Advertisement
ಪಡಿತರ ಚೀಟಿಗೆ ಆಧಾರ್ ಜೋಡಣೆ ಪ್ರಕ್ರಿಯೆ ಹಲವು ವರ್ಷಗಳಿಂದ ನಡೆಯುತ್ತಿದ್ದರೂ ರಾಜ್ಯದ ಹಲವೆಡೆ ಇನ್ನೂ ಬಾಕಿ ಇದೆ. ಬಾಕಿ ಇರುವ ಜಿಲ್ಲೆಗಳಲ್ಲಿ ಮುಂದಿನ ಎರಡು ತಿಂಗಳೊಳಗೆ ಪೂರ್ಣಗೊಳಿಸಬೇಕೆಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಕೆ. ಗೋಪಾಲಯ್ಯ ಅವರು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ನಡುವೆ ದ.ಕ., ಉಡುಪಿ ಜಿಲ್ಲೆಯಲ್ಲಿ ಈ ಪ್ರಕ್ರಿಯೆ ಕಳೆದ ತಿಂಗಳಲ್ಲೇ ಶೇ. 100ರಷ್ಟು ಪೂರ್ಣಗೊಂಡಿದೆ.
ದ.ಕ. ಜಿಲ್ಲೆಯಲ್ಲಿ ಒಟ್ಟು 11,03,444 ಮತ್ತು ಉಡುಪಿ ಜಿಲ್ಲೆಯಲ್ಲಿ 7,98,880 ಮಂದಿ ಪಡಿತರ ಚೀಟಿಗೆ ಆಧಾರ್ ಜೋಡಣೆ ಮಾಡಿಸಿಕೊಂಡಿದ್ದಾರೆ. ಈ ಪೈಕಿ ಮಂಗಳೂರಿನಲ್ಲಿ 3,90,524, ಬಂಟ್ವಾಳದಲ್ಲಿ 2,61,814, ಪುತ್ತೂರಿನಲ್ಲಿ 1,77,211, ಬೆಳ್ತಂಗಡಿಯಲ್ಲಿ 1,92,741, ಸುಳ್ಯದಲ್ಲಿ 81,154 ಮಂದಿ ಪಡಿತರಕ್ಕೆ ಆಧಾರ್ ಜೋಡಣೆ ಮಾಡಿಕೊಂಡವರು. ಹಳೆಯ ಪಡಿತರ ಚೀಟಿಗಳಿಗೆ ಪ್ರತ್ಯೇಕವಾಗಿ ಆಧಾರ್ ಜೋಡಿಸಿಕೊಳ್ಳಬೇಕಿತ್ತು. ಆದರೆ, ಹೊಸದಾಗಿ ಮಾಡಿಸಿಕೊಂಡವರಿಗೆ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ವೇಳೆಯೇ ಆಧಾರ್ ಜೋಡಣೆ ಮಾಡಿಸಲು ಅವಕಾಶ ಕಲ್ಪಿಸಲಾಗಿತ್ತು.
-ಡಾ| ಮಂಜುನಾಥನ್, ಜಂಟಿ ನಿರ್ದೇಶಕರು, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ, ದ.ಕ., ಉಡುಪಿ ಜಿಲ್ಲೆ