Advertisement

ದಕ್ಷಿಣ ಕನ್ನಡ: ನಿಲ್ಲದ ದುಷ್ಕರ್ಮಿಗಳ ಅಟ್ಟಹಾಸ; ಮತ್ತಿಬ್ಬರಿಗೆ ಹಲ್ಲೆ

12:27 PM Jul 11, 2017 | Team Udayavani |

ಮಂಗಳೂರು: ಬಂಟ್ವಾಳ ತಾಲೂಕಿನಲ್ಲಿ ನಡೆದ ಅಹಿತಕರ ಘಟನೆಗಳ ಬಳಿಕ ಜಿಲ್ಲೆಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿರುವ ಬೆನ್ನಲ್ಲೇ ಉಪ್ಪಿನಂಗಡಿಯಲ್ಲಿ ವ್ಯಕ್ತಿಯೊಬ್ಬನಿಗೆ ವಾಹನ ಅಡ್ಡಗಟ್ಟಿ  ಮಾರಣಾಂತಿಕವಾಗಿ ಥಳಿಸಿದ ಘಟನೆ ಮಂಗಳವಾರ ಬೆಳಗಿನ ಜಾವ ನಡೆದಿದೆ. ಉಳ್ಳಾಲದ ಜಂಕ್ಷನ್‌ನಲ್ಲಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಯುವಕನೊಬ್ಬನಿಗೆ ಇರಿದು ಪರಾರಿಯಾದ ಘಟನೆ ಮಧ್ಯಾಹ್ನ ನಡೆದಿದೆ.

Advertisement

ಉಪ್ಪಿನಂಗಡಿ ಮಠ ಇಲ್ಲಿಯ ಗ್ಯಾಸ್ ಸಿಲಿಂಡರ್ ಲೈನ್ ಸೇಲ್ ಮಾಡುವ ರಿಫಾಯಿ ನಗರ ಜೋಗಿಬೆಟ್ಟು  ನಿವಾಸಿ ಅಬ್ದುಲ್ ರಹಿಮಾನ್ (35) ಇವರು  ಎಂದಿನಂತೆ  ಬೆಳಗ್ಗೆ ಗ್ಯಾಸ್ ಸಿಲಿಂಡರ್  ಮಾರಟಕ್ಕಾಗಿ ತೆರಲಿದ್ದಾಗ ಸುಮಾರು 5:45 ರ ಸುಮಾರಿಗೆ ದುಷ್ಕರ್ಮಿಗಳಿಂದ ಮಾರಣಾಂತಿಕವಾಗಿ ಹಲ್ಲೆ ಗೊಳಗಾಗಿದ್ದಾರೆ . ಓಮ್ನಿಯಲ್ಲಿ ಬಂದ ದುಷ್ಕರ್ಮಿಗಳು ಹಿಗ್ಗಾಮುಗ್ಗಾ ಥಳಿಸಿ  ವಾಹನದ ಗಾಜು ಒಡೆದು ಪರಾರಿಯಾಗಿದ್ದಾರೆ. 

ಅಬ್ದುಲ್‌ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಉಪ್ಪಿನಂಗಡಿಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. 

ಉಳ್ಳಾಲದಲ್ಲೂ ಇರಿತ 
ಉಳ್ಳಾಲ ಜಂಕ್ಷನ್‌ನಲ್ಲಿ ಟೆಂಪೋ ಚಾಲಕನಾಗಿದ್ದ ಉಳಿಯ ನಿವಾಸಿ ಅಸ್ಟಿನ್‌ ಮೊಂತೆರೋ 
(31)ಎಂಬಾತನನ್ನು ಇರಿಯಲಾಗಿದೆ. ಇದೀಗ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರಸ್ತೆಗೆ ಮಣ್ಣ ಹಾಕುತ್ತಿದ್ದ ಆಸ್ಟಿನ್‌ ಸೈಡ್‌ ನೀಡಲಿಲ್ಲ ಎಂಬ ಕಾರಣಕ್ಕೆ ಗಲಾಟೆ ತೆಗೆದು ಇರಿಯಲಾಗಿದೆ ಎಂದು  ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಆಸ್ಟಿನ್‌ ಕೈಗೆ ಗಂಭೀರ ಗಾಯವಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. 

Advertisement

ಮಂಗಳೂರಿನ ಘಟನೆಗೆ ಕೋಮು ಬಣ್ಣ 

ಬಜ್ಪೆಯ ಎಡಪದವಿನಲ್ಲೂ ಸೋಮವಾರ ರಾತ್ರಿ ಯುವಕನೊಬ್ಬನ ಮೇಲೆ ಹಲ್ಲೆ ನಡೆದ ಬಗ್ಗೆ ವರದಿಯಾಗಿದೆ. ಆದರೆ ಇದು ಕೋಮು ಹಲ್ಲೆ ಅಲ್ಲ ಎನ್ನುವುದು ಪೊಲೀಸರ ತನಿಖೆ ವೇಳೆ ತಿಳಿದು ಬಂದಿದೆ.

ಕೆಲಸ ಮುಗಿಸಿಕೊಂಡು ಬರುತ್ತಿದ್ದ ವ್ಯಕ್ತಿಯನ್ನು ಯಾವುದೋ ಕಾರಣಕ್ಕೆ ಓಡಿಸಿಕೊಂಡು ಹೊಡೆಯಲಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಗಾಯಾಳು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲಿಯೆ ಯಾವುದೇ ಕಾರಣಕ್ಕೆ ಹಲ್ಲೆ ನಡೆದರೂ ಕೋಮು ವಿಚಾರದ ಬಣ್ಣ ನೀಡಲಾಗುತ್ತಿದೆ. ಹಲ್ಲೆ ನಡೆದ ತಕ್ಷಣ ಪೋಟೋಗಳು ಮತ್ತು ಹೆಸರುಗಳ ಸಹಿತ ಸಾಮಾಜಿಕ ತಾಣಗಳಲ್ಲಿ ಹರಿಯ ಬಿಟ್ಟು ಪರಿಸ್ಥಿತಿ ಹದಗೆಡಿಸುವ ಷಡ್ಯಂತ್ರ ನಡೆಯುತ್ತಿರುವುದು ಕಂಡು ಬರುತ್ತಿದೆ. 

ಪೊಲೀಸರು ಈ ಬಗ್ಗೆ ನಿಗಾ ಇರಿಸಿದ್ದು ಸೂಕ್ಷ್ಮವಾಗಿ ವಿಚಾರಣೆ ನಡೆಸಿ ವಾಸ್ತವವನ್ನು ಮಾಧ್ಯಮಗಳಿಗೆ ನೀಡುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next