಷ ಸದಾಶಿವ ಶೆಣೈ ಮೊದಲಾದವರು ಉಪಸ್ಥಿತರಿದ್ದರು.

ಕರಾವಳಿ ರತ್ನ ಪ್ರಶಸ್ತಿ: ರಾಜ್ಯ ಅಡ್ವೊಕೇಟ್‌ ಜನರಲ್‌ ಉದಯಹೊಳ್ಳ, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಅಧ್ಯಕ್ಷ ಸುಧಾಕಾರ ಶೆಟ್ಟಿ ಹಾಗೂ ಉದ್ಯಮಿ ಎನ್‌.ಆರ್‌. ರಾಘವೇಂದ್ರ ರಾವ್‌ ಅವರಿಗೆ ಕರಾವಳಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next